ಹಿಂದು ರಾಷ್ಟ್ರ ನಿರ್ಮಾಣವೇ ನಮ್ಮ‌ ಗುರಿ

| Published : Feb 27 2024, 01:31 AM IST

ಸಾರಾಂಶ

ಮುಧೋಳ: ಹಿಂದು ಸಮಾಜ ಯಾವತ್ತೂ ಯಾರ ಋಣ ಉಳಿಸಿಕೊಳ್ಳಲ್ಲ. ಹಿಂದುಗಳ ಧ್ವನಿಗೆ ಕೇಂದ್ರದಲ್ಲಿ ಜಾಗ ಸಿಕ್ಕೇ ಸಿಗುತ್ತದೆ. ಹಿಂದು ಸಮಾಜ ಯಾರನ್ನೂ ನಕಲು ಮಾಡಿ ಬದುಕಿದ ಸಮಾಜವಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಹಿಂದು ಸಮಾಜ ಯಾವತ್ತೂ ಯಾರ ಋಣ ಉಳಿಸಿಕೊಳ್ಳಲ್ಲ. ಹಿಂದುಗಳ ಧ್ವನಿಗೆ ಕೇಂದ್ರದಲ್ಲಿ ಜಾಗ ಸಿಕ್ಕೇ ಸಿಗುತ್ತದೆ. ಹಿಂದು ಸಮಾಜ ಯಾರನ್ನೂ ನಕಲು ಮಾಡಿ ಬದುಕಿದ ಸಮಾಜವಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.

ತಾಲೂಕಿನ ಶಿರೋಳ ಗ್ರಾಮದಲ್ಲಿ ಹಿಂದು ಜಾಗರಣ ವೇದಿಕೆ ಹಮ್ಮಿಕೊಂಡಿದ್ದ ಹಿಂದು ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ‌ ಗುರಿ ಹಿಂದು ರಾಷ್ಟ. ಹಿಂದು ರಾಷ್ಟ್ರ ಅರ್ಥ ಇಲ್ಲದ ಚರ್ಚೆ ಮಾಡಿಯೇ ನಮ್ಮ ಜೀವನ ಹಾಳು ಮಾಡಿಕೊಂದ್ದೇವೆ. ಇಂದು ಜಾತ್ಯತೀತ ಎಂದು ಹೇಳಿಕೊಂಡು ಜಾತಿ ಆಧಾರದ ರಾಜಕಾರಣ ನಡೆಯುತ್ತಿದೆ. ಯುಸಿಸಿ ಎಷ್ಟು ಮಂದಿಗೆ ಬರಬೇಕಿದೆ ಎಂದು ಪ್ರಶ್ನೆ ಮಾಡಿದರು.

ಅಯೋಧ್ಯೆಯ ರಾಮಮಂದಿರ ಕೇವಲ ಪ್ರಾರಂಭ. ಮುಂದಿನ ದಿನಗಳಲ್ಲಿ ಮಾರವ್ವ, ದ್ಯಾಮವ್ವ, ಚೌಡವ್ವ ಎಲ್ಲರೂ ಎದ್ದು ನಿಲ್ಲುತ್ತಾರೆ. ಜಗತ್ತಿನಲ್ಲಿ ನಾವು ಯಾರಿಗೂ ಹೆದರಿ ಬದುಕಬೇಕಿಲ್ಲ. ಜಗತ್ತಿನಲ್ಲಿ ಎಲ್ಲಾ ಕಡೆ ಇದೀಗ ಹಿಂದು ವಿಲ್ಲೇಜ್ ಟ್ರೆಂಡ್ ಆಗುತ್ತಿದೆ. ಬ್ರಿಟಿಷರು ಆವತ್ತೇ ದೇಶ ಬಿಟ್ಟು ಹೋದರೂ ಗುಲಾಮಿತನ ಇನ್ನೂ ಹೋಗಿಲ್ಲ ಎಂದು ವಾಗ್ದಾಳಿ ನಡೆಸಿದರು. ಹಿಂಜಾವೇ ಪ್ರಮುಖರು ವೇದಿಕೆ ಮೇಲೆ ಇದ್ದರು.