ಕಾಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲವಾಡ ಹಾಗೂ ಕರ್ಲವಾಡ ಗ್ರಾಮಗಳಲ್ಲಿ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳ ಹೇಳಿದ ಕಾಮಗಾರಿಗಳನ್ನು ಮಾಡಿ ಒಂದು ವರ್ಷ ಕಳೆದರೂ ಕಾಮಗಾರಿಯ ಹಣ ಪಾವತಿಸಿಲ್ಲ.

ನವಲಗುಂದ:

ತಾಲೂಕಿನ ಕಾಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷಗಳ ಅವಧಿಯಲ್ಲಿ ಜೆಸಿಬಿ ಹಾಗೂ ಹಿಟಾಚಿ ಮಷಿನ್‍ಗಳಿಂದ ನಡೆಸಿದ ಕಾಮಗಾರಿಗಳ ಹಣ ಪಾವತಿಸಿಲ್ಲ ಎಂದು ಆಕ್ರಶಗೊಂಡ ಗುತ್ತಿಗೆದಾರರೊಬ್ಬರು ಗ್ರಾಪಂ ಕಾರ್ಯಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.

ಕಾಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲವಾಡ ಹಾಗೂ ಕರ್ಲವಾಡ ಗ್ರಾಮಗಳಲ್ಲಿ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳ ಹೇಳಿದ ಕಾಮಗಾರಿಗಳನ್ನು ಮಾಡಿ ಒಂದು ವರ್ಷ ಕಳೆದರೂ ಕಾಮಗಾರಿಯ ಹಣ ಪಾವತಿಸಿಲ್ಲ. ಇದರಿಂದ ಆರ್ಥಿಕವಾಗಿ ನಷ್ಟವಾಗಿದ್ದಲ್ಲದೇ ಬ್ಯಾಂಕ್‌ಗಳಿಗೆ ಕಟ್ಟಬೇಕಾದ ಕಂತುಗಳ ಬಾಕಿ ಇಂದಾಗಿ ತೀವ್ರ ತೊಂದರೆಯಾಗಿದೆ ಎಂದು ನೋವು ತೋಡಿಕೊಂಡ ಗುತ್ತಿಗೆದಾರ ಅಶೋಕ ಬಾಡಗಿ, ಈ ಕುರಿತಾಗಿ ನಿರಂತರವಾಗಿ ಗ್ರಾಪಂ ಅಧಿಕಾರಿಗಳು ಹಾಗೂ ಅಧ್ಯಕ್ಷರಿಗೆ ಮನವಿ ಕೊಟ್ಟರು ಪ್ರಯೋಜನವಾಗದ್ದರಿಂದ ಬೇಸತ್ತು ಗ್ರಾಪಂಗೆ ಬೀಗ ಹಾಕಿರುವುದಾಗಿ ತಿಳಿಸಿದರು.

ಈ ಕುರಿತು ಗ್ರಾಪಂ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿದರೂ ಉತ್ತರ ಹೇಳದೇ ಜಾರಿಕೊಂಡರು.