ರೈತರನ್ನು ಸಂಘಟಿಸಿ ಹೋರಾಟ ಮನೋಭಾವನೆ ಬೆಳೆಸಿ: ಎಚ್.ಆರ್.ನವೀನ್ ಕುಮಾರ್

| Published : Mar 26 2024, 01:07 AM IST

ರೈತರನ್ನು ಸಂಘಟಿಸಿ ಹೋರಾಟ ಮನೋಭಾವನೆ ಬೆಳೆಸಿ: ಎಚ್.ಆರ್.ನವೀನ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಬಡ ರೈತರು ಮತ್ತು ಕೃಷಿ ಕೂಲಿಕಾರರ ಒಗ್ಗಟ್ಟಿನ ಆಧಾರದ ಮೇಲೆ ಇಡೀ ರೈತ ಸಮೂಹ ನಿಂತಿದೆ. ಆ ಮೂಲಕ ರೈತ ಚಳವಳಿಯ ಗುರಿ ಮುಟ್ಟಲು ಸಾಧ್ಯ. ಕೆಲವೇ ಕೆಲವು ಆಸಕ್ತ ವ್ಯಕ್ತಿಗಳಿಗೆ ಸಂಘಟನೆಯನ್ನು ಸೀಮಿತಗೊಳಿಸದೇ ವಿಶಾಲಗೊಳಿಸಬೇಕು. ಸಾಮೂಹಿಕ ಸದಸ್ಯತ್ವವೇ ಸಂಘಟನೆಯ ಜೀವಾಳವಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ರೈತರನ್ನು ಸಂಘಟಿಸಿ ಅವರಲ್ಲಿ ಹೋರಾಟ ಮನೋಭಾವನೆ ಬೆಳೆಸುವ ಅಗತ್ಯ ಇದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಹಣಕಾಸು ಕಾರ್ಯದರ್ಶಿ ಎಚ್.ಆರ್.ನವೀನ್ ಕುಮಾರ್ ತಿಳಿಸಿದರು.

ತಾಲೂಕಿನ ಶಿವನಸಮುದ್ರ (ಬ್ಲಫ್)ನಲ್ಲಿ ಕರ್ನಾಟ ಪ್ರಾಂತ ರೈತ ಸಂಘ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದಲ್ಲಿ ಮಾತನಾಡಿ, ಸಾಮೂಹಿಕ ಸದಸ್ಯತ್ವವೇ ಸಂಘಟನೆಯ ಜೀವಾಳವಾಗಿದೆ. ಪ್ರತಿಯೊಂದು ಗ್ರಾಮದಲ್ಲಿ ರೈತರನ್ನು ಸಂಘಟಿಸಲು ಸಾಮೂಹಿಕ ಸದಸ್ಯತ್ವದ ವಿಧಾನ ಉತ್ತಮವಾಗಿದೆ ಎಂದರು.

ಬಡ ರೈತರು ಮತ್ತು ಕೃಷಿ ಕೂಲಿಕಾರರ ಒಗ್ಗಟ್ಟಿನ ಆಧಾರದ ಮೇಲೆ ಇಡೀ ರೈತ ಸಮೂಹ ನಿಂತಿದೆ. ಆ ಮೂಲಕ ರೈತ ಚಳವಳಿಯ ಗುರಿ ಮುಟ್ಟಲು ಸಾಧ್ಯ. ಕೆಲವೇ ಕೆಲವು ಆಸಕ್ತ ವ್ಯಕ್ತಿಗಳಿಗೆ ಸಂಘಟನೆಯನ್ನು ಸೀಮಿತಗೊಳಿಸದೇ ವಿಶಾಲಗೊಳಿಸಬೇಕು ಎಂದು ಕರೆ ನೀಡಿದರು.

ನಮ್ಮನ್ನು ಆಳುವ ವರ್ಗಗಳು ರೈತ ಸಮುದಾಯವನ್ನು ತನ್ನ ಶೋಷಣೆಯ ಉದ್ದೇಶಕ್ಕಾಗಿ ಮೌಢ್ಯಕ್ಕೆ ತಳ್ಳುವ ಪದ್ಧತಿ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಸಮಸ್ಯೆಗಳಿಗೆ ಹಣೆಬರಹ ಮತ್ತು ಕರ್ಮ, ಸಿದ್ಧಾಂತಗಳೆ ಕಾರಣ ಎಂದುಕೊಂಡಿರುವ ರೈತ ಸಮುದಾಯವನ್ನು ಜಾಗೃತಗೊಳಿಸಬೇಕು. ರೈತರ ಸಂಕಷ್ಟಕ್ಕೆ ಕಾರಣವಾಗಿರುವ ನೀತಿಗಳ ವಿರುದ್ಧ ಪ್ರಬಲವಾಗಿ ಚಳವಳಿಯನ್ನು ಸಂಘಟಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಸಂಘದ ಮದ್ದೂರು ತಾಲೂಕು ಘಟಕದ ಅಧ್ಯಕ್ಷ ಎಸ್.ವಿಶ್ವನಾಥ್, ಮಳವಳ್ಳಿ ತಾಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್, ಪ್ರಮುಖರಾದ ಟಿ.ಯಶವಂತ್, ಎನ್.ಲಿಂಗರಾಜಮೂರ್ತಿ ಭಾಗವಹಿಸಿದ್ದರು.

ಜಿಲ್ಲಾ ಸಮಿತಿಗೆ ಆಯ್ಕೆ:

ಪ್ರಾಂತ ರೈತ ಸಂಘದ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ ರಾಜ್ ತಿಳಿಸಿದರು.

ಸಂಘದ ಸಹ ಸಂಚಾಲಕರಾಗಿ ಎನ್.ಲಿಂಗರಾಜಮೂರ್ತಿ, ಎಂ.ಇ.ಮಹದೇವು, ಎಸ್.ವಿಶ್ವನಾಥ್, ಟಿ.ಆರ್.ಸಿದ್ದೇಗೌಡ ಹಾಗೂ ಜಿಲ್ಲಾ ಸಮಿತಿ ಸದಸ್ಯರಾಗಿ ಪ್ರಮೀಳಾ, ಗುರುಸ್ವಾಮಿ, ರಾಮಣ್ಣ, ಸತೀಶ್ ಅವರನ್ನು ಆಯ್ಕೆಯಾಗಿದ್ದಾರೆ ಎಂದರು.