ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 18 ಲಕ್ಷ ಮೀರಿದ ಮತದಾರರು

| Published : Apr 27 2024, 01:22 AM IST

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 18 ಲಕ್ಷ ಮೀರಿದ ಮತದಾರರು
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿನ ಎಂಟು ವಿಧಾನಸಭಾ ಮತಕ್ಷೇತ್ರದಲ್ಲಿ 25,005 ಯುವಕರು, 22,194 ಯುವತಿಯರು ಮತ್ತು ತೃತೀಯಲಿಂಗ ಐವರು ಸೇರಿ ಒಟ್ಟು ಒಟ್ಟು 47,204 ಯುವ ಮತದಾರರು ಮೊದಲ ಬಾರಿಗೆ ಮತ ಚಲಾವಣೆ ಮಾಡಲಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ:

ಚುನಾವಣೆ ಸಮೀಪಿಸುವ ವರೆಗೂ ಮತದಾನದ ನೋಂದಣಿಗೆ ಅವಕಾಶ ನೀಡಿದ ಫಲವಾಗಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮಾ. 16ರಂದು ಘೋಷಿಸಿದ್ದ ಮತದಾರರ ಸಂಖ್ಯೆಗಿಂತ 40,589 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದು, ಈ ಹಿಂದಿನ ಚುನಾವಣೆಗಳನ್ನು ಗಮನಿಸಿದಾಗ 18 ಲಕ್ಷ ಮತದಾರರ ಸಂಖ್ಯೆ ಮೀರಿದ್ದು ದಾಖಲೆ.

ಈ ಮೊದಲು 8,99,246 ಪುರುಷ, 8,92,043 ಮಹಿಳೆ ಸೇರಿ ಒಟ್ಟು 17,91,386 ಮತದಾರರಿದ್ದರು. ಇದೀಗ ಏ. 19ರಂದು ಅಂತಿಮವಾಗಿ ಚುನಾವಣಾ ಆಯೋಗವು ಮೇ 7ರಂದು ಮತದಾನ ಮಾಡಲು ಅರ್ಹರಿರುವ ಮತದಾರರ ಪಟ್ಟಿ ಬಿಡುಗಡೆ ಮಾಡಿದ್ದು, 9,17,926 ಪುರುಷ, 9,13,949 ಮಹಿಳಾ, 100 ತೃತೀಯ ಲಿಂಗಗಳು ಸೇರಿ 18,31,975 ಮತದಾರರು ಇದ್ದಾರೆ. ಇದುವೆರೆಗಿನ ಲೋಕಸಭಾ ಚುನಾವಣೆಗಳಲ್ಲಿಯೇ ಅತೀ ಹೆಚ್ಚಿನ ಮತದಾರರ ಸಂಖ್ಯೆ ಇದು.

ಎಲ್ಲೆಲ್ಲಿ ಎಷ್ಟೇಷ್ಟು ಮತದಾರರು:

ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯ ಏಳು ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಸೇರಿ ಒಟ್ಟು ಎಂಟು ಕ್ಷೇತ್ರಗಳಿವೆ. ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಅವರು ಮಾಹಿತಿ ನೀಡಿರುವಂತೆ, ನವಲಗುಂದ ಮತಕ್ಷೇತ್ರದಲ್ಲಿ 1,07,301 ಪುರುಷ, 1,05,767 ಮಹಿಳೆಯರು, ತೃತೀಯ ಲಿಂಗ ಒಂಭತ್ತು ಸೇರಿ ಒಟ್ಟು 2,13,077 ಮತದಾರರಿದ್ದಾರೆ. ಕುಂದಗೋಳ ಮತಕ್ಷೇತ್ರದಲ್ಲಿ 97,720 ಪುರುಷರು, 93,681 ಮಹಿಳೆಯರು ಮತ್ತು ತೃತೀಯಲಿಂಗ ಎಂಟು ಸೇರಿ ಒಟ್ಟು 1,91,409 ಮತದಾರರಿದ್ದಾರೆ. ಧಾರವಾಡ ಮತಕ್ಷೇತ್ರದಲ್ಲಿ 1,12,362 ಪುರುಷರು, 1,12,454 ಮಹಿಳೆಯರು ಮತ್ತು ತೃತೀಯಲಿಂಗ ಹತ್ತು ಸೇರಿ ಒಟ್ಟು 2,24,8256 ಮತದಾರರಿದ್ದಾರೆ. ಹು-ಧಾ ಪೂರ್ವ ಮತಕ್ಷೇತ್ರದಲ್ಲಿ 1,09,913 ಪುರುಷರು, 1,12,297 ಮಹಿಳೆಯರು ಮತ್ತು ತೃತೀಯಲಿಂಗ 17 ಸೇರಿ ಒಟ್ಟು 2,22,227 ಮತದಾರರಿದ್ದಾರೆ.

ಹು-ಧಾ ಕೇಂದ್ರದಲ್ಲಿ 1,31,763 ಪುರುಷರು, 1,35,451 ಮಹಿಳೆಯರು ಮತ್ತು ತೃತೀಯಲಿಂಗ 37 ಸೇರಿ ಒಟ್ಟು 2,67,251 ಮತದಾರರಿದ್ದಾರೆ. ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ 1,37,037 ಪುರುಷರು, 1,43,030 ಮಹಿಳೆಯರು ಮತ್ತು ತೃತೀಯಲಿಂಗ ಆರು ಸೇರಿ ಒಟ್ಟು 2,80,073 ಮತದಾರರಿದ್ದಾರೆ. ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ 1,02,457 ಪುರುಷರು, 97,484 ಮಹಿಳೆಯರು ಮತ್ತು ತೃತೀಯಲಿಂಗ ಆರು ಸೇರಿ ಒಟ್ಟು 1,99,974 ಮತದಾರರಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತಕ್ಷೇತ್ರದಲ್ಲಿ 1,19,373 ಪುರುಷರು, 1,13,785 ಮಹಿಳೆಯರು ಮತ್ತು ತೃತೀಯಲಿಂಗ ಏಳು ಸೇರಿ ಒಟ್ಟು 2,33,165 ಮತದಾರರಿದ್ದಾರೆ.

47 ಸಾವಿರ ಯುವ ಮತದಾರರು:

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿನ ಎಂಟು ವಿಧಾನಸಭಾ ಮತಕ್ಷೇತ್ರದಲ್ಲಿ 25,005 ಯುವಕರು, 22,194 ಯುವತಿಯರು ಮತ್ತು ತೃತೀಯಲಿಂಗ ಐವರು ಸೇರಿ ಒಟ್ಟು ಒಟ್ಟು 47,204 ಯುವ ಮತದಾರರು ಮೊದಲ ಬಾರಿಗೆ ಮತ ಚಲಾವಣೆ ಮಾಡಲಿದ್ದಾರೆ. ನವಲಗುಂದಲ್ಲಿ 2,770 ಯುವಕರು, 2,591 ಯುವತಿಯರು ಸೇರಿ 5,361 ಮತದಾರರು. ಕುಂದಗೋಳದಲ್ಲಿ 3,877 ಯುವಕರು 2,520 ಯುವತಿಯರು, ತೃತೀಯಲಿಂಗ ಒಂದು ಸೇರಿ 5,398 ಮತದಾರರು. ಧಾರವಾಡದಲ್ಲಿ 3,325 ಯುವಕರು, 2675 ಯುವತಿಯರು ಸೇರಿ 6 ಸಾವಿರ ಮತದಾರರಿದ್ದಾರೆ. ಹು-ಧಾ ಪೂರ್ವದಲ್ಲಿ 2,655 ಯುವಕರು, 2408 ಯುವತಿಯರು, ತೃತೀಯಲಿಂಗ ಮೂರು ಸೇರಿ 5,066 ಮತದಾರರು. ಹು-ಧಾ ಕೇಂದ್ರದಲ್ಲಿ 2,834 ಯುವಕರು, 2,657 ಯುವತಿಯರು ಸೇರಿ ಒಟ್ಟು 5,491 ಮತದಾರರು. ಹು-ಧಾ ಪಶ್ಚಿಮದಲ್ಲಿ 3,103 ಯುವಕರು 2,844 ಯುವತಿಯರು ಸೇರಿ 5,947 ಮತದಾರರು. ಕಲಘಟಗಿಯಲ್ಲಿ 3,486 ಯುವಕರು, 3,070 ಯುವತಿಯರು ಸೇರಿ 6,556 ಮತದಾರರು. ಹಾವೇರಿ ಜಿಲ್ಲೆಯ ಶಿಗ್ಗಾಂವದಲ್ಲಿ 3,955 ಯುವಕರು, 3,429 ಯುವತಿಯರು, ತೃತೀಯಲಿಂಗ ಒಂದು ಸೇರಿ ಒಟ್ಟು 7,385 ಮತದಾರರಿದ್ದಾರೆ.

14,772 ಪುರುಷರು, 11,012 ಮಹಿಳೆಯರು ಮತ್ತು ತೃತೀಯಲಿಂಗ ಮೂರು ಸೇರಿ ಒಟ್ಟು 25,787 ವಿಕಲಚೇತನ ಮತದಾರರು ನೊಂದಾಯಿತರಾಗಿದ್ದಾರೆ. ಇನ್ನು, 85 ವರ್ಷ ಮೇಲ್ಪಟ್ಟ 8,254 ಪುರುಷರು, 10,372 ಮಹಿಳೆಯರು ಸೇರಿ ಒಟ್ಟು 18,626 ಹಿರಿಯ ಮತದಾರರೂ ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಮಾಹಿತಿ ನೀಡಿದ್ದಾರೆ. ಬಾಕ್ಸ್..

ಪುರುಷರಿಗಿಂತ ಮಹಿಳೆಯರೇ ಮೇಲುಗೈ

ಧಾರವಾಡ ಮತಕ್ಷೇತ್ರದಲ್ಲಿ ಪುರುಷರಿಗಿಂತ 92 ಮಹಿಳಾ ಮತದಾರರು ಹೆಚ್ಚಿದ್ದರೆ, ಹು-ಧಾ ಪೂರ್ವದಲ್ಲಿ ಬರೋಬ್ಬರಿ 2,384 ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿದ್ದಾರೆ. ಅದೇ ರೀತಿ ಹು-ಧಾ ಕೇಂದ್ರದಲ್ಲಿ ಪುರಷರಿಗಿಂತ 3,688 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ. ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಪುರುಷರಿಗಿಂತ 5,993 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ.ಹೆಚ್ಚು-ಕಡಿಮೆ ಮತದಾರರು..

ಧಾರವಾಡ ಲೋಕಸಭಾ ವ್ಯಾಪ್ತಿ ಪೈಕಿ ಹು-ಧಾ ಪಶ್ಚಿಮದಲ್ಲಿ ಅತೀ ಹೆಚ್ಚಿನ ಮತದಾರರು ಇದ್ದಾರೆ. 1,37,037 ಪುರುಷರು, 1,43,030 ಮಹಿಳೆಯರು ಮತ್ತು ತೃತೀಯಲಿಂಗ ಆರು ಸೇರಿ ಒಟ್ಟು 2,80,073 ಮತದಾರರಿದ್ದಾರೆ. ಹಾಗೆಯೇ, ಕುಂದಗೋಳ ಮತಕ್ಷೇತ್ರದಲ್ಲಿ ಅತೀ ಕಡಿಮೆ ಮತದಾರರಿದ್ದಾರೆ. 97,720 ಪುರುಷರು, 93,681 ಮಹಿಳೆಯರು ಮತ್ತು ತೃತೀಯಲಿಂಗ ಎಂಟು ಸೇರಿ ಒಟ್ಟು 1,91,409 ಮತದಾರರಿದ್ದಾರೆ.