ಪೀತಾಂಬರ ಸೀರೆ ಅರ್ಪಿಸುವ ಪಾದಯಾತ್ರೆ ಪ್ರತಿ ವರ್ಷ ನಂ. 10 ಮುದ್ದಾಪುರ ಗ್ರಾಮದಿಂದ ಹಾದು ಹೋಗಬೇಕು
ಕಂಪ್ಲಿ: ದೇವಾಂಗ ಸಮಾಜದ ಗಾಯತ್ರಿಪೀಠ ಹಂಪೆಯಿಂದ ಬಾದಾಮಿಯ ಬನಶಂಕರಿ ದೇವಿಗೆ ಪೀತಾಂಬರ ಸೀರೆ ಅರ್ಪಿಸುವ ಪಾದಯಾತ್ರೆ ಪ್ರತಿ ವರ್ಷ ನಂ. 10 ಮುದ್ದಾಪುರ ಗ್ರಾಮದಿಂದ ಹಾದು ಹೋಗಬೇಕು ಎಂದು ನಂ. 10 ಮುದ್ದಾಪುರ ದೇವಾಂಗ ಸಮಾಜದ ಅಧ್ಯಕ್ಷ ಕೆ. ಕೊಮಾರೆಪ್ಪ ಒತ್ತಾಯಿಸಿದರು.
ದೇವಾಂಗ ಜಗದ್ಗುರು ಶ್ರೀದಯಾನಂದಪುರಿ ಮಹಾಸ್ವಾಮಿಗಳು ಮಂಗಳವಾರ ನಂ. 10 ಮುದ್ದಾಪುರ ಗ್ರಾಮದ ಶ್ರೀಚೌಡೇಶ್ವರಿ ದೇವಸ್ಥಾನಕ್ಕೆ, ಬಾದಾಮಿ ಬನಶಂಕರಿಗೆ ಅರ್ಪಿಸುವ ಪೀತಾಂಬರಿ ಸೀರೆಯೊಂದಿಗೆ ಆಗಮಿಸಿದ ಸಂದರ್ಭದಲ್ಲಿ ಮನವಿ ಸಲ್ಲಿಸಿ, ನಂ. 10ಮುದ್ದಾಪುರ, ಕಂಪ್ಲಿಯಲ್ಲಿ ದೇವಾಂಗ ಸಮುದಾಯದವರಿದ್ದು, ಮೇಲಾಗಿ ಕಂಪ್ಲಿಯಲ್ಲಿ ಮೂಲ ದೇವಾಂಗ(ಆನೆ) ಮಠ ಇದ್ದುದರಿಂದ ತಾವು ಪ್ರತಿವರ್ಷ ತಪ್ಪದೆ ನಂ. 10ಮುದ್ದಾಪುರ ಗ್ರಾಮದ ಮೂಲಕವೇ ಪೀತಾಂಬರಿ ಸೀರೆ ಒಯ್ಯುವಲ್ಲಿ ಶ್ರೀಗಳು ಹಿತಾಸಕ್ತಿ ತೋರಬೇಕು. ದೇವಾಂಗ ಸಮಾಜದವರ ಗುರುಭಕ್ತಿಯನ್ನು ಪರಿಗಣಿಸಿ ತಪ್ಪದೆ ನಂ.10 ಮುದ್ದಾಪುರ, ಕಂಪ್ಲಿ ಮೂಲಕ ಹಾದುಹೋಗುವಂತೆ ಒತ್ತಾಯಿಸಿದರು.ಬೆಂಗಳೂರಿನ ದೇವಾಂಗಾಶ್ರಮದ ಚಿದ್ರೂಪಾನಂದ ಸ್ವಾಮೀಜಿ, ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಕಲ್ಬುರ್ಗಿ ಸೂಳಿಭಾವಿ, ಸಂಚಾಲಕ ಗಂಗಾವತಿಯ ಪರಗಿ ನಾಗರಾಜ, ಸದಸ್ಯ ಹೊಸಪೇಟೆಯ ಅಗಳಿ ಪಂಪಾಪತಿ, ರಾಜ್ಯ ಉಪಾಧ್ಯಕ್ಷ ವಿರೂಪಾಕ್ಷ ಗೂಳಿ, ದೇವಾಂಗ ಸಮಾಜದ ಪದಾಧಿಕಾರಿಗಳಾದ ಬುದ್ದಿ ಶ್ರೀನಿವಾಸಪ್ಪ, ಗಂಜಿ ಮಂಜುನಾಥ, ಕನಕ ಬಸವರಾಜ, ಪಿ.ಮಂಜುನಾಥ, ವಿ.ವಿಠೋಬಣ್ಣ, ಬಿ.ಪ್ರಭಾಕರ, ಇಂದ್ರಿಪಿ ಮಲ್ಲಿಕಾರ್ಜುನ, ಪಿ.ರ‍್ರಿಸ್ವಾಮಿ, ಕೆ.ಮಲ್ಲಿಕಾರ್ಜುನ, ಐ.ಚಿದಾನಂದ, ದ್ರಾಕ್ಷಾಯಣಮ್ಮ ಇತರರಿದ್ದರು.
ಕಂಪ್ಲಿ: ಬಣ್ಣದ ಶ್ರೀಚೌಡೇಶ್ವರಿದೇವಿ ದೇವಸ್ಥಾನಕ್ಕೆ ಪೀತಾಂಬರ ಸೀರೆ ಪಾದಯಾತ್ರೆ ಆಗಮಿಸಿದ ಸಂದರ್ಭದಲ್ಲಿ ದೇವಾಂಗಮಠದ ಸಾವಿತ್ರಮ್ಮ, ಸಮಾಜದ ನಗರ ಅಧ್ಯಕ್ಷ ಸಪ್ಪರದ ರಾಘವೇಂದ್ರ, ಮಹಿಳಾ ಅಧ್ಯಕ್ಷ ಇಂಡಿ ತಾರಾ, ಪದಾಧಿಕಾರಿಗಳಾದ ಮಾಗನೂರು ರಾಜೇಶವರ್ಮ, ಎಸ್. ತುಳಸಿರಾಮಚಂದ್ರ, ದೂಪದ ಸುಭಾಶ್ಚಂದ್ರ, ವಣಕಿ ಶಂಕರ್, ಗದ್ಗಿ ವಿರೂಪಾಕ್ಷಿ, ವಣಕಿ ವೆಂಕಟೇಶ, ದೂಪದ ಪ್ರಶಾಂತ್, ಪುಟ್ಟಿ ರಾಘವೇಂದ್ರ, ಎಸ್. ಶಂಕ್ರಮ್ಮ, ಓದಾ ರಾಧಮ್ಮ, ಮಿಟ್ಟಿ ವಿಜಯಲಕ್ಷ್ಮೀ, ಕಾಳ್ಗಿ ವಿಶಾಲಾಕ್ಷಿ, ಮಾಗನೂರು ಸುಧಾ ಸೇರಿ ಮಹಿಳಾ ಪದಾಧಿಕಾರಿಗಳಿದ್ದರು.