ಬಾಳೆಹೊನ್ನೂರು: ಇರಾನ್-ಇರಾಕ್ ನಡುವೆ ಯುದ್ಧದಲ್ಲಿ ದುಬೈನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆ ನಮ್ಮ ಆದ್ಯತೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಷಿ ಹೇಳಿದರು.ದುಬೈನಿಂದ ಯಾವುದೇ ವಿಮಾನ ಹಾರಾಟ ನಡೆಯುತ್ತಿಲ್ಲ. ನಾನು ಭಾನುವಾರ ದೆಹಲಿಗೆ ಹೋಗುತ್ತಿದ್ದು, ಸಂಬಂಧಿಸಿದ ಮಂತ್ರಾಲಯ, ಮಂತ್ರಿಗಳ ಜೊತೆಗೆ ಮಾತುಕತೆ ಮಾಡಿ ಕನ್ನಡಿಗರು ಯಾರು ಸಿಕ್ಕಿ ಹಾಕಿಕೊಂಡಿದ್ದಾರೆ ಅವರನ್ನು ವಾಪಾಸ್ ಕರೆತರುವ ಬಗ್ಗೆ ಗಂಭೀರ ಪ್ರಯತ್ನ ನಮ್ಮ ಸರ್ಕಾರ ಯಾವತ್ತಿಗೂ ಮಾಡುತ್ತದೆ ಎಂದು ಸುದ್ದಿಗಾರರಿಗೆ ಹೇಳಿದರು.ಹಾಲಿ ಬಹಳ ಪ್ರಕ್ಷ್ಯುಬ್ಧ ಪರಿಸ್ಥಿತಿಯಿದ್ದು, ವಿಮಾನವನ್ನು ಟೇಕಾಪ್ ಮಾಡುವುದು ಅಪಾಯಕಾರಿ ಸಂದರ್ಭವಿರುವ ಕಾರಣ ಅಲ್ಲಿನ ತಾಂತ್ರಿಕ ವ್ಯಕ್ತಿಗಳು ನಮಗೆ ಏನು ಸಲಹೆ ಕೊಡುತ್ತಾರೆ ಅದರ ಆಧಾರದ ಮೇಲೆ ಆದಷ್ಟು ಬೇಗ ಎಲ್ಲರನ್ನೂ ನಾವು ಸುರಕ್ಷಿತವಾಗಿ ಕರೆತರುರುವುದು ನಮ್ಮ ಪ್ರಥಮ ಆದ್ಯತೆಯಾಗಿದೆ. ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡರು ಸಹ ಅಲ್ಲಿ ಸಿಲುಕಿದ್ದು, ಅವರೂ ನಮ್ಮ ಸ್ನೇಹಿತರು, ಅದರೊಂದಿಗೆ ಅಲ್ಲಿರುವ ಎಲ್ಲಾ ಪ್ರಯಾಣಿಕರನ್ನು ಕರೆತರುವುದು ನಮ್ಮ ಪ್ರಥಮ ಆದ್ಯತೆ. ಆದಷ್ಟು ಬೇಗ ಅವರು ಅಲ್ಲಿರುವವರು ಸುರಕ್ಷಿ ವಾಗಿ ತಾಯ್ನಾಡಿಗೆ ಬರಬೇಕು ಎಂಬುದು ನಮ್ಮ ಆಶಯ ಎಂದರು.೦೧ಬಿಹೆಚ್‌ಆರ್ ೧: ಪ್ರಲ್ಹಾದ್ ಜೋಷಿ
ದುಬೈನಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆ ನಮ್ಮ ಆದ್ಯತೆ: ಜೋಷಿ
ಬಾಳೆಹೊನ್ನೂರು: ಇರಾನ್-ಇರಾಕ್ ನಡುವೆ ಯುದ್ಧದಲ್ಲಿ ದುಬೈನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆ ನಮ್ಮ ಆದ್ಯತೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಷಿ ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.