ಡಾ.ಪ್ರಭಾ ಗೆಲ್ಲಿಸೋದೇ ನಮ್ಮ ಗುರಿ

| Published : Apr 25 2024, 01:00 AM IST

ಸಾರಾಂಶ

ಬಿಜೆಪಿಯಲ್ಲಿ ನಿಷ್ಠಾವಂತ ಮುಖಂಡರು, ಕಾರ್ಯಕರ್ತರ ಕಡೆಗಣನೆ ವಿರುದ್ಧ ಬೇಸತ್ತು ಜಗಳೂರು ಮಾಜಿ ಶಾಸಕ ಟಿ.ಜಿ. ಗುರುಸಿದ್ದನಗೌಡ ಸೇರಿದಂತೆ ತಾವೆಲ್ಲರೂ ಪಕ್ಷ ತೊರೆದು, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸಮ್ಮುಖ ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇವೆ. ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸುವುದೇ ನಮ್ಮೆಲ್ಲರ ಗುರಿ ಎಂದು ಹಿರಿಯ ಮುಖಂಡ ಕಕ್ಕರಗೊಳ್ಳ ಕೆ.ಪಿ. ಕಲ್ಲಿಂಗಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಕೆ.ಪಿ.ಕಲ್ಲಿಂಗಪ್ಪ ಹೇಳಿಕೆ

- - - ದಾವಣಗೆರೆ: ಬಿಜೆಪಿಯಲ್ಲಿ ನಿಷ್ಠಾವಂತ ಮುಖಂಡರು, ಕಾರ್ಯಕರ್ತರ ಕಡೆಗಣನೆ ವಿರುದ್ಧ ಬೇಸತ್ತು ಜಗಳೂರು ಮಾಜಿ ಶಾಸಕ ಟಿ.ಜಿ. ಗುರುಸಿದ್ದನಗೌಡ ಸೇರಿದಂತೆ ತಾವೆಲ್ಲರೂ ಪಕ್ಷ ತೊರೆದು, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸಮ್ಮುಖ ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇವೆ. ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸುವುದೇ ನಮ್ಮೆಲ್ಲರ ಗುರಿ ಎಂದು ಹಿರಿಯ ಮುಖಂಡ ಕಕ್ಕರಗೊಳ್ಳ ಕೆ.ಪಿ. ಕಲ್ಲಿಂಗಪ್ಪ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗುರುಸಿದ್ದನಗೌಡ, ಡಾ. ಟಿ.ಜಿ. ರವಿಕುಮಾರ ಸಹೋದರರು, ಕೆ.ಪಿ. ಕಲ್ಲಿಂಗಪ್ಪ, ಮಟ್ಟಿಕಲ್ಲು ವೀರಭದ್ರ ಸ್ವಾಮಿ, ಅಣಜಿ ಬಸವರಾಜ, ಅಣಜಿ ಪ್ರಶಾಂತ್‌ ಸೇರಿದಂತೆ ಅನೇಕರು ಬಿಜೆಪಿ ತೊರೆದು, ಕಾಂಗ್ರೆಸ್ಸಿಗೆ ಸೇರಿದ್ದೇವೆ ಎಂದರು.

4 ಅವಧಿಗೆ ಸಂಸದರಾದರೂ ಜಿ.ಎಂ.ಸಿದ್ದೇಶ್ವರ ದಾವಣಗೆರೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಿಲ್ಲ. ಬದಲಾಗಿ ತಮ್ಮ ಸ್ವಂತ ಅಭಿವೃದ್ಧಿ ಮಾಡಿಕೊಳ್ಳಲು ಅಧಿಕಾರ ಬಳಸಿದ್ದಾರೆ. ಬಿಜೆಪಿಯನ್ನು ದಾವಣಗೆರೆಯಲ್ಲಿ ಕಟ್ಟಿ, ಬೆಳೆಸಿದ್ದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಗುರುಸಿದ್ದನಗೌಡ, ಕೋಲ್ಕುಂಟೆ ಗೋವಿಂದಪ್ಪ, ಎಂ.ಜಿ.ಕಿಣಿ, ಬಿ.ಎಂ.ಎಸ್. ತಿಮ್ಮಣ್ಣ, ಬಿ.ಬಿ. ಸಾಕ್ರೆ ಸೇರಿದಂತೆ ಹಲವರು. ಆದರೆ, ಹಿರಿಯರು, ನಿಷ್ಠಾವಂತರಿಗೆ ಸಂಸದರ ಅವಧಿಯಲ್ಲಿ ಸ್ಥಾನಮಾನ, ಗೌರವ, ಅವಕಾಶಗಳೇ ಇಲ್ಲದಂತಾಗಿದೆ ಎಂದು ದೂರಿದರು.

ಹಿರಿಯ ಮುಖಂಡರಾದ ಮಟ್ಟಿಕಲ್ಲು ವೀರಭದ್ರಸ್ವಾಮಿ, ಎಚ್.ಎಂ.ರಾಜಶೇಖರಯ್ಯ (ರಾಜೇಶ), ಶಾಂತಾಬಾಯಿ, ಬಸವರಾಜ ಸಿರಿಗೆರೆ, ಅಣಜಿ ಬಸವರಾಜ, ಅಣಜಿ ಪ್ರಶಾಂತ, ಎಸ್.ಜಿ.ಬಸವರಾಜ ಇತರರು ಇದ್ದರು.

- - - -24ಕೆಡಿವಿಜಿ5: ದಾವಣಗೆರೆಯಲ್ಲಿ ಬುಧವಾರ ಹಿರಿಯ ಮುಖಂಡ ಕೆ.ಪಿ.ಕಲ್ಲಿಂಗಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.