ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸರ್ಕಾರದಿಂದ ಸವಲತ್ತು ಪಡೆಯಲು ಹಾಗೆಯೇ ನೌಕರರ ವಿರುದ್ಧ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳ ವಿರುದ್ಧ ಹೋರಾಟ ಮಾಡಲು ಸಂಘಟನೆ ಅನಿವಾರ್ಯ ಎಂದು ರಾಷ್ಟ್ರೀಯ ಅಂಚೆ ನೌಕರರ ಸಂಘದ ಕರ್ನಾಟಕ ವಲಯದ 3ನೇ ವರ್ಗದ ವಲಯ ಕಾರ್ಯದರ್ಶಿ ಖಂಡೋಜಿರಾವ್ ಹೇಳಿದರು.ರಾಷ್ಟ್ರೀಯ ಅಂಚೆ ನೌಕರರ ಸಂಘ ಮೂರನೇ ವರ್ಗ, ಪೋಸ್ಟ ಮ್ಯಾನ್ & ಎಂಟಿಎಸ್ ಮತ್ತು ಗ್ರಾಮೀಣ ಅಂಚೆ ನೌಕರರ ಸಂಘ ಚಿತ್ರದುರ್ಗ ವಿಭಾಗದ ವತಿಯಿಂದ ಭಾನುವಾರ ನಗರದ ತರಾಸು ರಂಗಮಂದಿರದಲ್ಲಿ ನಡೆದ 35ನೇ ಜಂಟಿ ದೈವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.
ಅಂಚೆ ಇಲಾಖೆಯಲ್ಲಿ ಹೂಸದಾಗಿ ಕೆಲಸಕ್ಕೆ ಸೇರಿರುವ ಯುವ ಜನಾಂಗಕ್ಕೆ ಸಂಘ, ಸಂಘಟನೆಯ ಬಗ್ಗೆ ಮಾಹಿತಿ ಇಲ್ಲ ನಮ್ಮ ಸಂಘದಲ್ಲಿನ ಹಿರಿಯರು ಸಂಘದ ಮತ್ತು ಸಂಘದ ಚಟುವಟಿಕೆಯ ಬಗ್ಗೆ ತಿಳಿಸಿ ಕೊಡುವುದರ ಮೂಲಕ ಅವರನ್ನು ಸಂಘಟನೆಗೆ ಬರಮಾಡಿಕೊಳ್ಳಬೇಕಿದೆ ಎಂದರು.ಅಂಚೆ ನೌಕರರ ಸಂಘವನ್ನು ಕಟ್ಟಲು ನಾವುಗಳು ರಾಜ್ಯವ್ಯಾಪ್ತಿ ಪ್ರವಾಸ ಮಾಡಿದ್ದೇವೆ, ಜಿಲ್ಲಾವಾರು ಸಮ್ಮೇಳನಗಳನ್ನು ನಡೆಸಿದ್ದೇವೆ ಈ ಮೂಲಕ ಸಂಘಟನೆಯನ್ನು ಗಟ್ಟಿಗೊಳಿಸಿದ್ದೇವೆ. ಆದರೆ ಇಂದಿನ ದಿನಮಾನದಲ್ಲಿ ಇಲಾಖೆಗೆ ಹೊಸದಾಗಿ ಕೆಲಸಕ್ಕೆ ಸೇರಿರುವ ಯುವ ಜನತೆಗೆ ಸಂಘ, ಸಂಘಟನೆ ಎಂದರೆ ಏನು ಎಂಬುದರ ಬಗ್ಗೆ ತಿಳಿದಿಲ್ಲ, ಸಂಘ ಎಂದರೆ ಏನು ಎಂದು ಪ್ರಶ್ನೆ ಮಾಡಿ ಅದರಿಂದ ಏನು ಉಪಯೋಗ ಎನ್ನುತ್ತಿದ್ದಾರೆ. ಆದರೆ ಕೆಲಸದಲ್ಲಿ ಏನಾದರೂ ತೊಂದರೆಯಾದಾಗ ಸಂಘದ ಮೂಲಕ ಹೊಂದರೆ ಸಮಸ್ಯೆಯನ್ನು ಶೀಘ್ರವಾಗಿ ಇತ್ಯರ್ಥ ಮಾಡಲು ಸಾಧ್ಯವಾಗುತ್ತದೆ ಎಂಬ ಅರಿವು ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜ ಸೇವಕಿ ಶ್ರೀಮತಿ ವೀಣಾ ಮಾತನಾಡಿ ಚಿತ್ರದುರ್ಗದಲ್ಲಿ ಓಳ್ಳೆಯ ಸಂಘಟನೆ ಇದೆ. ಇದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ, ನಿಮ್ಮ ಸಂಘದಲ್ಲಿನ ಸದಸ್ಯರಿಗೆ ಉತ್ತಮವಾದ ಸೌಲಭ್ಯವನ್ನು ನೀಡಿ, ಮಕ್ಕಳ ಶಿಕ್ಷಣಕ್ಕೆ ಸಹಾಯವನ್ನು ಮಾಡಿ, ವ್ಯವಹಾರವನ್ನು ಮಾಡುವವರಿಗೆ ಸಾಲದ ರೂಪದಲ್ಲಿ ಸಹಾಯವನ್ನು ಮಾಡುವುದರ ಮೂಲಕ ಅವರ ಆರ್ಥಿಕ ಪ್ರಗತಿಗೆ ಕಾರಣರಾಗಿ ಎಂದು ಕರೆ ನೀಡಿದರು.ಅಂಚೆ ಅಧೀಕ್ಷಕರಾದ ಕೆ.ಆರ್.ಉಷಾ ದೈವಾರ್ಷಿಕ ಸಮ್ಮೇಳನವನ್ನು ಉದ್ಘಾಟನೆ ಮಾಡಿದರು. ರಾಷ್ಟ್ರೀಯ ಅಂಚೆ ನೌಕರರ ಸಂಘ, 3ನೇ ವರ್ಗ, ಅಧ್ಯಕ್ಷರಾದ ಟಿ.ಎಸ್.ಶಿವಮೂರ್ತಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು. 4ನೇ ವರ್ಗದ ಅಧ್ಯಕ್ಷರಾದ ಸತೀಶ್ ಸಹಾಯಕ ಜನರಲ್ ಸೆಕ್ರೆಟರಿ ಎಚ್, ಚಿತ್ರಶೇಖರ್, ಅಧ್ಯಕ್ಷರಾದ ಕೆ.ಟಿ.ತಿಮ್ಮಾರೆಡ್ಡಿ (ಕರೀಕೆರೆ) ರಾಷ್ಟ್ರೀಯ ಅಂಚೆ ನೌಕರರ ಸಂಘದ ವಲಯ ಕಾರ್ಯದರ್ಶಿ ಎಂ.ಪಿ. ಚಿತ್ರಸೇನ, 4ನೇ ವರ್ಗದ ಕರ್ನಾಟಕ ವಲಯದ ಸಂಘಟನಾ ಕಾರ್ಯದರ್ಶಿ, ಮೈಲನಹಳ್ಳಿ ನಾಗರಾಜ್.ಎಂ.ಐ. ವಿಭಾಗೀಯ ಕಾರ್ಯದರ್ಶಿ ಎನ್.ಎ.ಶ್ರೀನಿವಾಸ್, ಸಹ ಕಾರ್ಯದರ್ಶಿ ಮಾರುತಿ ಆರ್, ಖಂಜಾಚಿ ರಾಜೇಶ್ವರಿ ಟಿ, ರಾಷ್ಟ್ರೀಯ ಅಂಚೆ ನೌಕರರ ಸಂಘದ ಅಧ್ಯಕ್ಷರಾದ ಮಂಜುನಾಥ್, ಕಾರ್ಯದರ್ಶಿ ಪ್ರೇಮ ಕುಮಾರ್ ಚಾರಿ, ಸಹ ಕಾರ್ಯದರ್ಶಿ ಶಶಿಕಾಂತ ಯಾದವ್, ಖಂಜಾಚಿ ಶ್ರೀನಿವಾಸ್ ಮೂರ್ತಿ, ಗ್ರಾಮೀಣ ಅಂಚೇ ನೌಕರರ ಸಂಘದ ಅಧ್ಯಕ್ಷರಾದ ಅಜಯ್ ಕುಮಾರ್, ಕಾರ್ಯದರ್ಶಿ ಪಾಂಡುರಂಗರೆಡ್ಡಿ, ಸಹ ಕಾರ್ಯದರ್ಶಿ ನಂದಿನಿ, ಖಂಜಾಚಿ ರಾಜು ಭಾಗವಹಿಸಿದ್ದರು.
ಈ ಸಮ್ಮೇಳನದಲ್ಲಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನೌಕರರಿಗೆ ಹಾಗೂ 2023-24 ನೇ ಇಸವಿಯಲ್ಲಿ ಇಲಾಖಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಡ್ತಿ ಹೊಂದಿದ ನೌಕರರನ್ನು ಸನ್ಮಾನಿಸಲಾಯಿತು.