ಸಾರಾಂಶ
ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸವೋಚ್ಛ ನ್ಯಾಯಾಲಯದ ಆದೇಶಕ್ಕೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ಅರ್ಜಿ ಕಾನೂನುಬಾಹಿರವಾಗಿ ಪುನರ್ ಪರಿಶೀಲನಾ ಪ್ರಕ್ರಿಯೆಗೆ ಉಪವಿಭಾಗ ವ್ಯಾಪ್ತಿಯ ಸುಮಾರು ಐದು ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಆಕ್ಷೇಪ ಪತ್ರ ಸಲ್ಲಿಸಿದ್ದರು. ಶಿರಸಿ ಉಪವಿಭಾಗ ಅಧಿಕಾರಿ ಮತ್ತು ಉಪವಿಭಾಗ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷೆ ಕೆ.ವಿ. ಕಾವ್ಯಾರಾಣಿ ಅವರ ಕಚೇರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಆಕ್ಷೇಪಣಾ ಪತ್ರ ಸಲ್ಲಿಸಲಾಯಿತು.
ನವೆಂಬರ್ 2024ರ ನ. 28ರಂದು ಮುಖ್ಯ ಕಾರ್ಯದರ್ಶಿ ಸಮಿತಿಯು ರಾಜ್ಯಾದಂತ ವಿವಿಧ ಅರಣ್ಯ ಹಕ್ಕು ಸಮಿತಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪುನರ್ ಪರಿಶೀಲಿಸಲು ನಿರ್ದೇಶನ ನೀಡಿದೆ. ಅಪೂರ್ಣ, ಅಸ್ತಿತ್ವವಿಲ್ಲದ ಕಾನೂನುಬಾಹಿರ ಹಕ್ಕು ಸಮಿತಿಗಳಿಂದ ಅರ್ಜಿ ಸಲ್ಲಿಸಲು ಸಮಿತಿಯಲ್ಲಿ ಶೇ. ೫೦ರಷ್ಟು ಸದಸ್ಯರ ಅನುಪಸ್ಥಿತಿಯಲ್ಲಿ ಅರ್ಜಿ ವಿಲೇವಾರಿ ಮಾಡಲು ಪ್ರಾರಂಭಿಸಿರುವುದಕ್ಕೆ ಅರ್ಜಿಯಲ್ಲಿ ಆಕ್ಷೇಪದಲ್ಲಿ ಉಲ್ಲೇಖಿಸಲಾಗಿದೆ.ಕಾನೂನು ವ್ಯತಿರಿಕ್ತವಾಗಿ ಉಚ್ಛ ನ್ಯಾಯಾಲಯದ ಮತ್ತು ಕೇಂದ್ರ ಸರ್ಕಾರದ ಆದೇಶ ನಿರ್ಲಕ್ಷಿಸಿ ಮೂರು ತಲೆಮಾರಿನ ನಿರ್ದಿಷ್ಟ ೧೯೩೦ರ ಪೂರ್ವದ ದಾಖಲೆಗೆ ಸಾಕ್ಷ್ಯ ಒದಗಿಸಲು ಸಮಿತಿಗಳು ನೋಟಿಸ್ ನೀಡುತ್ತಿರುವುದು ಕಾನೂನುಬಾಹಿರ ಎಂದು ಆಕ್ಷೇಪ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.ಆಕ್ಷೇಪ ಪತ್ರದ ನೇತೃತ್ವವನ್ನು ಜಿಲ್ಲಾ ಸಂಚಾಲಕಾರಾದ ಇಬ್ರಾಹಿಂ ಗೌಡಳ್ಳಿ, ನೆಹರು ನಾಯ್ಕ, ಬಿಳೂರು ಕಿರಣ ಮರಾಠಿ ಯಲ್ಲಾಪುರ ಅಧ್ಯಕ್ಷ ಭೀಮಶಿ ವಾಲ್ಮಕಿ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಹರಿಹರ ನಾಯ್ಕ ಓಂಕಾರ್, ಸೀತರಾಮ ಗೌಡ ಹುಕ್ಕಳ್ಳಿ, ಈರಾ ಗೌಡ ನಿಲ್ಕುಂದ, ಸೀತರಾಮ ನಾಯ್ಕ ಕುಂದರಗಿ, ಅನಂತಗೌಡ ಮಾವಿನಮನೆ, ಭಾಸ್ಕರ ಗೌಡ, ಚಂದ್ರು ಪೂಜಾರಿ ಮಂಚಿಕೇರಿ, ಎಂ.ಆರ್. ನಾಯ್ಕ, ರಾಜು ನರೇಬೈಲ್ ಮುಂತಾದವರು ನೇತೃತ್ವ ವಹಿಸಿದರು.
ತೀವ್ರ ಆಕ್ಷೇಪ: ಕಾನೂನುಬಾಹಿರ, ಅರ್ಜಿ ಪುನರ್ ಪರಿಶೀಲನೆ ಪ್ರಕ್ರಿಯೆ ಜರುಗುತ್ತಿರುವುದು ವಿಷಾದಕರ. ಸ್ವಾತಂತ್ರ್ಯ ಪೂರ್ವದ ವೈಯಕ್ತಿಕ ನಿರ್ದಿಷ್ಟ ದಾಖಲೆ ಅರಣ್ಯ ಹಕ್ಕು ಸಮಿತಿ ಒತ್ತಾಯಿಸುತ್ತಿರುವುದಕ್ಕೆ ಅಧ್ಯಕ್ಷ ರವೀಂದ್ರ ನಾಯ್ಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಎಸಿ ಗೈರು- ತೀವ್ರ ಆಕ್ರೋಶ: ತೀವ್ರ ಆಕ್ರೋಶ ಮುಂಚಿತವಾಗಿ ಲಿಖಿತ ಸಾರ್ವತ್ರಿಕವಾಗಿ ಆಕ್ಷೇಪಣಾ ಪತ್ರ ಸಲ್ಲಿಸುವ ಕುರಿತು ಮಾಹಿತಿ ನೀಡಿದಾಗಿಯೂ ಉಪವಿಭಾಗ ಅಧಿಕಾರಿಗಳು ಗೈರು ಹಾಜರಾತಿ ಇಲ್ಲದ ಬಗ್ಗೆ ಅರಣ್ಯವಾಸಿಗಳು ತೀವ್ರ ಆಕ್ರೋಶ ವ್ಯಕ್ತವಾದವು. ಎಸಿಯವರು ಹಾಜರಿರಬೇಕೆಂದು ಅರಣ್ಯವಾಸಿಗಳು ಪಟ್ಟು ಹಿಡಿದ ನಂತರ ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ಅರಣ್ಯವಾಸಿಗಳ ಸಮಸ್ಯೆಗಳನ್ನು ಆಲಿಸಿದರು.ಅರಣ್ಯವಾಸಿಗಳೊಂದಿಗೆ ಮುಕ್ತ ಚರ್ಚೆ: ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಅರಣ್ಯವಾಸಿಗಳೊಂದಿಗೆ ಉಪವಿಭಾಗ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರು ಹಾಗೂ ಉಪವಿಭಾಗ ಅಧಿಕಾರಿಗಳಾದ ಕಾವ್ಯಾರಾಣಿ ಅವರು ಮುಂದಿನ ಒಂದು ವಾರದಲ್ಲಿ ಮುಕ್ತವಾಗಿ ಚರ್ಚೆ ಮಾಡಲು ಬಯಸಿದ್ದಾರೆಂದು ತಹಸೀಲ್ದಾರ್ ಶ್ರೀಧರ ಮುಂದಲಮನಿ ಅರಣ್ಯವಾಸಿಗಳಿಗೆ ತಿಳಿಸಿದರು.ಬಗರ್‌ಹುಕುಂ ಸಭೆ, 6 ಅರ್ಜಿ ಮಂಜೂರು
ಕುಮಟಾ: ಇಲ್ಲಿನ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿ ಮೀಟಿಂಗ್ ಹಾಲ್‌ನಲ್ಲಿ ಇತ್ತೀಚೆಗೆ ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಬಗರ್‌ಹುಕುಂ ಸಮಿತಿ ಸಭೆಯಲ್ಲಿ ಫಲಾನುಭವಿಗಳಿಗೆ ಭೂ ಹಂಚಿಕೆ ಕುರಿತು ಚರ್ಚಿಸಿ ನಿರ್ಣಯಿಸಲಾಯಿತು. ಬಳಿಕ ಫಲಾನುಭವಿಗಳಿಗೆ ಭೂ ಮಂಜೂರಿ ಕುರಿತು ಮಾಹಿತಿ ನೀಡಲಾಯಿತು.ಸಭೆಯಲ್ಲಿ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಬಗರ್ ಹುಕುಂ ಸಮಿತಿಯಲ್ಲಿ ಒಟ್ಟೂ ೬ ಅರ್ಜಿಗಳಿಗೆ ಮಂಜೂರಿ ನೀಡಲಾಯಿತು.ಮಳವಳ್ಳಿಯ ಶೇಖರ ದೇವು ಗೌಡ(೧ ಎಕರೆ ೨೫ ಗುಂಟೆ), ಗೋಪಾಲ ಮಾಬ್ಲು ಗೌಡ(೧ ಎಕರೆ ೨೦ ಗುಂಟೆ), ಕುಸುಮಾಕರ ನಾರಾಯಣ ಗೌಡ(೧ ಎಕರೆ ೨೦ ಗುಂಟೆ), ನಾರಾಯಣ ಜೋಗಿ ಗೌಡ(೧ ಎಕರೆ ೨೦ ಗುಂಟೆ), ದೀವಳ್ಳಿಯ ಮಹಾದೇವಿ ನಾಯ್ಕ(೧ ಎಕರೆ), ಕೃಷ್ಣ ಲಿಂಗಪ್ಪ ನಾಯ್ಕ(೧ ಎಕರೆ) ಮಂಜೂರಿ ನೀಡಲಾಯಿತು. ಸಭೆಯಲ್ಲಿ ಬಗರ್ ಹುಕುಂ ಸಮಿತಿ ಸದಸ್ಯರಾದ ಶ್ರೀಧರ ಕಲಗದ್ದೆ, ಪ್ರೇಮಾ ನಾಯ್ಕ, ಕುಮಾರ ಭಟ್, ತಹಸೀಲ್ದಾರ್ ಸತೀಶ ಗೌಡ ಇತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))