ಸಾರಾಂಶ
ಧಾರವಾಡ:ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ ಅರ್ಥ ಮಾಡಿಕೊಳ್ಳುವ ಕಾರ್ಯವಾಗಲಿ ಎಂದು ಸಾಧನಾ ಸಂಸ್ಥೆಯ ಸಂಸ್ಥಾಪಕಿ ಡಾ. ಇಸಬೆಲಾ ಝೇವಿಯರ್ ಹೇಳಿದರು.ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್, ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ವಿವಿಧ ಸಂಘಟನೆಗಳ ಜತೆಗೆ ಗ್ರಾಮೀಣ ಮಹಿಳೆಯರಿಗಾಗಿ ನಗರದ ಇನ್ಸ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್‌ನಲ್ಲಿ ಆಯೋಜಿಸಿದ್ದ ಮಹಿಳಾ ಸಬಲೀಕರಣ ಮತ್ತು ಕೌಶಲ್ಯಾಧಾರಿತ ತರಬೇತಿಗೆ ಚಾಲನೆ ನೀಡಿದ ಅವರು, ಮಹಿಳೆ ತನ್ನದೇ ಯೋಚನೆಗಳನ್ನು ಒಳಗೊಂಡಂತೆ ಜೀವನದ ವಿವಿಧ ಅಂಶಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಸ್ವಾತಂತ್ರ್ಯ ಹೊಂದಿದ್ದು, ಸಮಾಜ ಅವಕಾಶ ಕೊಡಬೇಕು ಎಂದರು.ಗ್ರಾಮ ವಿಕಾಸ ಸಂಸ್ಥೆ ಅಧ್ಯಕ್ಷ ಜಗದೀಶ ಶೇಖರ ನಾಯಕ, ಮಹಿಳಾ ಸಬಲೀಕರಣ ಮತ್ತು ಸಮಾಜದಲ್ಲಿನ ಸ್ಥಾನಮಾನಗಳ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಅಧ್ಯಕ್ಷರಾದ ಸಂಗೀತಾ ಬಾಗೇವಾಡಿ ವಹಿಸಿದ್ದರು. ನಂತರ ರೀಟಾ ಡಿಸೋಜ ಮಹಿಳೆಯರ ಆರೋಗ್ಯ ಹಾಗೂ ಸ್ವಾಸ್ಥ್ಯ, ರಾಜು ಪಾಟೀಲ ಸಣ್ಣ ಆರ್ಥಿಕತೆಯೊಂದಿಗೆ ಜೀವನ ನಿರ್ವಹಣೆ, ಪಿ.ವಿ. ಹಿರೇಮಠ ನೀರಿನ ಮಹತ್ವ, ಪರಿಸರದ ಕುರಿತು, ಕೆವಿಜಿ ಬ್ಯಾಂಕಿನ ಉಲ್ಲಾಸ ಗುನಗಾ ಬ್ಯಾಂಕಿನಿಂದ ಸಾಲ ಹಾಗೂ ವಿಮೆಗಳ ಕುರಿತು ಮಾಹಿತಿ ನೀಡಿದರು. ಡಾ. ಕೋಮಲ್ ಕುಲಕರ್ಣಿ ಸರ್ವೈಕಲ್ ಕ್ಯಾನ್ಸರ್ ಬಗ್ಗೆ ತಿಳಿವಳಿಕೆಯ ನೀಡಿದರು. ಆದಿತಿ ಕನವಳ್ಳಿ ಮಾರ್ಕೆಟಿಂಗ್ ಮಾಡುವುದರ ಉಪನ್ಯಾಸ ನೀಡಿದರು.
ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಅಧ್ಯಕ್ಷ ಸುನೀಲ ಬಾಗೇವಾಡಿ ಸ್ವಾಗತಿಸಿದರು. ಕವಿವಿಯ ಯುವ ರೆಡ್ ಕ್ರಾಸ್ ಘಟಕದ ಸದಸ್ಯ ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು. ಶರಯು ನಾಯಕ ವಂದಿಸಿದರು. ರಂಜಿತಾ ಜಾಧವ, ಚಿನ್ನಶ್ರೀ ಬೆಳ್ಳಕ್ಕಿ, ಶೀತಲ್ ಲದ್ವಾ, ಇಂಜಿನಿಯರ್ ಸಂಜಯ ಕಬ್ಬೂರ್ ಇದ್ದರು.