ಪುರುಷರಷ್ಟೇ ಮಹಿಳೆಯರೂ ಸಮಾನರು: ಶಕುಂತಲಾ ಪಾಟೀಲ್

| Published : Mar 19 2024, 12:45 AM IST

ಪುರುಷರಷ್ಟೇ ಮಹಿಳೆಯರೂ ಸಮಾನರು: ಶಕುಂತಲಾ ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರು ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಜನವಾದಿ ಮಹಿಳಾ ಸಂಘಟನೆ ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಮಹಿಳೆಯರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ಮಹಿಳೆಯರು ಮತ್ತು ಪುರುಷರು ಸಮಾನ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಶಕುಂತಲಾ ಪಾಟೀಲ್ ಹೇಳಿದರು.

ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರಿಗೆ ಅತ್ಯುನ್ನತ ಸ್ಥಾನಮಾನ, ಗೌರವ, ಹಕ್ಕು, ಕರ್ತವ್ಯ ನೀಡುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ. ಕಾನೂನಿನ ನೆರವು ಹಾಗೂ ಶಿಕ್ಷಣಗಳನ್ನು ಮಹಿಳೆಯರು ಪಡೆಯಬೇಕು ಎಂದರು.

ಜಿಲ್ಲಾ ಘಟಕದ ಕಾರ್ಯದರ್ಶಿ ವರಲಕ್ಷ್ಮಿ, ಸಮುದಾಯದ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ ಮಾತನಾಡಿದರು. ಕಾರ್ಯಕ್ರಮ ಪೂರ್ವದಲ್ಲಿ ಮಹಿಳೆಯರಿಗೆ ವಿವಿಧ ರಂಗೋಲಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಧಾನ್ಯ ಗುರುತಿಸುವಿಕೆ, ಮ್ಯೂಸಿಕ್ ಚಾರ್ ಆಟವಾಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಗ್ರಾಮದ ಹಿರಿಯರಿಗೆ ಹಾಗೂ ಗ್ರಾಮ ಪಂಚಾಯಿತಿಯ ಮಹಿಳಾ ಸದಸ್ಯರಿಗೆ ಸನ್ಮಾನಿಸಲಾಯಿತು.

ಮುಖಂಡರಾದ ಬಸವಂತರಾಯಗೌಡ ಕಲ್ಲೂರ, ಎಚ್.ವಿರೂಪಾಕ್ಷಗೌಡ, ನಾಗೇಶಗೌಡ, ಉಮಾದೇವಿ, ಪರಿಮಳ, ಮಹಾದೇವಿ ಭಾವಿಕಟ್ಟಿ, ಯಂಕಮ್ಮ, ಮಲ್ಲಮ್ಮ, ಸವಿತಾ, ಹಂಪಮ್ಮ ಮಡಿವಾಳ, ದೇವಮ್ಮ ಭೋವಿ, ಸುಮಂಗಲಾ ಜಾಗಲಕಲ್, ಶರಣಮ್ಮ ಕುರಬರ, ನಿರ್ಮಲಾ ಎಚ್, ನಿರ್ಣಾಯಕಿ ಜಲಜಾಕ್ಷಿ ಹಾಗೂ ಶೈಲಶ್ರೀ ಸೇರಿದಂತೆ ಕಲ್ಲೂರ ಹಾಗೂ ಸುತ್ತಮುತ್ತಲಿನ ಗ್ರಾಮದ 200ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.