ಸಾರಾಂಶ
ರಾಜು ಅವರು 2028ಕ್ಕೆ ನಾವು (ಬಿಜೆಪಿಯವರು) ಸಿಎಂ ಆಗುತ್ತೇವೆ ಅಂತಿದ್ದಾರೆ. ನೀವು ಆಗಿ ನಮ್ಮದೇನು ತಕರಾರಿಲ್ಲ. ನಾವು 2033ರವರೆಗೆ ಕಾಯುತ್ತೇವೆ. ನಮಗೇನೂ ಅವಸರ ಇಲ್ಲ ಎಂದು ಬಿಜೆಪಿಯ ಮಾಜಿ ಸಚಿವ ರಾಜೂಗೌಡ ಹೇಳಿಕೆಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿರುಗೇಟು ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜು ಅವರು 2028ಕ್ಕೆ ನಾವು (ಬಿಜೆಪಿಯವರು) ಸಿಎಂ ಆಗುತ್ತೇವೆ ಅಂತಿದ್ದಾರೆ. ನೀವು ಆಗಿ ನಮ್ಮದೇನು ತಕರಾರಿಲ್ಲ. ನಾವು 2033ರವರೆಗೆ ಕಾಯುತ್ತೇವೆ. ನಮಗೇನೂ ಅವಸರ ಇಲ್ಲ ಎಂದು ಬಿಜೆಪಿಯ ಮಾಜಿ ಸಚಿವ ರಾಜೂಗೌಡ ಹೇಳಿಕೆಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿರುಗೇಟು ನೀಡಿದರು.ಮುಧೋಳದಲ್ಲಿ ನಡೆದ ಜಡಗಣ್ಣ, ಬಾಲಣ್ಣ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಬಿಜೆಪಿ ಸಚಿವ ರಾಜೂಗೌಡ ಹೇಳಿಕೆಗೆ ವೇದಿಕೆಯಲ್ಲೇ ಪ್ರತಿಕ್ರಿಯಿಸಿ, ನಮ್ಮ ಗಾಡಿ 40ಕ್ಕೂ ಅಧಿಕ ಸ್ಪೀಡ್ ಓಡಲ್ಲ. ಸಿಕ್ಕರೂ ಅಷ್ಟೇ ಸಿಗದಿದ್ದರೂ ಅಷ್ಟೇ ನಮ್ಮ ಗಾಡಿ 40 ಸ್ಪೀಡಲ್ಲೇ ಓಡೋದು. ಅತಿ ಹೆಚ್ಚು ವೇಗದಲ್ಲಿ ಹೋದರೆ ಅಪಘಾತದ ಸಾಧ್ಯತೆ ಇರುತ್ತೆ. ನಮಗೆ ಅಧಿಕಾರ ಮುಖ್ಯವಲ್ಲ ನಮ್ಮ ಅವಧಿಯಲ್ಲಿ ನಾವೇನು ಮಾಡಿದ್ದೇವೆ ಅನ್ನೋದು ಮುಖ್ಯ ನಮ್ಮ ಮುಂದೆ ಇಲ್ಲದೆ ಇರುವ ಬಸವಣ್ಣ, ಅಂಬೇಡ್ಕರರನ್ನು ನಾವು ನೆನೆಸುತ್ತೇವೆ. ಅವರ ಹೆಸರಿನ ಮೇಲೆ ನಾವು ಬದುಕುತ್ತಿದ್ದೇವೆ. ಅಂಬೇಡ್ಕರ್ ಬಸವಣ್ಣವರ ದಾರಿಯಲ್ಲಿ ನಾವು ಹೋಗುವಂತವರು ಎಂದು ಹೇಳಿದರು.