ಸಾರಾಂಶ
ಸೊರಬ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಬೆಂಕಿ ತಗುಲಿ ಭತ್ತದ ಹುಲ್ಲಿನ ಪೆಂಡಿ ಹಾಗೂ ಭತ್ತ ಸಂಪೂರ್ಣ ನಾಶವಾಗಿ ಲಕ್ಷಾಂತರ ರು. ನಷ್ಟವಾದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ. ಮೂರು ಸಾವಿರ ಹುಲ್ಲಿನ ಪೆಂಡಿ ಮತ್ತು ಹತ್ತು ಕ್ವಿಂಟಲ್ ಭತ್ತ ಸಂಪೂರ್ಣ ಭಸ್ಮವಾಗಿದೆ.
ಸೊರಬ: ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಬೆಂಕಿ ತಗುಲಿ ಭತ್ತದ ಹುಲ್ಲಿನ ಪೆಂಡಿ ಹಾಗೂ ಭತ್ತ ಸಂಪೂರ್ಣ ನಾಶವಾಗಿ ಲಕ್ಷಾಂತರ ರು. ನಷ್ಟವಾದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.
ಕಮಲಾಪುರ ಗ್ರಾಮದ ಸರ್ವೆ ನಂ.6 ರಲ್ಲಿನ ನಾಗರಾಜ ಮತ್ತು ೭ರಲ್ಲಿನ ಶೇಖರ ಎಂಬವರಿಗೆ ಸೇರಿದ ಜಮೀನಿನಲ್ಲಿ ತರಗೆಲೆಗಳಿಗೆ ಹಚ್ಚಿದ ಬೆಂಕಿಯ ಕಿಡಿ ಜಮೀನಿನಲ್ಲಿದ್ದ ಭತ್ತದ ಹುಲ್ಲು ಮತ್ತು ಕಟಾವು ಮಾಡಿದ್ದ ಭತ್ತಕ್ಕೆ ಆವರಿಸಿದೆ. ಸುಮಾರು ಮೂರು ಸಾವಿರ ಹುಲ್ಲಿನ ಪೆಂಡಿ ಮತ್ತು ಹತ್ತು ಕ್ವಿಂಟಲ್ ಭತ್ತ ಸಂಪೂರ್ಣ ಭಸ್ಮವಾಗಿದೆ. ಇದರಲ್ಲಿ ನಾಗರಾಜ ಅವರಿಗೆ ಸೇರಿದ ೨ ಸಾವಿರ ಹುಲ್ಲಿನ ಪೆಂಡಿ, ೧೦ ಕ್ವಿಂಟಲ್ ಭತ್ತ ಹಾಗೂ ಶೇಖರ ಅವರಿಗೆ ಸೇರಿದ ೧ ಸಾವಿರ ಹುಲ್ಲಿನ ಪೆಂಡಿ ಇದ್ದವೆಂದು ತಿಳಿದು ಬಂದಿದೆ. ಅಕ್ಕಪಕ್ಕದ ಜಮೀನಿನಲ್ಲಿ ಯಾವುದೇ ಬೆಳೆ ಇಲ್ಲದ ಕಾರಣ ಬೆಂಕಿ ಹಬ್ಬಿಲ್ಲ.ಬೆಂಕಿಯಿಂದಾಗಿ ಭತ್ತ ಬೆಳೆದ ತಮಗೆ ₹1 ಲಕ್ಷದಷ್ಟು ಫಸಲು ನಾಶವಾಗಿದೆ. ಬ್ಯಾಂಕ್ ಮತ್ತು ಖಾಸಗಿ ಸಂಘ- ಸಂಸ್ಥೆಗಳಲ್ಲಿ ಬೆಳೆಗಾಗಿ ಸಾಲ ಮಾಡಿದ್ದೆವು. ಈಗ ನಮಗೆ ಜೀವನ ನಿರ್ವಹಣೆ ಇನ್ನಷ್ಟು ಬಿಗಡಾಯಿಸಿದೆ. ಆದ್ದರಿಂದ ಅಧಿಕಾರಿಗಳು ತಕ್ಷಣ ಪ್ರಕರಣ ದಾಖಲಿಸಿಕೊಂಡು ಸೂಕ್ತ ಪರಿಹಾರ ನೀಡುವಂತೆ ಹುಲ್ಲು ಮತ್ತು ಭತ್ತ ಕಳೆದುಕೊಂಡ ನಾಗರಾಜ ಮತ್ತು ಶೇಖರ ಅಧಿಕಾರಿಗಳ ಎದುರು ಅಳಲು ತೋಡಿಕೊಂಡಿದ್ದಾರೆ.
ಚಂದ್ರಗುತ್ತಿ ಪೊಲೀಸ್ ಠಾಣೆಯ ದಫೇದಾರ್ ಸಂತೋಷ್ ಮತ್ತು ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿ ರಮೇಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.- - - -೧೪ಕೆಪಿಸೊರಬ೦೩:
ಸೊರಬ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಬೆಂಕಿ ತಗುಲಿ ಭತ್ತದ ಹುಲ್ಲಿನ ಪೆಂಡಿ ಹಾಗೂ ಭತ್ತ ಸಂಪೂರ್ಣ ನಾಶವಾಗಿದೆ.