ಸಾರಾಂಶ
ಕವಿತಾಳ ಪಟ್ಟಣದ ಸ್ನೇಹ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟನೆ ನಿಮಿತ್ತ ಪೂಜೆ ಹಾಗೂ ಪಾಲಕರ ಪಾದಪೂಜೆ ಕಾರ್ಯಕ್ರಮ ಜರುಗಿತು.
ಕವಿತಾಳ: ಪಟ್ಟಣದ ಸ್ನೇಹ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟನೆ ನಿಮಿತ್ತ ಪೂಜೆ ಹಾಗೂ ಪಾಲಕರ ಪಾದಪೂಜೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ವಿಜಯ ಭಾಸ್ಕರ್ ಕೋಸ್ಗಿ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಜತೆಗೆ ಸಂಪ್ರದಾಯ ಬಗ್ಗೆ ಮಾಹಿತಿ ನೀಡುವುದು ಅಗತ್ಯ. ಈ ನಿಟ್ಟಿನಲ್ಲಿ ಪಾಲಕರ ಬಗ್ಗೆ ಮಕ್ಕಳಲ್ಲಿ ಗೌರವ ಭಾವನೆ ಮೂಡಲಿ ಎನ್ನುವ ಉದ್ದೇಶದಿಂದ ಪಾಲಕರ ಪಾದಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳ ಕಲಿಕೆ ಬಗ್ಗೆ ಕಾಳಜಿ ವಹಿಸುವ ಪಾಲಕರು ಅವರ ನಡವಳಿಕೆ, ಸ್ನೇಹಿತರ ಮಾಹಿತಿ, ವರ್ತನೆ ಬಗ್ಗೆ ಗಮನಹರಿಸಿ ಸರಿದಾರಿಯಲ್ಲಿ ಹೋಗುವಂತೆ ತಿಳುವಳಿಕೆ ನೀಡಬೇಕು ಎಂದು ಹೇಳಿದರು.ಸಂಸ್ಥೆ ಪದಾಧಿಕಾರಿಗಳಾದ ಮುರಳೀಧರ ಕೋಸ್ಗಿ, ಜನಾರ್ಧನ ಕೋಸ್ಗಿ, ಸೌಮ್ಯ ಕೋಸ್ಗಿ, ಭವಾನಿ ಕೋಸ್ಗಿ, ರಜನಿ ಕೋಸ್ಗಿ, ಮುಖ್ಯಶಿಕ್ಷಕ ಬಸವರಾಜ, ಶಿಕ್ಷಕ ಮಹೇಶ, ಅನನ್ಯ, ಅಕ್ಕಮಹಾದೇವಿ, ಮಹಾದೇವಿ, ಶಾಂತಾ, ವನಜಾಕ್ಷೀ ಮತ್ತು ಪಾಲಕರು ಪಾಲ್ಗೊಂಡಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.