ಸಾರಾಂಶ
ಜಗಳೂರು ತಾಲೂಕಿನಲ್ಲಿ ಮುಸ್ಲಿಂ ಕುಟುಂಬವೊಂದು ಶ್ರೀ ಅಯ್ಯಪ್ಪ ಸ್ವಾಮಿ ಪಡಿಪೂಜೆ ಹಾಗೂ ಅನ್ನ ಸಂತರ್ಪಣೆ ಮಾಡುವ ಮೂಲಕ ಭಕ್ತಿ ಸಮರ್ಪಿಸಿ, ಭಾವೈಕ್ಯತೆಯನ್ನು ಮೆರೆದಿದೆ.
ದಾವಣಗೆರೆ: ಜಗಳೂರು ತಾಲೂಕಿನಲ್ಲಿ ಮುಸ್ಲಿಂ ಕುಟುಂಬವೊಂದು ಶ್ರೀ ಅಯ್ಯಪ್ಪ ಸ್ವಾಮಿ ಪಡಿಪೂಜೆ ಹಾಗೂ ಅನ್ನ ಸಂತರ್ಪಣೆ ಮಾಡುವ ಮೂಲಕ ಭಕ್ತಿ ಸಮರ್ಪಿಸಿ, ಭಾವೈಕ್ಯತೆಯನ್ನು ಮೆರೆದಿದೆ.
ಜಗಳೂರು ತಾಲೂಕಿನ ಮರೇನಹಳ್ಳಿ ಗ್ರಾಮದ ಶೌಕತ್ ಅಲಿ, ಅಫ್ರೋಜ್ ಹಾಗೂ ಹಮೀದ್ ಕುಟುಂಬಸ್ಥರು ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ತಮ್ಮ ಮನೆಯಲ್ಲೇ ಪಡಿಪೂಜೆ ಮಾಡಿಸಿ, ಅನ್ನ ಸಂತರ್ಪಣೆ ನೆರವೇರಿಸುವ ಮೂಲಕ ಭಾವೈಕ್ಯತೆ ಸಂದೇಶ ಸಾರಿದೆ.ಶ್ರದ್ಧಾಭಕ್ತಿಯಿಂದ ಮುಸ್ಲಿಂ ಕುಟುಂಬ ಸದಸ್ಯರು ಶ್ರೀ ಅಯ್ಯಪ್ಪ ಸ್ವಾಮಿಯ ಪಡಿಪೂಜೆಯಲ್ಲಿ ಪಾಲ್ಗೊಂಡಿದ್ದು, ವಿಶೇಷವಾಗಿತ್ತು. ಭಾವೈಕ್ಯತೆ ಸಂದೇಶ ಸಾರಿದ ಶೌಕತ್ ಅಲಿ, ಅಫ್ರೋಜ್ ಹಾಗೂ ಹಮೀದ್ ಕುಟುಂಬ ಸದಸ್ಯರ ಶ್ರದ್ಧಾಭಕ್ತಿಗೆ ಸಾರ್ವಜನಿಕರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ.
- - - (ಸಾಂದರ್ಭಿಕ ಚಿತ್ರ)