ರಕ್ತದಾನ ಮನುಷ್ಯನ ದೇಹ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ, ಹೃದಯಾಘಾತ ಹಾಗೂ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಪ್ರಮುಖ ಆರೋಗ್ಯ ವಿಧಾನವಾಗಿದೆ.

ಕನ್ನಡಪ್ರಭ ವಾರ್ತೆ ಮುಂಡರಗಿ

ರಕ್ತದಾನ ಮನುಷ್ಯನ ದೇಹ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ, ಹೃದಯಾಘಾತ ಹಾಗೂ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಪ್ರಮುಖ ಆರೋಗ್ಯ ವಿಧಾನವಾಗಿದೆ. ಇಂತಹ ಮಹತ್ತರ ಕಾರ್ಯವನ್ನು ಗಣೇಶೋತ್ಸವದ ಅಂಗವಾಗಿ ಹಮ್ಮಿಕೊಂಡ ಮುಂಡರಗಿ ತಾಪಂ ನಡೆ ಆದರಣೀಯ ಎಂದು ಗದಗ ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಹೇಳಿದರು.

ಸ್ಥಳೀಯ ತಾಪಂ ಆವರಣದಲ್ಲಿ ಗಣೇಶೋತ್ಸವ ನಿಮಿತ್ತ ತಾಲೂಕು ಆಸ್ಪತ್ರೆ ಹಾಗೂ ಬಸವೇಶ್ವರ ರಕ್ತ ಕೇಂದ್ರ ಗದಗ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯವಂತ ಯುವಕರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇದರಿಂದ ಆರೋಗ್ಯದ ಮೇಲೆ ಯಾವುದೇ ತೊಂದರೆ ಆಗುವುದಿಲ್ಲ. ಜೊತೆಗೆ ಹೊಸಚೈತನ್ಯ ಮೂಡಿಸುತ್ತದೆ. ಈ ಬಗ್ಗೆ ಪ್ರತಿ ಯೊಬ್ಬರು ಅರಿತುಕೊಂಡು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದರು.

ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ರಕ್ತದಾನದಿಂದ ಸಂಕಷ್ಟದಲ್ಲಿರುವ ವ್ಯಕ್ತಿಗಳ ಜೀವ ಉಳಿಸಬಹುದಾಗಿದೆ. ಹೀಗಾಗಿ ರಕ್ತದಾನ ಅತ್ಯಂತ ಶ್ರೇಷ್ಟವಾಗಿದೆ ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ಬೆಣ್ಣೆ ಮಾತನಾಡಿ, ತಾಪಂ ವತಿಯಿಂದ ಪ್ರತಿವರ್ಷ ಗಣೇಶೋತ್ಸವದಲ್ಲಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಗ್ಯಾರಂಟಿ ಸಮಿತಿ ಸದಸ್ಯರಾದ ವಿಶ್ವನಾಥ ಪಾಟೀಲ, ಪುಲಕೇಶಿಗೌಡ ಪಾಟೀಲ, ರಾಜೇಸಾಬ ಬೆಟಗೇರಿ, ಕೆಡಿಪಿ ಸಮಿತಿ ಸದಸ್ಯ ಎಂ.ಯು. ಮಕಾಂದಾರ ಮಾತನಾಡಿದರು.

ಆರೋಗ್ಯ ಶಿಬಿರದಲ್ಲಿ ನೇತ್ರ ತಪಾಸಣೆ, ಇಸಿಜಿ, ಎನ್‌ಸಿಡಿ ಪರೀಕ್ಷಾ ವಿಭಾಗ, ಕ್ಷಯರೋಗ ಪರೀಕ್ಷಾ ವಿಭಾಗ, ಮಧುಮೇಹ, ರಕ್ತದೊತ್ತಡ ಸೇರಿದಂತೆ ಇತರೆ ಆರೋಗ್ಯ ಪರೀಕ್ಷಾ ವಿಧಾನಗಳ ಮೂಲಕ ನೂರಾರು ಜನ ಆರೋಗ್ಯ ತಪಾಸಣೆಗೆ ಒಳಗಾದರು‌.

ಸಹಾಯಕ ನಿರ್ದೇಶಕ ವಿಶ್ವನಾಥ ಹೊಸಮನಿ, ಪ್ರವೀಣ ಗೋಣೆಮ್ಮನವರ, ತಾಲೂಕ ವೈದ್ಯಾಧಿಕಾರಿ ಡಾ. ಕೀರ್ತಿಹಾಸ ಎಚ್.ಪಿ., ಲಕ್ಷ್ಮಣ ಪೂಜಾರ, ನಾಗರಾಜ ಹಳ್ಳಿಕೇರಿ, ಮಹೇಶ ಅಲ್ಲಿಪೂರ, ರಿಯಾಜ ಖತೀಬ, ಶಂಕರ ಸರವೆ, ವಸಂತ ಗೋಕಾಕ, ಮಹೇಶ ಕಳಸದ, ಮಂಜುಳಾ ಪಾಟೀಲ, ಫಕ್ರುದ್ಧಿನ ನದಾಫ, ಸಂತೋಷ ಮೇಟಿ, ವೀರೇಶ ಅವಾರಿ, ಮಹಾಂತೇಶ ತಳವಾರ, ಪ್ರೇಮಾ ಹಟ್ಟಿ, ಶಶಿಧರ ಹೊಂಬಳ, ಬಸವರಾಜ ಮೇವುಂಡಿ, ಜಗದೀಶ ಅರಣಿ ಸೇರಿ ಇತರರು ಇದ್ದರು. ಶಾಬುದ್ಧಿನ ನದಾಫ ನಿರೂಪಿಸಿದರು. ಮಹೇಶ ಅಲ್ಲಿಪೂರ ವಂದಿಸಿದರು‌.