ಮೊಗರಹಳ್ಳಿಯ ಶ್ರೀರಾಘವೇಂದ್ರಸ್ವಾಮಿ ಮಠದ ಬಳಿ ಸಾರಿಗೆ ಬಸ್ ಕೋರಿಕೆ ನಿಲುಗಡೆಗೆ ಆದೇಶ..!

| Published : Nov 17 2024, 01:16 AM IST

ಮೊಗರಹಳ್ಳಿಯ ಶ್ರೀರಾಘವೇಂದ್ರಸ್ವಾಮಿ ಮಠದ ಬಳಿ ಸಾರಿಗೆ ಬಸ್ ಕೋರಿಕೆ ನಿಲುಗಡೆಗೆ ಆದೇಶ..!
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ನಗರ ಬಸ್ ನಿಲ್ದಾಣ ಮತ್ತು ಕೆಆರ್‌ಎಸ್, ಪಾಲಹಳ್ಳಿ ಮಾರ್ಗದಲ್ಲಿ ಬರುವ ಮೊಗರಹಳ್ಳಿಯಲ್ಲಿರವ ಶ್ರೀರಾಘವೇಂದ್ರಸ್ವಾಮಿ ಮಠದ ಬಳಿ ಭಕ್ತಾದಿಗಳು ಮತ್ತು ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೋರಿಕೆ ನಿಲುಗಡೆ ನೀಡಲು ಆದೇಶವಿದ್ದರೂ ಸಹ ಪ್ರಯಾಣಿಕರನ್ನು ಹತ್ತಿಸಿ/ಇಳಿಸದೆ ಕಾರ್ಯಾಚರಣೆ ಮಾಡುತ್ತಿರುವ ಸಂಬಂಧ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಿಂದ ದೂರು ಬಂದಿದ್ದರಿಂದ ಈ ಆದೇಶ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಮೊಗರಹಳ್ಳಿಯ ಶ್ರೀರಾಘವೇಂದ್ರಸ್ವಾಮಿ ಮಠದ ಬಳಿ ಕೋರಿಕೆ ನಿಲುಗಡೆ ನೀಡುವಂತೆ ಕ.ರಾ.ರ.ಸಾ ನಿಗಮ ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶಿಸಿದ್ದಾರೆ.

ಮೈಸೂರು ನಗರ ಬಸ್ ನಿಲ್ದಾಣ ಮತ್ತು ಕೆಆರ್‌ಎಸ್, ಪಾಲಹಳ್ಳಿ ಮಾರ್ಗದಲ್ಲಿ ಬರುವ ಮೊಗರಹಳ್ಳಿಯಲ್ಲಿರವ ಶ್ರೀರಾಘವೇಂದ್ರಸ್ವಾಮಿ ಮಠದ ಬಳಿ ಭಕ್ತಾದಿಗಳು ಮತ್ತು ಸಾರ್ವಜನಿಕ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕೋರಿಕೆ ನಿಲುಗಡೆ ನೀಡಲು ಆದೇಶವಿದ್ದರೂ ಸಹ ಪ್ರಯಾಣಿಕರನ್ನು ಹತ್ತಿಸಿ/ಇಳಿಸದೆ ಕಾರ್ಯಾಚರಣೆ ಮಾಡುತ್ತಿರುವ ಸಂಬಂಧ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಿಂದ ದೂರು ಬಂದಿದ್ದರಿಂದ ಈ ಆದೇಶ ಮಾಡಿದ್ದಾರೆ.

ತಮ್ಮ ಘಟಕಗಳಿಂದ ಮೇಲ್ಕಂಡ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ಎಲ್ಲಾ ವಾಹನಗಳು ಕಡ್ಡಾಯವಾಗಿ ಮೊಗರಹಳ್ಳಿ ಬಳಿ ಇರುವ ಶ್ರೀರಾಘವೇಂದ್ರಸ್ವಾಮಿ ಮಠದ ಬಳಿ ಕೋರಿಕೆ ನಿಲುಗಡೆ ನೀಡಲು ಆದೇಶಿಸಿದ್ದಾರೆ.

ಜೊತೆಗೆ ಈ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಚಾಲನಾ ಸಿಬ್ಬಂದಿಗೆ ದೂರು ಮರುಕಳಿಸದಂತೆ ಕರ್ತವ್ಯ ನಿರ್ವಹಿಸಲು ಘಟಕ ವ್ಯವಸ್ಥಾಪಕರಿಂದ ಸೂಕ್ತ ತಿಳಿವಳಿಕೆ ನೀಡಿ ಆದೇಶಿಸಿದ್ದಾರೆ.

25ನೇ ವರ್ಷದ ಗಿರಿಜಾ ಕಲ್ಯಾಣ, ಬೆಳದಿಂಗಳ ದೀಪಾರತಿ ಕಾರ್ಯಕ್ರಮ

ಶ್ರೀರಂಗಪಟ್ಟಣ:

ಪಟ್ಟಣದ ಹೊರವಲಯದ ಡಿಎಂಎಸ್ ಚಂದ್ರವನ ಆಶ್ರಮದಲ್ಲಿ 25ನೇ ವರ್ಷದ ಗಿರಿಜಾ ಕಲ್ಯಾಣ ಹಾಗೂ 144ನೇ ಬೆಳದಿಂಗಳ ದೀಪಾರತಿ ಕಾರ್ಯಕ್ರಮ ನಡೆಯಿತು.

ಆಶ್ರಮದ ಪೀಠಾಧ್ಯಕ್ಷ ಡಾ. ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು. ಬೆಂಗಳೂರಿನ ಧನಲಕ್ಷ್ಮಿಬಿ.ಕೆ. ಹಾಗೂ ತುಂಗಶೀಲ ಮಹದೇವ ವೈ.ಎಸ್ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು.

ಈ ವೇಳೆ ಬೆಂಗಳೂರಿನ ಶ್ರೀ ಶಿರಡಿ ಸಾಯಿ ಭಿಕ್ಷಾಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಿ ಶ್ರೀನಿವಾಸ ಗುರೂಜಿ ಹಾಗೂ ಮಹಾರಾಷ್ಟ್ರದ ಅಕ್ಕಲ್‌ಕೋಟೆಯ ಪುರುಷೋತ್ತಮ್ ಮಹಾರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.