ಸಾರಾಂಶ
ಶೈಕ್ಷಣಿಕ ವಾತಾವರಣಕ್ಕೆ ಅನುಕೂಲಕರವಾಗುವ ದೂರದೃಷ್ಟಿಯಿಂದ ವೈಜ್ಞಾನಿಕವಾಗಿ ವ್ಯವಸ್ಥಿತ ಯೋಜನೆ ರೂಪಿಸಿ ಕಟ್ಟಡ ನಿರ್ಮಾಣ ಮಾಡಲು ಒತ್ತಾಯ
ಕೊಪ್ಪಳ: ನಗರದ ಇಂದಿರಾ ಕ್ಯಾಂಟೀನ್ ಹಿಂದೆ ಇರುವ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ ಸ್ಥಳಾಂತರದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟು ಮಾಡಿದೆ ಎಂದು ಶಾಲಾ ಪಾಲಕರ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಇಂದಿರಾ ಕ್ಯಾಂಟೀನ್ ಹಿಂದೆ ಇರುವ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಲಾ ಒಂದು ವರ್ಗದಲ್ಲಿ ಅರವತ್ತು ಮಕ್ಕಳಂತೆ ಆರನೇ ತರಗತಿಯಿಂದ ಹತ್ತನೇ ತರಗತಿವರೆಗೆ ಸುಮಾರು ಮುನ್ನೂರು ವಿದ್ಯಾರ್ಥಿಗಳಿದ್ದಾರೆ. ಅಲ್ಲೆ ಮುಂದುವರೆಸಿ. ಮೌಲಾನಾ ಆಜಾದ್ ಶಾಲೆಯು ಭವಿಷ್ಯದಲ್ಲಿ ಬರಲಿರುವ ಎಲ್ ಕೆಜಿ ಯಿಂದ ದ್ವಿತೀಯ ಪಿಯುಸಿವರೆಗೆ ಓದುವ ಮಕ್ಕಳಿಗೆ ಅಲ್ಲಿರುವ ವಿಶಾಲ ಜಾಗದಲ್ಲಿ ಶೈಕ್ಷಣಿಕ ವಾತಾವರಣಕ್ಕೆ ಅನುಕೂಲಕರವಾಗುವ ದೂರದೃಷ್ಟಿಯಿಂದ ವೈಜ್ಞಾನಿಕವಾಗಿ ವ್ಯವಸ್ಥಿತ ಯೋಜನೆ ರೂಪಿಸಿ ಕಟ್ಟಡ ನಿರ್ಮಾಣ ಮಾಡಲು ಒತ್ತಾಯಿಸಿದ್ದಾರೆ.ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಕಾಟನ್ ಪಾಶಾ, ಮುಖಂಡ ಹುಸೇನ್ ಪೀರಾ ಮುಜಾವರ್, ಮಾನವಿ ಪಾಶಾ, ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲಾ ಪಾಲಕರ ಹೋರಾಟ ಸಮಿತಿ ಅಧ್ಯಕ್ಷ ಮುನೀರ್ ಅಹ್ಮದ್ ಸಿದ್ದೀಕಿ, ಪ್ರಧಾನ ಕಾರ್ಯದರ್ಶಿ ಎಸ್.ಎ. ಗಫಾರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ್ ಶೀಲವಂತರ್, ಯುವ ಮುಖಂಡ ಜಾಕೀರ್ ಹುಸೇನ್ ಅರಗಂಜಿ, ನಜೀರ್ ಅಹ್ಮದ್ ಬೇಗ, ಎಂ.ಡಿ. ಶಫಿ, ಅಯ್ಯೂಬ್ ಬಹದ್ದೂರ್ ಖಾನ್, ಸೈಯ್ಯದ್ ಸಲೀಮ್ ಖಾದ್ರಿ ಮುಂತಾದವರು ಶಾಸಕರಿಗೆ ಸಂಸದರಿಗೆ ಮೌಲಾನಾ ಆಜಾದ್ ಶಾಲೆಯ ಮಕ್ಕಳ ಸಮಸ್ಯೆ ಮನವರಿಕೆ ಮಾಡಿಸಿ ಸದ್ಯ ಇರುವ ಜಾಗೆಯಲ್ಲಿ ಮುಂದುವರಿಸಲು ಆಗ್ರಹಿಸಿದರು.