ನಮ್ಮ ಆಹಾರ-ನಮ್ಮ ಆರೋಗ್ಯ-ನಮ್ಮ ಜವಾಬ್ದಾರಿ ಕುರಿತು ಜಾಗೃತಿ ಕಾರ್ಯಾಗಾರವನ್ನು ಅಂದು ಬೆಳಗ್ಗೆ ೧೦ ಗಂಟೆಗೆ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ, ಶ್ರೀಶಂಭುನಾಥ ಸ್ವಾಮೀಜಿ ಅವರ ದಿವ್ಯಸಾನ್ನಿಧ್ಯದಲ್ಲಿ ಕೆಪೆಕ್ ಸಂಸ್ಥೆ ಮಾಜಿ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಉದ್ಘಾಟಿಸುವರು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಶ್ರೀ ಹರ್ಷ ಸಮಾಜ ಸೇವಾ ಫೌಂಡೇಷನ್ ವತಿಯಿಂದ ಕೆ.ಎಂ.ಹರ್ಷ ಅವರ ನಾಲ್ಕನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿ ಅ.೪ರಂದು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮಣ್ಣಿನ ಸಂರಕ್ಷಣೆ-ನಮ್ಮೆಲ್ಲರ ಹೊಣೆ ಎಂಬ ಘೋಷವಾಕ್ಯದೊಂದಿಗೆ ಜಿಲ್ಲೆಯನ್ನು ಸಾವಯವ ಜಿಲ್ಲೆಯಾಗಿ ಪರಿವರ್ತಿಸುವ ಅಭಿಯಾನ ಹಾಗೂ ನಮ್ಮ ಆಹಾರ-ನಮ್ಮ ಆರೋಗ್ಯ-ನಮ್ಮ ಜವಾಬ್ದಾರಿ ಕುರಿತು ಜಾಗೃತಿ ಕಾರ್ಯಾಗಾರ ನಡೆಯಲಿದೆ ಎಂದು ಫೌಂಡೇಷನ್ ಅಧ್ಯಕ್ಷ ಕಾರಸವಾಡಿ ಮಹದೇವು ತಿಳಿಸಿದರು.

ಅಂದು ಬೆಳಗ್ಗೆ ೧೦ ಗಂಟೆಗೆ ನಡೆಯುವ ಸಮಾರಂಭವನ್ನು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಹಾಸನ ಜಿಲ್ಲೆಯ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಅವರ ದಿವ್ಯಸಾನ್ನಿಧ್ಯದಲ್ಲಿ ಕೆಪೆಕ್ ಸಂಸ್ಥೆ ಮಾಜಿ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಉದ್ಘಾಟಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಫಸ್ಟ್ ಸರ್ಕಲ್ ಸೊಸೈಟಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಸಭಾ ಸದಸ್ಯ ಡಾ. ಸಿ.ಎನ್. ಮಂಜುನಾಥ್ ಅವರು ನಮ್ಮ ಆಹಾರ-ನಮ್ಮ ಆರೋಗ್ಯ-ನಮ್ಮ ಜವಾಬ್ದಾರಿ ಕುರಿತು ವಿಶೇಷ ಉಪನ್ಯಾಸ ನೀಡುವರು. ಸಾವಯವ ಕೃಷಿಕ ಮಲ್ಲೇಶಪ್ಪ ಬಿಸಿರೊಟ್ಟಿ ಅವರು ಸಾವಯವ ಕೃಷಿ ಜಾಗೃತಿ ಉಪನ್ಯಾಸ ನೀಡುವರು ಎಂದರು.

ಕಾಸರಗೋಡಿನ ಐಸಿಎಆರ್ ಮಾಜಿ ನಿರ್ದೇಶಕ ಡಾ.ಚೌಡಪ್ಪ ಅವರು ಜಿಲ್ಲೆಯನ್ನು ಸಾವಯವ ಜಿಲ್ಲೆಯಾಗಿಸುವ ವಿವಿಧ ಹಂತಗಳ ಕುರಿತು ಮಾತನಾಡುವರು. ಕೃಷಿ ವಿವಿ ನಿಕಟಪೂರ್ವ ವಿಶೇಷಾಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್ ಅವರು ಜಿಲ್ಲೆಯ ಮಣ್ಣು ಮತ್ತು ಬೆಳೆಗಳ ಇಂದಿನ ಸ್ಥಿತಿಗತಿಗಳ ಕುರಿತು ಮಾತನಾಡುವರು. ಲಯನ್ಸ್ ಸಂಸ್ಥೆಯ ಡಾ. ಕೃಷ್ಣೇಗೌಡ, ಸಿದ್ದೇಗೌಡ, ಜಯಕುಮಾರ್ ಅವರು ಸಾವಯವ ಕೃಷಿ ಜಾಗೃತಿ ಅಭಿಯಾನದ ನಾಮಫಲಕ ಅನಾವರಣ ಮಾಡುವರು. ರೋಟರಿ ಜಿಲ್ಲಾ ರಾಜ್ಯಪಾಲ ಕುಮಾರಸ್ವಾಮಿ ಅವರು ಸಾವಯವ ಸಂತೆಗೆ ಚಾಲನೆ ನೀಡುವರು ಎಂದರು.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಕೃಷ್ಣ, ಕನ್ನಡ ಪರಿಚಾರಕ ಕೆ.ಟಿ. ಹನುಮಂತು, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಿರ್ದೇಶಕಿ ಚೇತನ, ಎಂ.ಆರ್.ಎಂ. ಪ್ರಕಾಶನದ ಎಂ.ಆರ್. ಪ್ರಕಾಶ್, ಕೃಷಿ ಜಂಟಿ ನಿರ್ದೇಶಕ ಜಿ.ಸಿ. ಜಯಸ್ವಾಮಿ ಇತರರು ಪುಷ್ಪನಮನ ಸಲ್ಲಿಸುವರು ಎಂದರು.

ಸಂಜೆ ೪ ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಆದಿಚುಂಚನಗಿರಿ ನಾಗಮಂಗಲ ಶಾಖಾ ಮಠದ ಶ್ರೀ ಸತ್ಯಕೀರ್ತಿನಾಥ ಸ್ವಾಮೀಜಿ, ಮಳವಳ್ಳಿಯ ಬಿ.ಜಿ.ಪುರ ಶ್ರೀ ಮಂಟೇಸ್ವಾಮಿ ಮಠದ ಧರ್ಮಾಧಿಕಾರಿ ಭರತ್‌ಅರಸ್ ಅವರ ದಿವ್ಯ ಸಾನ್ನಿಧ್ಯದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಅವರು ಸಮಾರಂಭ ಉದ್ಘಾಟಿಸುವರು ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ ಆಶಯ ನುಡಿಯನ್ನಾಡುವರು. ಭಾರತೀಯ ರೆಡ್‌ಕ್ರಾಸ್ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಸಹಜ ಸಮೃದ್ದ ಸಂಸ್ಥೆ ನಿರ್ದೇಶಕ ಕೃಷ್ಣಪ್ರಸಾದ್, ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕ ಎಸ್.ಸಿ.ಮಧುಚಂದನ್ ಅವರು ದೂರದರ್ಶನ ಕಾರ್ಯಕ್ರಮ ನಿರ್ದೇಶಕ ಗೋಪಿನಾಥ್, ಸಂಪೂರ್ಣ ಸಾವಯವ ಕೃಷಿಕ ಮಹೇಶ್‌ಕುಮಾರ್, ಸಾವಯವ ಕೃಷಿ ಶಂಕರಯ್ಯ, ಪರಿಸರಪ್ರೇಮಿ ರಮೇಶ್, ಮಂಜುನಾಥ್ ಗುಡಿಗೆರೆ, ಸವಿತಾ ಹೂವಿನಹಳ್ಳಿ, ವಿ.ಎಸ್. ಜಯಕೀರ್ತಿ, ಮಾಯಿಗಮ್ಮ ಅವರಿಗೆ ಶ್ರೀಹರ್ಷ ಕಾಯಕಶ್ರೀ ಪ್ರಶಸ್ತಿ ಪ್ರದಾನ ಮಾಡುವರು ಎಂದರು.

ನಿವೃತ್ತ ಪ್ರಾಂಶುಪಾಲ ಡಾ.ಎಸ್.ಪಿ.ಶಂಕರೇಗೌಡ, ಬಿಜೆಪಿ ಯುವ ನಾಯಕ ಎಸ್. ಸಚ್ಚಿದಾನಂದ ಇತರರು ಪುಷ್ಪನಮನ ಸಲ್ಲಿಸುವರು ಎಂದರು.

ಕಾರ್ಯಕ್ರಮದ ಬಳಿಕ ರಂಗಬಂಡಿ ಮಳವಳ್ಳಿ, ಯೂನಿವರ್ಸಲ್ ಸೇವಾ ಟ್ರಸ್ಟ್, ಸರ್ಕಾರಿ ಪದವಿಪೂರ್ವ ಕಾಲೇಜು ತಳಗವಾದಿ ವಿದ್ಯಾರ್ಥಿಗಳು ಅಭಿನಯಿಸುವ ಮಂಟೆಸ್ವಾಮಿ ಕಥಾ ಪ್ರಸಂಗ ನಾಟಕ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಮುಖಂಡರಾದ ಚಿಕ್ಕೇಗೌಡ, ಹರೀಶ, ಚಿಕ್ಕಸ್ವಾಮಿ, ಮಧು, ಚನ್ನೇಗೌಡ ಇತರರು ಗೋಷ್ಠಿಯಲ್ಲಿದ್ದರು.