ಸಾರಾಂಶ
ಕಾಂಗ್ರೆಸ್ ಪಕ್ಷದ ಮುಖಂಡ ಆಸ್ಕರ್ ಫರ್ನಾಂಡೀಸ್ ಅವರು ನಿಧನರಾಗಿ ಮೂರು ವರ್ಷಗಳು ಸಂದಿದ್ದು, ಅವರ 3ನೇ ಪುಣ್ಯತಿಥಿಯನ್ನು ಕಾಂಗ್ರೆಸ್ ಭವನದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಕಾಂಗ್ರೆಸ್ ಪಕ್ಷದ ಮುಖಂಡ ಆಸ್ಕರ್ ಫರ್ನಾಂಡೀಸ್ ಅವರು ನಿಧನರಾಗಿ ಮೂರು ವರ್ಷಗಳು ಸಂದಿದ್ದು, ಈ ದಿನ ಅವರ 3ನೇ ಪುಣ್ಯತಿಥಿಯನ್ನು ಕಾಂಗ್ರೆಸ್ ಭವನದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆಚರಿಸಲಾಯಿತು.ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಾಸ್ತಾವಿಕವಾಗಿ ಮಾತನಾಡಿ, ನಿರಂತರವಾಗಿ ತನ್ನ ಜೀವವನ್ನು ಜನತಾ ಸೇವೆಗೆ ಮುಡಿಪಾಗಿಟ್ಟ ಆಸ್ಕರ್ ಫರ್ನಾಂಡಿಸ್ ಅವರು ಉಡುಪಿಯ ಅಭಿವೃದ್ಧಿಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಉಡುಪಿಯಲ್ಲಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಆಸ್ಕರ್ ಫರ್ನಾಂಡಿಸ್ ಅವರ ಒಡನಾಡಿ ರೆ.ಫಾ.ಮಿಲಿಯಂ ಮಾರ್ಟೀಸ್, ಆಸ್ಕರ್ ಅವರ ಗುಣಗಾನ ಮಾಡಿ ಸರಳ ವ್ಯಕ್ತಿತ್ವದ ಜನನಾಯಕ ಆಸ್ಕರ್ ಅವರನ್ನು ಅವರ ಸೇವೆಯನ್ನು ಮರೆಯಲು ಅಸಾಧ್ಯ ಎಂದರು.ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಎಂ.ಎ. ಗಪೂರ್, ಬಿ. ನರಸಿಂಹಮೂರ್ತಿ, ಮೆರೋನಿಕಾ ಕರ್ನೆಲಿಯೋ, ಮಹಾಬಲ ಕುಂದರ್, ಭಾಸ್ಕರ್ ರಾವ್ ಕಿದಿಯೂರು, ಬಿ. ಕುಶಲ್ ಶೆಟ್ಟಿ, ಕೇಶವ ಕೋಟ್ಯಾನ್, ಜ್ಯೋತಿ ಹೆಬ್ಬಾರ್, ಉದ್ಯಾವರ ನಾಗೇಶ್ ಕುಮಾರ್, ರೆನಾಲ್ಡ್ ಪ್ರವೀಣ್ ಕುಮಾರ್ˌ ಪ್ರಶಾಂತ್ ಜತ್ತನ್ನ, ಶಶಿಧರ್ ಶೆಟ್ಟಿ ಉಲ್ಲೂರು, ಜಯಕುಮಾರ್, ಯುವರಾಜ್, ಆನಂದ್ ಪೂಜಾರಿ, ರಮಾನಂದ ಪೈ, ಉಪೇಂದ್ರ ಗಾಣಿಗ, ಶ್ರೀಧರ್ ಉಪಸ್ಥಿತರಿದ್ದರು. ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ವಂದಿಸಿದರು.