ತಾಲೂಕಿನ ಒಳ ಮೀಸಲಾತಿ ಹೋರಾಟ ಸಮಿತಿ, ಮಾದಾರ ಮಹಾ ಸಭಾ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪ್ರತ್ಯೇಕವಾಗಿ ಡಾ,ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆ ಮಾಡಿದವು.

ಕನ್ನಡಪ್ರಭವಾರ್ತೆ ತುರುವೇಕೆರೆ

ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಲು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಪಾದಿಸಿ ತಾಲೂಕಿನ ಒಳ ಮೀಸಲಾತಿ ಹೋರಾಟ ಸಮಿತಿ, ಮಾದಾರ ಮಹಾ ಸಭಾ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪ್ರತ್ಯೇಕವಾಗಿ ಡಾ,ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆ ಮಾಡಿದವು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸರ್ಕಾರದ ನಿಲುವು ಖಂಡಿಸಿ ಹತ್ತಾರು ತಮಟೆ ಬಾರಿಸುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಕೆಲವು ನಿಮಿಷಗಳ ಕಾಲ ಬಾಣಸಂದ್ರ ವೃತ್ತದಲ್ಲಿ ಹತ್ತಾರು ತಮಟೆಗಳನ್ನು ಒಟ್ಟಿಗೆ ಬಾರಿಸುವ ಮೂಲಕ ಚಳುವಳಿ ಮಾಡಲಾಯಿತು.

ಮಾಜಿ ಶಾಸಕ ಮಸಾಲಾ ಜಯರಾಮ್ , ಸಾಹಿತಿ ಕೃಷ್ಣಮೂರ್ತಿ ಬೆಳಗೆರೆ ಮಾತನಾಡಿದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ನರಸಿಂಹಮೂರ್ತಿ, ವಿ.ಟಿ.ವೆಂಕಟರಾಮಯ್ಯ, ದಂಡಿನಶಿವರ ಕುಮಾರ್, ಮಲ್ಲೂರು ತಿಮ್ಮೇಶ್, ಲಕ್ಷ್ಮೀಶ್. ಡಾ.ಮುರುಳೀಧರ್, ಡಾ.ಚಂದ್ರಯ್ಯ, ಗುರುದತ್. ಮಂಜಣ್ಣ, ಚಿದಾನಂದ್, ಶಾಸಕ ಎಂ.ಟಿ.ಕೃಷ್ಣಪ್ಪ, ಸುಬ್ರಮಣಿ ಶ್ರೀಕಂಠೇಗೌಡ, ವಸಂತಕುಮಾರ್, ಪಾಪಣ್ಣ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್, ಹಾವಾಳ ಶಿವಕುಮಾರ್, ಶೌಕತ್, ಎಸ್. ಎಂ. ಕುಮಾರಸ್ವಾಮಿ, ಮುನಿಯೂರು ಮಂಜು ಸೇರಿದಂತೆ ಹಲವರು ಇದ್ದರು. ಮಾಜಿ ಶಾಸಕ ಎಚ್.ಬಿ.ನಂಜೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.