ಸಂಘಸಂಸ್ಥೆಗಳೂ ಸಾಧರಕನ್ನು ಗೌರವಿಸಲಿ: ಸತೀಶ್

| Published : Nov 04 2024, 12:16 AM IST / Updated: Nov 04 2024, 12:17 AM IST

ಸಂಘಸಂಸ್ಥೆಗಳೂ ಸಾಧರಕನ್ನು ಗೌರವಿಸಲಿ: ಸತೀಶ್
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಹುಟ್ಟಿದಾಗಿನಿಂದ ಸಾಯುವ ತನಕ ಬದುಕಿನ ಜಂಜಾಟದಲ್ಲಿ ನಾವು ಮುಳುಗಿರುತ್ತೇವೆ. ಆದರೆ ನಮ್ಮ ನಡುವೆ ಎಷ್ಟೋ ಮಹನೀಯರು ಸಮಾಜಕ್ಕಾಗಿ ಸೇವೆ ಸಲ್ಲಿಸಿರುತ್ತಾರೆ. ಅಂತಹವರನ್ನು ಗುರುತಿಸುವ ಕೆಲಸ ಆಗಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸತೀಶ್ ಹೇಳಿದರು.

ರಾಮನಗರ: ಹುಟ್ಟಿದಾಗಿನಿಂದ ಸಾಯುವ ತನಕ ಬದುಕಿನ ಜಂಜಾಟದಲ್ಲಿ ನಾವು ಮುಳುಗಿರುತ್ತೇವೆ. ಆದರೆ ನಮ್ಮ ನಡುವೆ ಎಷ್ಟೋ ಮಹನೀಯರು ಸಮಾಜಕ್ಕಾಗಿ ಸೇವೆ ಸಲ್ಲಿಸಿರುತ್ತಾರೆ. ಅಂತಹವರನ್ನು ಗುರುತಿಸುವ ಕೆಲಸ ಆಗಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸತೀಶ್ ಹೇಳಿದರು.

ನಗರದಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಆಯೋಜಿಸಿದ್ದ ಕನ್ನಡ ನಿತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿದ್ದಾರೆ. ಎಲ್ಲರನ್ನೂ ಸರ್ಕಾರವೇ ಗುರುತಿಸುವುದು ಕಷ್ಟ. ಹಾಗಾಗಿ ಸಂಘ-ಸಂಸ್ಥೆಗಳು ಅಂತಹವರನ್ನು ಗೌರವಿಸಬೇಕು. ಆ ನಿಟ್ಟಿನಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ತೆರೆಮರೆಯ ಅನೇಕ ಮಹನೀಯರಿಗೆ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್.ಕೆ.ಬೈರಲಿಂಗಯ್ಯ ಮಾತನಾಡಿ, ಇವತ್ತಿನ ದಿನಗಳಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಕೂಡ ಪ್ರಶಸ್ತಿಗಳನ್ನು ಅರ್ಜಿ ಪಡೆದೆ ನೀಡುವ ಪದ್ದತಿ ಇದೆ. ಪ್ರಭಾವಿಗಳು ನಾನಾ ಕಾರಣಗಳಿಂದ ಪ್ರಶಸ್ತಿಗಳನ್ನು ಪಡೆಯುತ್ತಿರುತ್ತಾರೆ. ಆದರೆ ತೆರೆಮರೆಯಲ್ಲೇ ಉಳಿದು ಹೋಗಿರುವ ಅನೇಕ ಸಾಧಕರು, ಸಮಾಜಸೇವಕರು, ವಿವಿಧ ಕ್ಷೇತ್ರದ ಮಹನೀಯರನ್ನು ಹೀಗೆ ಸಂಘ-ಸಂಸ್ಥೆಗಳು ಗೌರವಿಸಬೇಕಾಗಿದೆ ಎಂದರು.

ರಂಗಭೂಮಿ ಕಲಾವಿದರಾದ ಕವಣಾಪುರ ಪ್ರಭಾಕರ್, ರೋಟರಿ ಸ್ಕಿಲ್‌ಸಿಟಿ ಅಧ್ಯಕ್ಷ ಶ್ರೀಧರ್, ಸಂಸ್ಕೃತಿ ಸೌರಭ ಟ್ರಸ್ಟ್ ಅಧ್ಯಕ್ಷ ಡಾ. ರಾ.ಬಿ.ನಾಗರಾಜ್ ಮಾತನಾಡಿದರು. ಹೈಕೋರ್ಟ್ ವಕೀಲರಾದ ಕೆ.ರಾಮ್‌ಸಿಂಗ್, ವಾಸವಿ ವಿದ್ಯಾನೀಕೇತನ ಟ್ರಸ್ಟ್ ಕಾರ್ಯದರ್ಶಿ ಕೆ.ಆರ್. ನಾಗೇಶ್, ಭಾರತ್ ವಿಕಾಸ ಪರಿಷತ್ ಅಧ್ಯಕ್ಷರಾದ ರಾ.ಶಿ. ಬಸವರಾಜು ಉಪಸ್ಥಿತರಿದ್ದರು.

ನೂಪುರ ಸಂಗೀತದ ವಿಜೇಂದ್ರ ಪ್ರಸಾದ್ ಸಾರಥ್ಯದಲ್ಲಿ ಕಲಾವಿದರು ನಡೆಸಿಕೊಟ್ಟ ಗಾಯನ ಗಮನ ಸೆಳೆಯಿತು. ಹಿರಿಯ ಗಾಯಕರಾದ ಮೈಸೂರು ಕೃಷ್ಣಮೂರ್ತಿ, ಎಸ್.ರಘುನಾಥ್, ಬೇಲೂರು ಕುಮಾರ್, ಶ್ರೀ ವಾಸವಿ ಮಹಿಳಾ ಮಂಡಳಿ ಸದಸ್ಯರು ಗಾಯನ ನಡೆಸಿಕೊಟ್ಟರು. ಕುಮಾರಿ ಪುಣ್ಯಶ್ರೀ, ಕುಮಾರಿ ಹೊನ್ನಶ್ರೀ, ಕುಮಾರಿ ಜಾಹ್ನವಿಸಿಂಗ್ ಭರತನಾಟ್ಯ ಪ್ರದರ್ಶನ ನೀಡಿದರು. ಮಾಸ್ಟರ್ ನಾಗದೀಶಾಲ್ ಕೀಬೋರ್ಡ್ ವಾದನ ನುಡಿಸಿದರು.

ಬಾಕ್ಸ್ ...........

ಸಮಾಜ ಸೇವರಿಗೆ ಅಭಿನಂದನೆ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಮಾಜ ಸೇವಕರಾದ ಜನತಾ ನಾಗೇಶ್, ರೋಟರಿ ಸ್ಕಿಲ್ ಸಿಟಿ ಅಧ್ಯಕ್ಷರಾದ ಶ್ರೀಧರ್, ರಾಮನಗರ ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷರಾದ ಬಿ.ಟಿ. ಚಿಕ್ಕಪುಟ್ಟೇಗೌಡ , ಕೆ.ಎಂ.ಎಫ್. ಸಹಾಯಕ ನಿರ್ದೇಶಕರಾದ ಜೆ. ನವೀನ್ ಕುಮಾರ್, ಆಚಾರ್‍ಯ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಸಿ.ನಾಗರಾಜ್, ಕನಕಪುರ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕಾ ಪ್ರಕಾಶ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಬು ವಿ ಕುಂಬಾಪುರ, ಪ್ರಗತಿಪರ ರೈತರಾದ ಸಿ.ಮಹೇಶ್, ಗುಂಗರಹಳ್ಳಿ ಶಾಸ್ತ್ರೀಯ ಸಂಗೀತ ವಿದುಷಿ ಶಶಿಕಲಾ ರಾಮಣ್ಣ, ವಿಶ್ವಮಾನವ ಹಕ್ಕುಗಳ ರಾಜ್ಯ ಕಾನೂನು ಸಲಹೆಗಾರರಾದ ರಘುವೀರ್, ಕನ್ನಡ ಪರ ಹೋರಾಟಗಾರರಾದ ಕನ್ನಡ ಭಾಸ್ಕರ್, ರಾಜ್ಯಮಟ್ಟದ ಕಬ್ಬಡ್ಡಿ ಆಟಗಾರರಾದ ಎ.ಶ್ರೀನಿವಾಸ್, ರಂಗಭೂಮಿ ಕಲಾವಿದರು ಹಾಗೂ ಆರ್ಚಕರಾದ ಎಸ್. ರುದ್ರೇಶ್ ಶ್ಯಾನುಭೋಗನಹಳ್ಳಿ ಅವರನ್ನು ಗೌರವಿಸಲಾಯಿತು. ಟೇಕ್ವಾಂಡೋ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ವಿಜೇತೆ ಕುಮಾರಿ ಶಾನ್ವಿಗೆ ರೇಷ್ಮೆ ನಾಡಿನ ಹೆಮ್ಮೆಯ ಕುವರಿ ಬಿರುದು ನೀಡಿ ಗೌರವಿಸಲಾಯಿತು.

3ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಕನ್ನಿಕಾ ಮಹಲ್‌ನಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ಆಯೋಜಿಸಿದ್ದ ಕನ್ನಡ ನಿತ್ಯೋತ್ಸವ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.