ರಾಜ್ಯ ಸರ್ಕಾರ ಈಗಾಗಲೇ ಗೋಹತ್ಯೆಯನ್ನು ತಡೆಯಲು ಕಾನೂನುಗಳನ್ನು ಜಾರಿಗೆ ತಂದಿದೆ. ಆದಾಗ್ಯೂ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಮನವಿಯಲ್ಲಿ ತಿಳಿಸಲಾಗಿದೆ.

ಲಕ್ಷ್ಮೇಶ್ವರ: ರಂಜಾನ್ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡುವುದನ್ನು ತಡೆಯಬೇಕು ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಹಾಗೂ ವಿವಿಧ ಹಿಂದೂ ಸಂಘಟನೆಗಳು ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿವೆ.ರಂಜಾನ್ ಹಬ್ಬಗಳ ಸಮಯದಲ್ಲಿ, ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಗೋಸಾಗಾಟ ಮತ್ತು ಗೋಹತ್ಯೆ ನಡೆಯುತ್ತಿರುವ ಸುದ್ದಿಗಳು ಹರಿದಾಡುತ್ತಿವೆ. ಕೆಲವು ಸ್ಥಳಗಳಲ್ಲಿ ರಸ್ತೆ ಬದಿಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಗಳ ವಧೆ ನಡೆಯುವುದು ಕಂಡುಬಂದಿದ್ದು, ಇದರಿಂದ ಸಾರ್ವಜನಿಕ ಆರೋಗ್ಯ, ಪರಿಸರ ಹಾಗೂ ಕಾನೂನು- ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಈಗಾಗಲೇ ಗೋಹತ್ಯೆಯನ್ನು ತಡೆಯಲು ಕಾನೂನುಗಳನ್ನು ಜಾರಿಗೆ ತಂದಿದೆ. ಆದಾಗ್ಯೂ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಮನವಿಯಲ್ಲಿ ತಿಳಿಸಲಾಗಿದೆ.

ಈ ವೇಳೆ ಯಲ್ಲಪ್ಪ ಲಿಂಗಶೆಟ್ಟಿ, ಗಿರೀಶ ಅಗಡಿ. ಎಂ.ಎಸ್. ಕುಂದಗೋಳ, ಐ.ಜಿ. ಪಾಟೀಲ, ನಾಗಪ್ಪ ಪಾದಗಟ್ಟಿ, ಈಶ್ವರ ಗದಗ, ಶಂಕ್ರಪ್ಪ ಅಮರಶೆಟ್ಟಿ, ಮಹಾಂತೇಶ ಮುಳಗುಂದ, ಮಂಜುಳಾ ಮುಳಗುಂದ, ಈರಣ್ಣ ಪೂಜಾರ, ದುಂಡಪ್ಪ ಸವಣೂರು, ಯಲ್ಲಪ್ಪಗೌಡ ಪಾಟೀಲ, ಅಭಿಷೇಕ ಉಮಚಗಿ, ಶಿವಶಂಕರ ಬ್ಯಾಡಗಿ, ಸುಮಾ ಕುಂಬಾರ, ಬೇಬಿ ರುದ್ರಶೆಟ್ಟಿ ಇದ್ದರು. ಇಂದು ಮಾರುತಿ ದೇವರ ಹೊಂಡ ತುಳುಕಿಸುವ ಕಾರ್ಯಕ್ರಮ

ಗದಗ: ಯುಗಾದಿ ಹಬ್ಬದ ಪ್ರಯುಕ್ತ ತಾಲೂಕಿನ ಲಕ್ಕುಂಡಿ ಗ್ರಾಮದ ಪ್ಯಾಟಿ ಹನುಮಂತ ದೇವರ ಹೊಂಡ ತುಳುಕಿಸುವ ಕಾರ್ಯಕ್ರಮ ಮಾ. 19ರಂದು ಸಂಜೆ 4ಕ್ಕೆ ಸಂಭ್ರಮದಿಂದ ಜರುಗಲಿದೆ.ದಾನ ಚಿಂತಾಮಣಿ ಅತ್ತಿಮಬ್ಬೆ ಮಹಾದ್ವಾರ ಹತ್ತಿರ ಮಾರುತಿ ದೇವಸ್ಥಾನದ ಮುಂದೆ 10 ಅಡಿ ಆಳದಲ್ಲಿ ತೆಗದಿರುವ ಹೊಂಡವನ್ನು ತುಂಬಿಸಿ ಕೇಸರಿ ಬಣ್ಣವನ್ನು ಮಿಶ್ರಣ ಮಾಡಲಾಗುವ ಹೊಂಡದಲ್ಲಿ ದೇವಸ್ಥಾನದ ಪೂಜಾರಿ ತುಳುಕಿಸಿದ ನಂತರ ಗ್ರಾಮದ ಯುವಕರು ತುಳುಕಿಸಿ ಸಂಭ್ರಮಿಸುವರು. ಇದಕ್ಕೂ ಪೂರ್ವ ಗ್ರಾಮದ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಲಾಗುವುದು. ನಂತರ ಕುಂಬಾರ ಮನೆಗೆ ಹೋಗಿ ಐರಾಣಿ ತಂದು ಹೊಂಡಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುವುದು.

ಜಾನಪದ: ಯುಗಾದಿ ಪ್ರಯುಕ್ತ ಸಂಜೆ 7ಕ್ಕೆ ಗೀ.. ಗೀ..ಪದ ಕಾರ್ಯಕ್ರಮ ಜರುಗುವುದು. ರಾಜ್ಯ ಜಾನಪದ ಕಲಾವಿದ ಬಸವರಾಜ ಹಡಗಲಿ ಮತ್ತು ಬೆಳಗಾವಿ ಜಿಲ್ಲೆಯ ಯಲ್ಲವ್ವ ಸಾಲಮನಿ ತಂಡದವರಿಂದ ಸವಾಲಿನ ಗೀ ಗೀ ಪದಗಳು ನಡೆಯಲಿವೆ. ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ. ಕೊಟ್ಟೂರೇಶ್ವರ ಶ್ರೀಗಳು, ಅಲ್ಲಮಪ್ರಭುದೇವರ ಮಠದ ಸಿದ್ಧಲಿಂಗೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಶಂಕ್ರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.