ಪಡುಕರೆ: ಮಾರಿಕಾಂಬಾ ದೇವಸ್ಥಾನ ವರ್ಧಂತ್ಯುತ್ಸವ, ಬ್ರಹ್ಮಕಲಶಾಭಿಷೇಕ ಸಂಪನ್ನ

| Published : Mar 25 2024, 12:50 AM IST

ಪಡುಕರೆ: ಮಾರಿಕಾಂಬಾ ದೇವಸ್ಥಾನ ವರ್ಧಂತ್ಯುತ್ಸವ, ಬ್ರಹ್ಮಕಲಶಾಭಿಷೇಕ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ತಿರುಪತಿ ದಾಸ ಸಾಹಿತ್ಯ ತಂಡ ಹಾಗೂ ಶಿರಸಿ ಮಾರಿಕಾಂಬಾ ಭಜನಾ ಮಂಡಳಿ ಕೋಟತಟ್ಟು, ಪಂಚವರ್ಣದ ಮಹಿಳಾ ಮಂಡಲ ಭಜನಾ ತಂಡದಿಂದ ಭಜನಾ ಸಂಕೀರ್ತನೆ, ರಾತ್ರಿ ಸಮಷ್ಠಿ ಮ್ಯೂಸಿಕ್ ಇವರಿಂದ ಸಾಂಸ್ಕೃತಿಕ ರಸಸಂಜೆ, ಕುಂದಾಪುರ ಪ್ರಸಿದ್ಧ ನಾಟಕ ತಂಡ ರೂಪಕಲಾ ಇವರಿಂದ ನಾಟಕ ‘ಇನ್‌ಸ್ಪೆಕ್ಟರ್ ಅಣ್ಣಪ್ಪ’ ಪ್ರದರ್ಶನ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟಇಲ್ಲಿನ ಕೋಟತಟ್ಟು ಪಡುಕರೆಯ ಶ್ರೀ ಶಿರಸಿ ಮಾರಿಕಾಂಬಾ ದೇಗುಲದ ವಾರ್ಷಿಕ ವರ್ಧಂತ್ಯುತ್ಸವ ಹಾಗೂ ಬ್ರಹ್ಮಕಲಶಾಭಿಷೇಕ, ಮಹಾ ಅನ್ನಸಂತರ್ಪಣಾ ಕಾರ್ಯಕ್ರಮ ಶನಿವಾರ ವಿಜೃಂಭಣೆಯಿಂದ ನಡೆಯಿತು. ಮುಂಜಾನೆಯಿಂದ ವೇ.ಮೂ ಮಧುಸೂಧನ ಬಾಯರಿ ನೇತೃತ್ವದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ, ವಿವಿಧ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡವು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ತಿರುಪತಿ ದಾಸ ಸಾಹಿತ್ಯ ತಂಡ ಹಾಗೂ ಶಿರಸಿ ಮಾರಿಕಾಂಬಾ ಭಜನಾ ಮಂಡಳಿ ಕೋಟತಟ್ಟು, ಪಂಚವರ್ಣದ ಮಹಿಳಾ ಮಂಡಲ ಭಜನಾ ತಂಡದಿಂದ ಭಜನಾ ಸಂಕೀರ್ತನೆ, ರಾತ್ರಿ ಸಮಷ್ಠಿ ಮ್ಯೂಸಿಕ್ ಇವರಿಂದ ಸಾಂಸ್ಕೃತಿಕ ರಸಸಂಜೆ, ಕುಂದಾಪುರ ಪ್ರಸಿದ್ಧ ನಾಟಕ ತಂಡ ರೂಪಕಲಾ ಇವರಿಂದ ನಾಟಕ ‘ಇನ್‌ಸ್ಪೆಕ್ಟರ್ ಅಣ್ಣಪ್ಪ’ ಪ್ರದರ್ಶನ ನಡೆಯಿತು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ದೇಗುಲದ ಅರ್ಚಕ ನೆಂದ್ಯಪ್ಪ ಪೂಜಾರಿ, ದೇಗುಲದ ಆಧ್ಯಕ್ಷ ರಮೇಶ್ ಪೂಜಾರಿ, ಗೌರವಾಧ್ಯಕ್ಷ ಆನಂದ್ ಸಿ. ಕುಂದರ್, ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ್, ಕೋಶಾಧಿಕಾರಿ ಕೆ. ನಾಗಪ್ಪ ಪೂಜಾರಿ, ಉಪಾಧ್ಯಕ್ಷರಾದ ಚಂದ್ರ ಪುತ್ರನ್ ಬಾರ್ಕೂರು, ಗೌರವ ಸಲಹೆಗಾರ ಸಂಜೀವ ಆರ್. ಕುಂದರ್, ಬಸವ ಕುಂದರ್, ಸಿದ್ಧಿ ಶ್ರೀನಿವಾಸ ಪೂಜಾರಿ, ಚಂದ್ರ ಮೆಂಡನ್, ಬಾಬು ಪೂಜಾರಿ, ಅಶೋಕ್ ಪೂಜಾರಿ, ಉದಯ್ ತಿಂಗಳಾಯ, ಪ್ರಕಾಶ್ ತಿಂಗಳಾಯ, ರಘು ಪೂಜಾರಿ, ಅಣ್ಣಪ್ಪ ತಿಂಗಳಾಯ, ಸುಧಾಕರ್ ಶ್ರೀಯಾನ್, ಯೋಗೇಂದ್ರ ತಿಂಗಳಾಯ, ಪ್ರಭಾಕರ್ ತಿಂಗಳಾಯ, ಆನಂದ್ ಪೂಜಾರಿ, ರಘು ಪೂಜಾರಿ, ಕೃಷ್ಣ ಪುತ್ರನ್, ಲೆಕ್ಕ ಪರಿಶೋಧಕರಾದ ಶಿವಮೂರ್ತಿ ಕೆ., ವಿಠಲ ಪೂಜಾರಿ ಮತ್ತಿತರರು ಇದ್ದರು.