ಸಾರಾಂಶ
ಅರಕಲಗೂಡು: ಪಟ್ಟಣದಲ್ಲಿ ಶ್ರೀ ಧರ್ಮಸ್ಥಳ ಪಾದಯಾತ್ರೆ ಸಮಿತಿ ವತಿಯಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಶಾಸಕ ಎ. ಮಂಜು ಜನರಿಗೆ ಊಟ ಬಡಿಸುವ ಮೂಲಕ ಚಾಲನೆ ನೀಡಿದರು. ಇದಕ್ಕೂ ಮುನ್ನ ದೊಡ್ಡಮ್ಮ ದೇವಸ್ಥಾನ ಆವರಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಜನರಿಗೆ ಅನ್ನದಾನ ಮಾಡಿ ಪಾದಯಾತ್ರೆ ಹೊರಟು ದೇವರಿಗೆ ಭಕ್ತಿ- ಭಾವ ಅರ್ಪಿಸುವುದು ಪುಣ್ಯದ ಕಾಯಕವಾಗಿದೆ. ಪಾದಯಾತ್ರಿಗಳು ಪ್ರತ್ಯೇಕ ತಂಡಗಳಲ್ಲಿ ತೆರಳದೆ ಒಟ್ಟಾಗಿ ಸಾಗಬೇಕು ಎಂದರು. ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಪಾದಯಾತ್ರೆ ತೆರಳಿ ಧರ್ಮಸ್ಥಳ ಸನ್ನಿಧಿಯ ಮಂಜುನಾಥ ಸ್ವಾಮಿ ದರ್ಶನ ಮಾಡಿದರೆ ದೇವರ ಅನುಗ್ರಹ ಪ್ರಾಪ್ತಿಯಾಗಲಿದೆ. ಪುಣ್ಯ ಪ್ರಾಪ್ತಿಯಾಗಿ ಸಂಕಷ್ಟಗಳು ದೂರವಾಗಲಿವೆ ಎಂದರು. ವೀರಶೈವ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಮುಖಂಡರಾದ ಜಿ.ಎಸ್. ದಿವಾಕರ್, ಮಂಜುಶೆಟ್ಟಿಗೌಡ , ಶಶಿಕುಮಾರ್ ಮಾತನಾಡಿದರು. ಮುಖಂಡರಾದ ರಾಜೇಗೌಡ, ಗೋವಿಂದೇಗೌಡ, ಸತೀಶ್, ರವಿಕುಮಾರ್, ಲೋಕೇಶ್ ಇತರರಿದ್ದರು.