ಪಾಡೀಶ್ವರಂಡ ನಡೆಲೋರ್ ಸ್ವರ ಲೋಕಾರ್ಪಣೆ

| Published : Mar 16 2025, 11:45 PM IST

ಸಾರಾಂಶ

ಪಾಡೀಶ್ವರಂಡ ನಡೆಲೋರ್‌ ಸ್ವರ ಕೊಡವ ಹಾಡಿನ ಧ್ವನಿ ಸುರುಳಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಸನ್ನಿಧಿಯಲ್ಲಿ ‘ಪಾಡೀಶ್ವರಂಡ ನಡೆಲೋರ್ ಸ್ವರ’ ಕೊಡವ ಹಾಡಿನ (ಕೃತಿ)ಧ್ವನಿಸುರುಳಿಯನ್ನು ಸನ್ನಿಧಿಯ ಭಕ್ತ ಜನ ಸಂಘದ ವತಿಯಿಂದ ಗುರುವಾರ ಲೋಕಾರ್ಪಣೆಗೊಳಿಸಲಾಯಿತು.

ಕೊಕೇರಿ ಗ್ರಾಮದ ಕ್ಯಾಪ್ಟನ್ ಬಿದ್ದಂಡ ನಾಣಿ ದೇವಯ್ಯ ಶ್ರೀ ಇಗ್ಗುತ್ತಪ್ಪ ದೇವರ ಕುರಿತು ರಚಿಸಿದ ಕೊಡವ ಹಾಡಿನ ಧ್ವನಿಸುರುಳಿಯನ್ನು ದೇವಾಲಯದ ತಕ್ಕ ಮುಖ್ಯಸ್ಥರು, ಭಕ್ತ ಜನ ಸಂಘದ ಅಧ್ಯಕ್ಷ , ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಲೋಕಾರ್ಪಣೆಗೊಳಿಸಿದರು.

ಅನಂತರ ಮಾತನಾಡಿ ಕ್ಯಾಪ್ಟನ್ ಬಿದ್ದಂಡ ನಾಣಿದೇವಯ್ಯ ಕೊಡವ ಭಾಷೆಯ ಮೇಲೆ ಅಭಿಮಾನವಿಟ್ಟು ಇಗ್ಗುತ್ತಪ್ಪ ದೇವರ ಕುರಿತು ಉತ್ತಮವಾದ ಸಾಹಿತ್ಯ ಬರೆದಿದ್ದಾರೆ. ಈ ಪದ್ಯಗಳನ್ನು ಕರುಣ್-ಕಾವೇರಪ್ಪ ಹಾಡಿದ್ದು ನಾಣಿದೇವಯ್ಯ ಅವರಿಂದ ಇನ್ನು ಹೆಚ್ಚಿನ ಸಾಹಿತ್ಯ ರಚನೆಯಾಗಲಿ. ಈ ಪುಣ್ಯಭೂಮಿಯಲ್ಲಿ ಮತ್ತಷ್ಟು ಸಾಹಿತ್ಯ ಕೃತಿಗಳು ಹೊರಬಂದು ಇತಿಹಾಸವಾಗಲೆಂದು ಶುಭ ಹಾರೈಸಿದರು. ಈ ಸಂದರ್ಭ ರಚನೆಗಾರ ಕ್ಯಾಪ್ಟನ್ ಬಿದ್ದಂಡ ನಾಣಿದೇವಯ್ಯ, ಹಾಡುಗಾರ ಕರುಣ್-ಕಾವೇರಪ್ಪ, ಭಕ್ತ ಜನ ಸಂಘದ ಪದಾಧಿಕಾರಿಗಳು ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.