ಶೀಘ್ರದಲ್ಲಿಯೇ ಕಾಂಕ್ರಿಟ್ ಮೂಲಕ ಅದನ್ನು ಸರಿಪಡಿಸಲಾಗುವುದು. ದೇವಸ್ಥಾನಕ್ಕೆ ಬಾಗಿಲು ಇಲ್ಲದ್ದರಿಂದ ಒಳಗಡೆ ಗಲೀಜು ಆಗಿದ್ದು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಚಿಕ್ಕದಾದ ಗೇಟ್ ನಿರ್ಮಾಣ ಮಾಡಲಾಗುವುದು.
ತಂಬ್ರಹಳ್ಳಿ: ಬಾಚಿಗೊಂಡನಹಳ್ಳಿ ತಂಬ್ರಹಳ್ಳಿ ತುಂಗಾಭದ್ರಾ ಹಿನ್ನೀರು ಪ್ರದೇಶದ ಮಧ್ಯ ಭಾಗದಲ್ಲಿರುವ ತೋಟಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಹಿನ್ನೆಲೆಯಲ್ಲಿ ಮಠದ ಶಿವಮಹಾಂತ ಸ್ವಾಮೀಜಿ ಭೇಟಿ ನೀಡಿದರು.
ಈ ಕುರಿತು ಮಾತನಾಡಿದ ಅವರು, ದೇವಸ್ಥಾನದ ಮುಂಭಾಗ ನೀರಿನ ಕೊರೆತಕ್ಕೆ ಕಿತ್ತು ಹೋಗಿದ್ದು, ಶೀಘ್ರದಲ್ಲಿಯೇ ಕಾಂಕ್ರಿಟ್ ಮೂಲಕ ಅದನ್ನು ಸರಿಪಡಿಸಲಾಗುವುದು. ದೇವಸ್ಥಾನಕ್ಕೆ ಬಾಗಿಲು ಇಲ್ಲದ್ದರಿಂದ ಒಳಗಡೆ ಗಲೀಜು ಆಗಿದ್ದು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಚಿಕ್ಕದಾದ ಗೇಟ್ ನಿರ್ಮಾಣ ಮಾಡಲಾಗುವುದು. ಇದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಕ್ರೂಡೀಕರಿಸಿ ಕೂಡಲೇ ಕೆಲಸ ಆರಂಭಿಸಲಾಗುವುದು. ನೂರಾರು ವರ್ಷಗಳ ಹಿಂದಿನ ಈ ದೇವಸ್ಥಾನ ಮುಂಭಾಗ ಪ್ರತಿವರ್ಷ ಸ್ವಾಮಿಯ ಪರುವು ಮಾಡಲಾಗುತ್ತದೆ. ಹಿಂದೆ ಇದರ ಜಾತ್ರೋತ್ಸವ ತಿಂಗಳುಗಟ್ಟಲೇ ನಡೆಯುತ್ತಿತ್ತು. ಇದರ ಜೊತೆಗೆ ಎತ್ತಿನ ಜಾತ್ರೆ ವಿಶೇಷವಾಗಿತ್ತು. ಸ್ವಾಮಿಯ ರಥವು ಮರುಳಿನಲ್ಲಿಯೇ ತಂಬ್ರಹಳ್ಳಿಯವರೆಗೂ ಸಾಗುತ್ತಿತ್ತು ಎಂದು ಹಿರಿಯರು ಈಗಲೂ ನೆನೆಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಾಚಿಗೊಂಡನಹಳ್ಳಿ ಗ್ರಾಮದ ಹೊಸಕೇರಿ ವಿರುಪಾಕ್ಷಪ್ಪ, ಎಲ್ಲಾಪುರ ಸುರೇಶ, ಕಲ್ಮನಿ ವಿರುಪಾಕ್ಷಪ್ಪ, ಬಡಿಗೇರ್ ಯುವರಾಜ, ಪಕ್ಕೀರಯ್ಯ, ಗಬ್ಬೂರು ದೇವಪ್ಪ ಇದ್ದರು.
ತಂಬ್ರಹಳ್ಳಿ ಸಮೀಪದ ಬಾಚಿಗೊಂಡನಹಳ್ಳಿ ತೋಂಟದಾರ್ಯ ಮಠದ ಶಿವಮಹಾಂತ ಸ್ವಾಮೀಜಿ ಹಿನ್ನೀರು ಪ್ರದೇಶದಲ್ಲಿನ ತೋಟಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಜೀರ್ಣೋದ್ಧಾರ ಕುರಿತು ಚರ್ಚಿಸಿದರು.