ಪಡುಪಣಂಬೂರು ಸರ್ಕಾರಿ ಶಾಲೆ ನೂತನ ಕೊಠಡಿ ಉದ್ಘಾಟನೆ

| Published : Jan 14 2025, 01:00 AM IST

ಸಾರಾಂಶ

122 ವರ್ಷ ಪೂರೈಸಿದ ಪಡುಪಣಂಬೂರು ದ.ಕ. ಜಿ.ಪಂ ಪ್ರಾಥಮಿಕ ಶಾಲೆಗೆ ವಿವೇಕ ಯೋಜನೆಯಡಿ ಸುಮಾರು 28 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ 2 ಶಾಲಾ ಕೊಠಡಿಗಳು ಮತ್ತಿತರ ಸೌಲಭ್ಯಗಳ ಲೋಕಾರ್ಪಣೆ ಸಮಾರಂಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ನ್‌ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಸರ್ಕಾರಿ ಶಾಲೆಯ ಹಳೆ ವೈಭವವನ್ನು ಮರುಕಳಿಸಲು ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು, ದಾನಿಗಳು ಮುಂದಾಗಬೇಕೆಂದು ಶಾಸಕ ಉಮಾನಾಥ ಕೋಟ್ಯಾನ್‌ ಕರೆ ನೀಡಿದ್ದಾರೆ.

122 ವರ್ಷ ಪೂರೈಸಿದ ಪಡುಪಣಂಬೂರು ದ.ಕ. ಜಿ.ಪಂ ಪ್ರಾಥಮಿಕ ಶಾಲೆಗೆ ವಿವೇಕ ಯೋಜನೆಯಡಿ ಸುಮಾರು 28 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ 2 ಶಾಲಾ ಕೊಠಡಿಗಳು ಮತ್ತಿತರ ಸೌಲಭ್ಯಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಶಾಲೆಯ ಆವರಣದಲ್ಲಿ ಕಲ್ಪವೃಕ್ಷ ನೆಟ್ಟು, ಶಾಲಾ ಕೊಠಡಿ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷೆ ಕುಸುಮಾ ಚಂದ್ರಶೇಖರ್ ವಹಿಸಿದ್ದರು.

ಪಂಚಾಯಿತಿ ಉಪಾಧ್ಯಕ್ಷ ಹೇಮನಾಥ ಅಮೀನ್, ಗೌತಮ್ ಜೈನ್ ಮೂಲ್ಕಿ ಅರಮನೆ, ರತ್ನಾಕರ ಯಾನೆ ಕಾಂತಣ್ಣ ಗುರಿಕಾರ, ನಿವೃತ್ತ ಹಿರಿಯ ಶಿಕ್ಷಕ ರಾಮ ರಾವ್, ರಾಮಚಂದ್ರ ನಾಯ್ಕ್‌ ಕೊಳ್ನಾಡು, ಕದ್ರಿಹಿಲ್ಸ್ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಪ್ರಕಾಶ್, ಶಾಲಾ ಕಟ್ಟಡ ಸಮಿತಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಪೂಜಾರಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ರೂಪಕಲಾ, ಮುಖ್ಯೋಪಾಧ್ಯಾಯಿನಿ ಸುಕನ್ಯ, ಉದ್ಯಮಿ ಅಜಿತ್ ಕೆರೆಕಾಡು, ಧ. ಗ್ರಾ. ಯೋ.ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ಸಿಆರ್‌ಪಿ ಜ್ಯೋತಿ ಕಾರ್ವಿ ಮತ್ತಿತರರು ಇದ್ದರು.