ಸಾರಾಂಶ
-ಇನ್ನು 15 ದಿನದಲ್ಲೇ ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ತಾಕೀತು,-ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ-ಜಿ.ಎಂ.ಗಂಗಾಧರಸ್ವಾಮಿ
- - - ಕನ್ನಡಪ್ರಭ ವಾರ್ತೆ, ದಾವಣಗೆರೆನಗರದಲ್ಲಿ ಪಾಲಿಕೆ, ದೂಡಾ ಗಮನಕ್ಕೆ ತಾರದೇ, ಅನುಮತಿ ಪಡೆಯದೇ, ಸುರಕ್ಷತಾ ಕ್ರಮ ಕೈಗೊಳ್ಳದೇ, ಹೋರ್ಡಿಂಗ್ಸ್ ಮತ್ತು ಫ್ಲೆಕ್ಸ್ ಅಳವಡಿಸುವುದು, ಅದರಲ್ಲೂ ಪಾದಚಾರಿ ಮಾರ್ಗ ಮತ್ತು ಪಾರ್ಕ್‌ಗಳ ಸೌಂದರ್ಯಕ್ಕೆ ಧಕ್ಕೆ ತಂದ ಕಡೆ ಅವುಗಳನ್ನು ತೆರವುಗೊಳಿಸಿ ಎಫ್ಐಆರ್ ದಾಖಲಿಸಲು ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಹಾನಗರಪಾಲಿಕೆಗೆ ಮತ್ತು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿರುವುದೂ ಗಂಭೀರ ಸಂಗತಿ. ನಗರದ ವಿವಿಧ ಪ್ರದೇಶಗಳಲ್ಲಿ ಅನಧಿಕೃತ ಜಾಹೀರಾತು, ಫಲಕ ಅಳವಡಿಸಿದವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಪಾಲಿಕೆ, ಸ್ಮಾರ್ಟ್‌ಸಿಟಿ ಲಿಮಿಟೆಡ್ ಸಹಯೋಗದಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯ, ರಸ್ತೆ, ಪಾದಚಾರಿ ಮಾರ್ಗ, ಗಿಡ ನೆಡುವುದು, ಎಸ್‌ಟಿಪಿ, ಬಸ್ಸು ಸ್ಟ್ಯಾಂಡ್ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳನ್ನು ಅಚ್ಚುಕಟ್ಟಾಗಿ ಕೈಗೊಂಡಿದೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಮನ್ನಣೆ ಗಳಿಸಿ, ಅನೇಕ ಪ್ರಶಸ್ತಿಯನ್ನೂ ಗಳಿಸಿದೆ ಎಂದಿದ್ದಾರೆ.ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ದೂಡಾಗೆ ಜಿಲ್ಲಾ ಸಚಿವರು, ಸಂಸದರು, ಶಾಸಕರ ಸೂಚನೆ, ಆಶಯದಂತೆ ಅನೇಕ ಕ್ರಿಯಾ ಯೋಜನೆ ರೂಪಿಸಿ, ಕೆಲಸ ಕೈಗೆತ್ತಿಕೊಂಡಿದ್ದೇವೆ. ಜ.12ರಂದು ಕರ್ನಲ್ ರವೀಂದ್ರನಾಥ ವೃತ್ತದಲ್ಲಿ ಅನಧಿಕೃತ ವ್ಯಕ್ತಿಗಳು ಪಾಲಿಕೆ ಮತ್ತು ದೂಡಾ ಗಮನಕ್ಕೆ ತಾರದೇ, ಹೋರ್ಡಿಂಗ್ಸ್, ಫ್ಲೆಕ್ಸ್ ಅಳವಡಿಸಿದ್ದು, ಯಾವುದೇ ಸುರಕ್ಷಿತ ಕ್ರಮ ಕೈಗೊಂಡಿರಲಿಲ್ಲ. ಪಾದಚಾರಿ ಮಾರ್ಗ, ಪಾರ್ಕ್ ಸೌಂದರ್ಯಕ್ಕೂ ಧಕ್ಕೆ ತಂದಿದ್ದಾರೆ. ಅವುಗಳನ್ನು ತೆರವುಗೊಳಿಸಿ, ಎಫ್ಐಆರ್ ದಾಖಲಿಸಲು ಸೂಚಿಸಿದ್ದೇನೆ ಎಂದಿದ್ದಾರೆ.
ನ್ಯಾಯಾಲಯಗಳಲ್ಲಿ ಸಾರ್ವಜನಿಕ ರಸ್ತೆ, ಇತರೆ ಸ್ಥಳಗಳಲ್ಲಿ ಕರ್ನಾಟಕ ಡಿಸ್‌ಫಿಗರ್‌ಮೆಂಟ್ ಆಕ್ಟ್‌ನಡಿ ಕಾನೂನು ಬಾಹಿರವಾಗಿ ಯಾವುದೇ ಕಟ್ಟಡ ನಿರ್ಮಿಸುವುದು, ಅನಧಿಕೃತ ಕೆಲಸ ಮಾಡಬಾರದಂದೆ ಆದೇಶ ನೀಡಲಾಗಿದೆ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂದಿಸಿದ ಮೊಕದ್ದಮೆಯಲ್ಲಿ ಹೈಕೋರ್ಟ್ ಬಿಬಿಎಂಪಿಗೆ ಸಂಬಂಧಿಸಿದಂತೆ ಹೋರ್ಡಿಂಗ್ಸ್ ಮತ್ತು ಜಾಹೀರಾತುಗಳನ್ನು ಪ್ರಚುರಪಡಿಸುವ ಬಗ್ಗೆ ಮತ್ತು ಅಕ್ರಮ ಜಾಹೀರಾತುಗಳನ್ನು ನಿಯಂತ್ರಿಸುವ ಸಂಬಂಧ ಸರ್ಕಾರ ಮತ್ತು ನಗರಾಭಿವೃದ್ಧಿ ಇಲಾಖೆಗೆ ಆದೇಶ ಸಹ ನೀಡಿದೆ. ಲೋಕಾಯುಕ್ತರು, ಉಪ ಲೋಕಾಯುಕ್ತರು ಸಹ ಅನೇಕ ಸೂಚನೆ, ಆದೇಶಗಳನ್ನು ಸರ್ಕಾರ, ನಗರಾಭಿವೃದ್ಧಿ ಇಲಾಖೆ ನೀಡಿದ್ದಾರೆ. ಕೆಲ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ ಎಂದಿದ್ದಾರೆ.- - -
ಬಾಕ್ಸ್ * ಕಾರ್ಯಾಚರಣೆ ನಡೆಸಿದ ಛಾಯಾಚಿತ್ರಗಳೊಂದಿಗೆ ವರದಿಗೆ ಸಲ್ಲಿಸಲು ತಾಕೀತು ಅನಧಿಕೃತ ಹೋಡಿಂಗ್ಸ್, ಫ್ಲೆಕ್ಸ್‌ಗಳಿಂದಾಗಿ ನಗರ ಸೌಂದರ್ಯ ಹಾಳಾಗುತ್ತಿದೆ. ಹಸಿರು ನ್ಯಾಯಾಧಿಕರಣ ಆದೇಶ ಉಲ್ಲಂಘಿಸಿ ಪ್ಲಾಸ್ಟಿಕ್ ಬಳಸುವುದು, ಕೆಲ ಕಡೆ ಜಾಹೀರಾತು ಫಲಕ ಅಳವಡಿಸಲು ಮರ ಕಡಿಯುತ್ತಿರುವುದೂ ವರದಿಯಾಗಿದೆ. ಅಂತಹವರ ವಿರುದ್ಧ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದೇವೆ. 15 ದಿನದೊಳಗಾಗಿ ಪಾದಾಚಾರಿ ಮಾರ್ಗ, ಸರ್ಕಲ್ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿರುವ ಅನಧಿಕೃತ ಫ್ಲಕ್ಸ್ ಮತ್ತು ಹೋಲ್ಡಿಂಗ್ಸ್ ವಿವರ ಮತ್ತು ಅವುಗಳನ್ನು ತೆರವುಗೊಳಿಸಿರುವ ಛಾಯಾಚಿತ್ರಗಳೊಂದಿಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಡಿಸಿ ತಾಕೀತು ಮಾಡಿದ್ದಾರೆ. ಅಲ್ಲದೇ, ಅನಧಿಕೃತವಾಗಿ ನಿರ್ಮಿಸಿರುವವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ವಹಿಸಬೇಕು. ಅಂತಹವರಿಂದ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದಂತೆ ದಂಡ ವಿಧಿಸಿ, ಅಷ್ಟೂ ಹಣ ವಸೂಲಿ ಮಾಡಬೇಕು. ಈ ಬಗ್ಗೆ ಕ್ರಮ ಆಗದಿದ್ದರೆ ಅಂತಹವರ ವಿರುದ್ಧ ಸಂಬಂಧಿಸಿದ ಪ್ರಾಧಿಕಾರದಲ್ಲಿ ತಕ್ಷಣ ದೂರು ದಾಖಲಿಸಿ, ಜಿಲ್ಲಾಡಳಿತಕ್ಕೆ ವರದಿ ನೀಡಬೇಕು. ಅಂತಹ ಅನಧಿಕೃತ ವ್ಯಕ್ತಿಗಳಿಗೆ ಅನುಮತಿ ಮತ್ತು ಸಹಕರಿಸಿದ ಸರ್ಕಾರಿ ಅಧಿಕಾರಿಗಳ ಮೇಲೆಯೂ ಶಿಸ್ತು ಕ್ರಮ ಜರುಗಿಸಲು ಇಲಾಖೆ ವಿಚಾರಣೆ ನಡೆಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಇಲಾಖೆಗಳ ಅಧಿಕಾರಿಗಳಿಗೆ ಆದೇಶಿದ್ದಾರೆ.- - -
* ಟಾಪ್ ಕೋಟ್ ದಾವಣಗೆರೆ ಪಾಲಿಕೆಯಲ್ಲಿ ಜ.8ರಂದು ನಡೆದ ಬಜೆಟ್ ಪೂರ್ವಭಾವಿಯಾಗಿ ಸಂಘ-ಸಂಸ್ಥೆಗಳು, ಸಾರ್ವಜನಿಕರ ಸಭೆಯಲ್ಲಿ ಅನಧಿಕೃತ ಬೃಹತ್ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಮೇಯರ್, ಆಯುಕ್ತರಿಗೆ ಒತ್ತಾಯಿಸಿದ್ದೆವು. ಇದೀಗ ಜಿಲ್ಲಾಧಿಕಾರಿ ಜಿಲ್ಲಾ ಕೇಂದ್ರದ ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ 15 ದಿನ ಗಡುವು ನೀಡಿದ್ದು ಸ್ವಾಗತಾರ್ಹ ಕ್ರಮವಾಗಿದೆ- ಕೆ.ಜಿ.ಯಲ್ಲಪ್ಪ, ರಾಜ್ಯಾಧ್ಯಕ್ಷ, ವಿಶ್ವವ ಕರವೇ
- - - -15ಕೆಡಿವಿಜಿ6: ದಾವಣಗೆರೆ ಮಹಾನಗರದಲ್ಲಿ ಫ್ಲೆಕ್ಸ್, ಹೋಲ್ಡಿಂಗ್ಸ್‌ಗಳ ಹಾವಳಿ ಮಿತಿ ಮೀರುತ್ತಿರುವುದು.-15ಕೆಡಿವಿಜಿ7: ಜಿ.ಎಂ.ಗಂಗಾಧರಸ್ವಾಮಿ, ದಾವಣಗೆರೆ ಜಿಲ್ಲಾಧಿಕಾರಿ