ಸಾರಾಂಶ
ಹಾನಗಲ್ಲ: ಜಗತ್ತಿಗೆ ಯೋಗ ಕೊಟ್ಟ ಭಾರತ ಎಂಬ ಹೆಮ್ಮೆ ನಮ್ಮದು, ಇದು ಅತ್ಯಂತ ಪುರಾತನ ಆರೋಗ್ಯ ಸೂತ್ರ, ಈಗ ಯೋಗ ವಿಶ್ವವ್ಯಾಪಿ ಎಂದು ಹಿರಿಯ ವಿಭಾಗದ ನ್ಯಾಯಾಧೀಶರಾದ ರಾಜೇಶ್ವರಿ ಪುರಾಣಿಕ ತಿಳಿಸಿದರು.ಶುಕ್ರವಾರ ಹಾನಗಲ್ಲಿನ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ ವಿಶ್ವ ಯೋಗದಿನ ಕಾರ್ಯಕ್ರಮದಲ್ಲಿ ಯೋಗಭ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ನಮ್ಮ ದೇಶದ ಪುರಾತನ ವಿದ್ಯೆ. ಈಗ ಯೋಗವನ್ನು ಇಡೀ ಜಗತ್ತು ಅಳವಡಿಸಿಕೊಳ್ಳುತ್ತಿದೆ. ಜಗತ್ತಿಗೆ ಯೋಗವನ್ನು ಕೊಟ್ಟವರು ನಾವು ಎಂಬ ಹೆಮ್ಮೆ ನಮ್ಮದು. ಮಾನಸಿಕ ಸಮತೋಲನ ಯೋಗದಿಂದ ಸಾಧ್ಯ. ನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡರೆ ಆರೋಗ್ಯದ ಭಾಗ್ಯ ನಮ್ಮದಾಗುತ್ತದೆ ಎಂದರು.ಯೋಗಪಟು ಗುರುರಾಜ ಜೋಶಿ ಒಂದು ಗಂಟೆಯ ಕಾಲ ಯೋಗ ತರಬೇತಿ ನೀಡಿ, ಯೋಗ ಪ್ರದರ್ಶನ ಮಾಡಿದರು. ಗುರುರಾಜ ಜೋಶಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.ಹೆಚ್ಚುವರಿ ನ್ಯಾಯಾಧೀಶ ಬಿ. ವೆಂಕಟಪ್ಪ, ಸಿವಿಲ್ ಜಡ್ಜ ಎಸ್.ಕೆ. ಜನಾರ್ಧನ, ವಕೀಲರ ಸಂಘದ ಅಧ್ಯಕ್ಷ ಟಿ.ಬಿ. ಸವಣೂರ, ಕಾರ್ಯದರ್ಶಿ ಎಂ.ಎಸ್. ಕಾಳಂಗಿ, ನ್ಯಾಯವಾದಿ ಬಿ.ಎಸ್. ಅಕ್ಕಿವಳ್ಳಿ, ರವಿಬಾಬು ಪೂಜಾರ, ಅಶೋಕ ಹಂಗರಗಿ, ಎಸ್.ಎಂ. ಕೋತಂಬರಿ, ಎಂ.ಎಸ್. ಹುಲ್ಲೂರ, ರವಿರಾಜ ಕಲಾಲ, ರಾಜು ಗೌಳಿ, ವೀಣಾ ಬ್ಯಾತನಾಳ, ಸತೀಶ ತಿಳವಳ್ಳಿ, ಎಂ.ಎಂ. ಮುಲ್ಲಾ, ಶ್ರೀಕಾಂತ ಹಾದಿಮನಿ, ಜಿ.ಬಿ. ಕೊಂಡೋಜಿ, ಬಿ.ಎಸ್. ದಳವಾಯಿ, ಕೆ.ಬಿ. ಭೋಸಲೆ, ರಂಗನಾಥ ಅಕ್ಕಿವಳ್ಳಿ, ಶಿವಲಿಂಗಪ್ಪ ಬೈಲಣ್ಣನವರ, ಎಸ್.ಎಲ್. ಬಣಕಾರ ಮೊದಲಾದವರಿದ್ದರು.