ಸಾರಾಂಶ
ಕನ್ನಡಪ್ರಭ ವಾರ್ತೆ ಜಗಳೂರು
ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಸಂಘಟನೆ ಅಗತ್ಯವಾಗಿದ್ದು, ತಾಲೂಕು ಮಾದಿಗ ಸಮಾಜ ಒಂದಾಗುವ ಮೂಲಕ ನಮ್ಮ ಹಕ್ಕುಗಳನ್ನು ಪಡೆಯೋಣ ಎಂದು ತಾಲೂಕು ಮಾದಿಗ ಸಮಾಜ ಅಧ್ಯಕ್ಷ ಜಿ.ಎಚ್.ಶಂಭುಲಿಂಗಪ್ಪ ಹೇಳಿದರು.ಪಟ್ಟಣದ ಆದಿಜಾಂಬವ ವಿದ್ಯಾರ್ಥಿನಿಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.30ರಂದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ಮಾದಿಗ ಸಮಾಜದಿಂದ ಸಮಾಜದ ಮುಖಂಡರು, ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಕೆ.ಎಚ್.ಮುನಿಯಪ್ಪ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ , ಚಿತ್ರದುರ್ಗ ಸಂಸದರು ಗೋವಿಂದ ಕಾರಜೋಳ, ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ , ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ , ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯ ಆದಿಜಾಂಬವ ಅಬಿವೃದ್ಧಿ ನಿಗಮ ಅಧ್ಯಕ್ಷರು ಮುಂಡರಗಿ ನಾಗರಾಜ್, ಬಾಬು ಜಗಜೀನವ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ ಜಿ.ಎಸ್.ಮಂಜುನಾಥ್ ಅವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದು ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಅಂಬೇಡ್ಕರ್ ಪುತ್ತಳಿ ನರ್ಮಾಗಣ ಸಂರಕ್ಷಣಾ ಸಮಿತಿ ಅಧ್ಯಕ್ಷರು ಪೂಜಾರ್ ಸಿದ್ದಪ್ಪ ಮಾತನಾಡಿ, ನಮ್ಮ ಸಮಾಜದ ಸನ್ಮಾನ ಮತ್ತು ಸಂಘಟನೆ ಸಭೆಗೆ ಸಮುದಾಯದ ಪೂಜ್ಯ ಗುರುಗಳಾದ ಶ್ರೀ ಕೋಡಿಹಳ್ಳಿ ಷಡಕ್ಷರಿ ಮುನಿಸ್ವಾಮೀಜಿ, ಡಾ.ಬಸವಮೂರ್ತಿಮಾದರ ಚನ್ನಯ್ಯ ಸ್ವಾಮಿಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.ಹಿರಿಯ ಮುಖಂಡ ಓಬಣ್ಣ ಮಾತನಾಡಿ, ನಮ್ಮ ಸಮಾಜ ಸಮಸ್ಯೆಗಳು ಹಾಗೂ ಸೌಕರ್ಯ ಒದಗಿಸಿಕೊಡುವಂತೆ ಮತ್ತು ಒಳ ಮೀಸಲಾತಿ ಜಾರಿಗೆ ಮಾಡುವ ಸಂಬಂಧ ಅನೇಕ ವಿಚಾರಗಳನ್ನು ಚರ್ಚೆ ಮಾಡಲು ರಾಜ್ಯ ನಾಯಕರು ಆಗಮಿಸುತ್ತಿದ್ದು, ಇದೊಂದು ದಿಕ್ಸೂಚಿ ಸಮಾವೇಶ ಆಗಲಿದೆ. ಮಾದಿಗ ಸಮಾಜದ ಜೊತೆಗೆ ಸಹೋದರ ಸಮಾಜಗಳ ಮುಖಂಡರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲ್ಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡ ಕ್ಯಾಂಪ್ ಶಿವಣ್ಣ , ವಕೀಲ ಹನುಮಂತಪ್ಪ, ಚಂದ್ರಪ್ಪ, ಹನುಮಂತಪ್ಪ, ರುದ್ರೇಶ್, ಕುಬೇಂದ್ರಪ್ಪ, ಮಾರುತಿ, ಬಿ.ಸತೀಶ್, ಮಂಜುನಾಥ್, ಸಿ.ಎಂ.ಹೊಳೆ ಮಾರುತಿ, ರಾಜಪ್ಪ, ಬಸವರಾಜು ಸೇರಿದಂತೆ ಇತರರು ಇದ್ದರು.