ಕತ್ತಿ-ಪಾಟೀಲ ಬಣಕ್ಕೆ ಬೆಂಬಲ ಸೂಚಿಸಿ ಪಾದಯಾತ್ರೆ

| Published : Sep 13 2025, 02:06 AM IST

ಸಾರಾಂಶ

ಸಹಕಾರಿ ತತ್ವದಡಿ ವಿದ್ಯುತ್ ಪೂರೈಸುತ್ತಿರುವ ದೇಶದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪ್ರತಿಷ್ಠಿತ ದಿ.ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ ಪೆನಲ್‌ಗೆ ಬೆಂಬಲಿಸಿ ಸೂಚಿಸಿ ತಾಲೂಕಿನ ಸಾರಾಪುರ ಗ್ರಾಮದಲ್ಲಿ ಶುಕ್ರವಾರ ಗ್ರಾಮಸ್ಥರು ಪಾದಯಾತ್ರೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಬಸ್ ನಿಲ್ದಾಣದಿಂದ ಆರಂಭವಾದ ಪಾದಯಾತ್ರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಗ್ರಾಮ ಪಂಚಾಯಿತಿ ಕಚೇರಿವರೆಗೆ ಮುಕ್ತಾಯವಾಯಿತು. ಇದಕ್ಕೂ ಮೊದಲು ಮಹಾಕಾಳಿ ದೇವಸ್ಥಾನ ಆವರಣದಲ್ಲಿ ಜಮಾಯಿಸಿದ ಕತ್ತಿ-ಪಾಟೀಲ ಬೆಂಬಲಿತ ಮುಖಂಡರು, ಹಿತೈಷಿಗಳು, ಕಾರ್ಯಕರ್ತರು, ಸ್ವಯಂ ಪ್ರೇರಿತವಾಗಿ ಪ್ರತಿಜ್ಞೆ ಮಾಡಿದರು.ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಜಿ.ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಸತ್ಯಪ್ಪಾ ಹಾಲಟ್ಟಿ, ಸದಸ್ಯ ಪುಟ್ಟು ಚೌಗಲಾ, ಪಿಕೆಪಿಎಸ್ ಅಧ್ಯಕ್ಷ ರಾಮಗೌಡ ಹೆಬ್ಬಾಳ, ಸದಸ್ಯರಾದ ಶಂಕರ ಬಡಗಾಂವಿ, ಸಿದ್ದಪ್ಪ ಪೂಜೇರಿ, ರಾಜು ಕಂಠೀಕಾರ, ಮಲ್ಲಪ್ಪಾ ಚೌಗಲಾ, ಅನಿಲ ಗುಡದಿ, ಬಸವರಾಜ ಮದಕರಿ, ಎಸ್‌ಡಿಎಂಸಿ ಅಧ್ಯಕ್ಷ ಶಾಂತಿನಾಥ ಹೆಬ್ಬಾಳ, ಮುಖಂಡರಾದ ಸಿದ್ಧು ಉಪಾಧ್ಯೆ, ಪಾಂಡು ಗುಡದಿ, ರವೀಂದ್ರ ಪಾಟೀಲ, ರಾಮಪ್ಪಾ ಪೂಜೇರಿ, ಮಹಾವೀರ ಮಗದುಮ್ಮ, ಅಜೀತ ತಂಗಡಿ, ವಿಠ್ಠಲ ಮಾಸಪ್ಪಗೋಳ, ವಾಸುದೇವ ಹಾಲಟ್ಟಿ, ಪ್ರಕಾಶ ಪಾಟೀಲ, ನಾಗರಾಜ ಗಸ್ತಿ, ಸಂತೋಷ ಹಟ್ಟಿ, ಪ್ರಕಾಶ ಕಾಂಬಳೆ, ತಬ್ಬು ಮಕಾನದಾರ ಮತ್ತಿತರರು ಉಪಸ್ಥಿತರಿದ್ದರು.