ತೀಯಾನ್ ಮಹಾ ಸಭಾದ ಕೊಡಗು ಜಿಲ್ಲಾ ಸಮಿತಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಎ.ಎನ್. ಪದ್ಮನಾಭ ಕಿರಗಂದೂರು ನೇಮಕಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ತೀಯಾನ್ ಮಹಾ ಸಭಾದ ಕೊಡಗು ಜಿಲ್ಲಾ ಸಮಿತಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ಎ.ಎನ್. ಪದ್ಮನಾಭ ಕಿರಗಂದೂರು ನೇಮಕಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಎಸ್.ಆರ್. ಅಶೋಕ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ಅರುಣ್, ಸಂಘಟನಾ ಕಾರ್ಯದರ್ಶಿಯಾಗಿ ಎನ್.ಸಿ. ಸುದರ್ಶನ್ ಹಾಗೂ ಖಜಾಂಚಿಯಾಗಿ ಎಂ.ಕೆ. ಮೋಹನ್ ಆಯ್ಕೆಯಾಗಿದ್ದಾರೆ.ಗೌರವ ಸಲಹೆಗಾರರಾಗಿ ಮಡಿಕೇರಿಯ ಲೆಕ್ಕ ಪರಿಶೋಧಕ ಟಿ.ಕೆ. ಸುಧೀರ್, ನಿರ್ದೇಶಕರಾಗಿ ಶಶಿ ಕುಮಾರ್, ಎನ್.ಸಿ. ಸುನಿಲ್, ಗಣೇಶ್, ವೀಣಾ ಜಯರಾಮ್ ಹಾಗೂ ಕಾನೂನು ಸಲಹೆಗಾರರಾಗಿ ವಿರಾಜಪೇಟೆಯ ಕೆ.ವಿ. ಸುನಿಲ್ ನೇಮಕಗೊಂಡರು. ಇದೇ ಸಂದರ್ಭ ಜಿಲ್ಲಾ ಯೂತ್ ಅಧ್ಯಕ್ಷರನ್ನಾಗಿ ಶಜಿ ಭರತ್ ಹಾಗೂ ಉಪಾಧ್ಯಕ್ಷರನ್ನಾಗಿ ಪ್ರವೀಣ್ ಅವರನ್ನು ಸಭೆಯ ಒಮ್ಮತದ ನಿರ್ಧಾರದಂತೆ ಆಯ್ಕೆ ಮಾಡಲಾಯಿತು. ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ತೀಯಾನ್ ಮಹಾ ಸಭಾದ ಜಿಲ್ಲಾ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘಟನೆಯ ಬಲವರ್ಧನೆ ಮತ್ತು ಮುಂದಿನ ಕಾರ್ಯಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ನಂತರ ಸರ್ವಾನುಮತದಿಂದ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಸಂಘಟನೆಯ ಉದ್ದೇಶಗಳನ್ನು ಸಾಧಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.