ಸಾರಾಂಶ
ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು, ತಂದೆ ಹಾಗೂ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ
- ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
------ಕನ್ನಡಪ್ರಭ ವಾರ್ತೆ ಮೈಸೂರು
ಟೀಂ ಮೈಸೂರು ಪ್ರತಿಷ್ಠಾನದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನದ ಪ್ರಯುಕ್ತ "ನಿಮಗೆ ತಿಳಿದಂತೆ ಸ್ವಾಮಿ ವಿವೇಕಾನಂದರು " ಎಂಬ ವಿಷಯ ಕುರಿತು ಸ್ಥಳದಲ್ಲಿ ಪ್ರಬಂಧ ಬರೆಯುವ ಸ್ಪರ್ಧೆಯನ್ನು ನಗರದ ಲಕ್ಷ್ಮಿಪುರಂನ ಗೋಪಾಲಸ್ವಾಮಿ ಶಿಶುವಿಹಾರ ಮತ್ತು ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.7ನೇ ತರಗತಿಯಿಂದ ಹತ್ತನೇ ತರಗತಿ ಹಾಗೂ ಪಿಯುಸಿಯಿಂದ ಪದವಿವರೆಗೆ ಎರಡು ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ ನೀಡಲಾಗಿತ್ತು. ವಿವಿಧ ಶಾಲೆ, ಕಾಲೇಜುಗಳಿಂದ ಸುಮಾರು 80 ವಿದ್ಯಾರ್ಥಿಗಳು ಆಸಕ್ತಿಯಿಂದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು, ತಂದೆ ಹಾಗೂ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ತಿಳಿಸಿ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶುಭವಾಗಲೆಂದು ಹಾರೈಸಿದರು.ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಗೋಪಾಲಸ್ವಾಮಿ ಸಂಸ್ಥೆಯ ಮಂಜುನಾಥ, ಟೀಂ ಮೈಸೂರು ಪ್ರತಿಷ್ಟಾನದ ಹಿರಿಯಣ್ಣ ಹಾಗೂ ಗಣೇಶ್ ಇದ್ದರು.
ಪ್ರಬಂಧ ಸ್ಪರ್ಧೆಯ ತೀರ್ಪುಗಾರರಾಗಿ ಜ್ಞಾನಗಂಗಾ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಪರಮೇಶ ಕೆ. ಉತ್ತನಹಳ್ಳಿ ಹಾಗೂ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ಕನ್ನಡ ಉಪನ್ಯಾಸಕ ಸಿ.ಎಸ್. ರಾಘವೇಂದ್ರ ಭಾಗವಹಿಸಿದ್ದರು.ಒಂದು ಗಂಟೆಯ ಕಾಲಾವಕಾಶದಲ್ಲಿ ವಿದ್ಯಾರ್ಥಿಗಳು ಉತ್ಸುಕರಾಗಿ ಭಾಗವಹಿಸಿ ಸ್ವಾಮಿ ವಿವೇಕಾಂದರ ಬಗ್ಗೆ ಅಚ್ಚುಕಟ್ಟಾಗಿ ಬರೆದಿದ್ದಾರೆ.
ತಂಡದ ಸದಸ್ಯ ಪ್ರಸನ್ನರಾಜ್ ನಿರೂಪಿಸಿದರು. ತಂಡದ ಸದಸ್ಯರಾದ ಯಶವಂತ, ಲಿಂಗರಾಜು, ಅನಿಲ್ ಜೈನ್, ಹೇಮಂತ್, ಸುಮಂತ್, ಚೇತನ್, ಹರೀಶ್, ಬಸವರಾಜ್, ಸಹನಾ, ಕಾವೇರಿ, ಸುಕೃತ, ವಿಸ್ಮಯ, ಅಭಿಷೇಕ್ ಮಂಜುನಾಥ, ಯತೀಶ್, ಅಮರ್, ಬಾಲು, ಕೃಷ್ಣ,ಮುರಳಿ, ಮನೋಹರ್ ಇದ್ದರು.