ಸಾರಾಂಶ
ಹುಣಸಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮ ಅಂಗವಾಗಿ ಸಸಿ ನೆಡಲಾಯಿತು.
ಕನ್ನಡಪ್ರಭ ವಾರ್ತೆ ಹುಣಸಗಿ
ಪ್ರಕೃತಿಯನ್ನೇ ದೇವರೆಂದು ನಂಬಿರುವ ದೇಶ ನಮ್ಮದು. ಪ್ರಕೃತಿ ಉಳಿದರೆ ಮಾತ್ರ ನಾವು ಉಳಿಯಬಹುದು ಎಂದು ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಎಸ್.ಬಿ. ಪಾಟೀಲ್ ಹೇಳಿದರು.ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚಾರಣೆ ಅಂಗವಾಗಿ ನಡೆದ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರೋಗ್ಯಕರ ಬದುಕನ್ನು ನಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರ ಅತಿ ಅಗತ್ಯ. ಅದಕ್ಕಾಗಿ ಮರ-ಗಿಡ ಹೆಚ್ಚಾಗಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಹೆಚ್ಚುತ್ತಿರುವ ಭೂಮಿ ತಾಪಮಾನ ಕಡಿಮೆ ಮಾಡಲು ಹಸಿರನ್ನು ಹೆಚ್ಚಿಸಿ ಶುದ್ಧ ಗಾಳಿ ಪಡೆಯಲು ಪ್ರತಿಯೊಬ್ಬರೂ ಸಸಿ ನೆಟ್ಟು ಉಳಿಸಿ, ಬೆಳೆಸಬೇಕಾದ ಅಗತ್ಯವಿದೆ ಎಂದರು.ಡಾ. ಪ್ರೀಯಾಂಕ, ಮಲ್ಲಿಕಾರ್ಜುನ ಕೋರಿ, ರಂಗನಾಥ, ರಾಹುತಪ್ಪ, ಮಲ್ಲಿಕಾರ್ಜುನ ಮೈಲಾಪೂರ, ಸುಭಾಷ ಹವಣ್ಣನವರ, ಶ್ರೀಹರಿ, ದೇವಪ್ಪ ಸೇರಿ ಇತರರಿದ್ದರು.