ಸೇವಾ ಭಾವನೆಯಿಂದ ಕರ್ತವ್ಯ ನಿರ್ವಹಿಸಿದಾಗ ಸಂಸ್ಥೆಯ ಉನ್ನತಿ ಸಾಧ್ಯ: ಫ್ರೆಡ್ ಮಸ್ಕರೇನ್ಹಸ್

| Published : Mar 24 2025, 12:32 AM IST

ಸೇವಾ ಭಾವನೆಯಿಂದ ಕರ್ತವ್ಯ ನಿರ್ವಹಿಸಿದಾಗ ಸಂಸ್ಥೆಯ ಉನ್ನತಿ ಸಾಧ್ಯ: ಫ್ರೆಡ್ ಮಸ್ಕರೇನ್ಹಸ್
Share this Article
  • FB
  • TW
  • Linkdin
  • Email

ಸಾರಾಂಶ

ಬೆಳ್ಮಣ್‌ನಲ್ಲಿ ಎಂಸಿಸಿ ಬ್ಯಾಂಕ್‌ನ ಶಾಖೆಯ ಉದ್ಘಾಟನಾ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಕಾಪು

ಗ್ರಾಹಕರಿಗೆ ಒಳ್ಳೆಯ ಸೇವೆ ದೊರಕಿದರೆ ಅಂತಹ ಬ್ಯಾಂಕ್ ಬೆಳೆಯುತ್ತದೆ. ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದಾಗ ದೇವರ ಆಶೀರ್ವಾದವೂ ಲಭಿಸಿ ಸಂಸ್ಥೆಯ ಉನ್ನತಿಯಾಗುತ್ತದೆ ಎಂದು ಬೆಳ್ಮಣ್ ಸಂತ ಜೋಸೆಫ್ ಧರ್ಮಕೇಂದ್ರದ ಪ್ರಧಾನಗುರುಗಳಾದ ಫ್ರೆಡ್ ಮಸ್ಕರೇನ್ಹಸ್ ಹೇಳಿದರು.

ಅವರು ಇತ್ತೀಚೆಗೆ ಬೆಳ್ಮಣ್‌ನಲ್ಲಿ ಎಂಸಿಸಿ ಬ್ಯಾಂಕ್‌ನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ವಹಿಸಿದ್ದರು. ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಬ್ಯಾಂಕ್ ಎಂದರೆ ವಿಶ್ವಾಸ, ವೇಗವನ್ನು ಪಡೆದಿದೆ. ರಾಷ್ಟ್ರೀಕೃತ ಬ್ಯಾಂಕ್‌ಗೆ ಪೈಪೋಟಿ ನೀಡುವ ರಿತಿಯಲ್ಲಿ ಬೆಳವಣಿಗೆ ಪಡೆದಿದೆ ಎಂದರು.ದೇವ್ ದಿತಾ ವೃದ್ಧಾಶ್ರಮ ಹಾಗೂ ಹ್ಯೂಮನಿಟಿ ಸಂಸ್ಥೆಗೆ ಸಹಾಯಧನ ನೀಡಲಾಯಿತು. ಈ ಸಂದರ್ಭ ಯೋಗಪಟು ಹಾಗೂ ಚಿತ್ರಕಲಾವಿದ ಉದ್ಭವ ದೇವಾಡಿಗ, ಹ್ಯುಮಾನಿಟಿ ಟ್ರಸ್ಟಿ ನವೀನ್ ಶೆಣೈ, ಅಂತಾರಾಷ್ಟ್ರೀಯ ಪವರ್ ಲಿಪ್ಟರ್ ಅಕ್ಷತಾ ಪೂಜಾರಿ ಬೋಳ, ಸಮಾಜ ಸೇವಕಿ ರೆಮಿಡಿಯಾ ಡಿಸೋಜ ಬೆಳ್ಮಣ್, ರಾಜಕೀಯ ಮುಂದಾಳು ಜಿತೇಂದ್ರ ಫುರ್ಟಾಡೊ ಪಲಿಮಾರು ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದೈಜಿ ವರ್ಲ್ಡ್ ಮೀಡಿಯಾ ನೆಟ್‌ವರ್ಕ್‌ನ ಸಂಸ್ಥಾಪಕ ವಾಲ್ಟರ್ ನಂದಳಿಕೆ ಭದ್ರತಾ ಕೊಠಡಿ ಉದ್ಘಾಟಿಸಿದರು. ಬೆಳ್ಮಣ್ ಗ್ರಾ.ಪಂ. ಅಧ್ಯಕ್ಷೆ ರಾಮೇಶ್ವರಿ ಎಂ. ಶೆಟ್ಟಿ, ಅನಿವಾಸಿ ಭಾರತೀಯ ಉದ್ಯಮಿ ರೋನ್ ರೊಡ್ರಿಗಸ್, ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.ಶಾಖಾ ಪ್ರಬಂಧಕಿ ಶೈನಿ ಲಸ್ರಾದೊ ವಂದಿಸಿದರು. ಬ್ಯಾಂಕ್‌ನ ಉಪಾಧ್ಯಕ್ಷ ಜೆರಾಲ್ಡ್ ಡಿಸಿಲ್ವ ಸ್ವಾಗತಿಸಿದರು. ಹೆಲ್ಸನ್ ಹಿರ್ಗಾನ ನಿರೂಪಿಸಿದರು.