ಸಾರಾಂಶ
ಸಂಘ, ಸಂಸ್ಥೆಗಳು ಗ್ರಾಮೀಣ ಜನರ ಅಗತ್ಯ ಹೊಂದಿರುವ ಕೆಲಸ ಮತ್ತು ಗ್ರಾಮಗಳ ಅಭಿವೃದ್ಧಿ ಕಡೆ ಗಮನಹರಿಸಿದಾಗ ಗ್ರಾಮದ ಅಭಿವೃದ್ಧಿ ಜೊತೆಗೆ ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲ ಸದಸ್ಯರು ಕೆಲಸ ನಿರ್ವಹಿಸಬೇಕು .
ಕನ್ನಡಪ್ರಭ ವಾರ್ತೆ ರಾವಂದೂರು
ಸಂಘ ಸಂಸ್ಥೆಗಳು ಸಾಮಾಜಿಕ ಕಳಕಳಿ ಹೊಂದಿ ಕೆಲಸ ನಿರ್ವಹಿಸಬೇಕು ಎಂದು ಜಿಪಂ ಮಾಜಿ ಸದಸ್ಯ ಆರ್.ಎಸ್. ಚಿಕ್ಕವೀರಪ್ಪ ತಿಳಿಸಿದರು.ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ಮಾನಸ ಸೇವಾ ಸಾಂಸ್ಕೃತಿಕ ಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸಂಘ, ಸಂಸ್ಥೆಗಳು ಗ್ರಾಮೀಣ ಜನರ ಅಗತ್ಯ ಹೊಂದಿರುವ ಕೆಲಸ ಮತ್ತು ಗ್ರಾಮಗಳ ಅಭಿವೃದ್ಧಿ ಕಡೆ ಗಮನಹರಿಸಿದಾಗ ಗ್ರಾಮದ ಅಭಿವೃದ್ಧಿ ಜೊತೆಗೆ ಸಂಘ ಸಂಸ್ಥೆಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲ ಸದಸ್ಯರು ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಆರ್.ಎಸ್. ಕುಮಾರ್ ವಿಜಯ್ ಹಾಗೂ ಮಾಜಿ ಅಧ್ಯಕ್ಷ ಕೆಲ್ಲೂರು ಎ. ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ಆರ್.ವಿ. ವಿಶ್ವನಾಥ್, ಎಚ್. ಸ್ವಾಮಿ, ಆರ್.ಎಸ್. ಸುರೇಶ್ , ಹೊಲದಪ್ಪ, ಆರ್.ಎಸ್. ವಿಜಯಕುಮಾರ್, ಡಾ.ಆರ್.ಡಿ. ಸತೀಶ್, ರಮೇಶ್ ಮೂರ್ತಿ, ವಿಜೇಂದ್ರ, ಎಚ್.ಡಿ. ರವೀಶ್, ಆರ್.ಎಸ್. ಉದಯಕುಮಾರ್, ಪಿ.ಎನ್. ಚಂದ್ರಶೇಖರ್, ವಿಶ್ವೇಶ್ವರಯ್ಯ ಇದ್ದರು.