ಸಾರಾಂಶ
ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ನಿಡಗುಂದಿಯಲ್ಲಿ ರಾಮೋತ್ಸವ ಸಂಭ್ರಮ ತುಂಬಿಕೊಂಡಿತ್ತು. ನಿಡಗುಂದಿಯ ಪ್ರಮುಖ ರಸ್ತೆಗಳಲ್ಲಿ ಕೇಸರಿ ಧ್ವಜ ಹಾಗೂ ಶ್ರೀರಾಮ ಭಾವಚಿತ್ರದ ಕಟೌಟ್‌ಗಳು ರಾರಾಜಿಸಿದವು. ಅಲ್ಲಲ್ಲಿ ಶ್ರೀರಾಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ದೃಶ್ಯ ಕಂಡುಬಂತು.
ಕನ್ನಡಪ್ರಭ ವಾರ್ತೆ ನಿಡಗುಂದಿ
ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ನಿಡಗುಂದಿಯಲ್ಲಿ ರಾಮೋತ್ಸವ ಸಂಭ್ರಮ ತುಂಬಿಕೊಂಡಿತ್ತು. ನಿಡಗುಂದಿಯ ಪ್ರಮುಖ ರಸ್ತೆಗಳಲ್ಲಿ ಕೇಸರಿ ಧ್ವಜ ಹಾಗೂ ಶ್ರೀರಾಮ ಭಾವಚಿತ್ರದ ಕಟೌಟ್‌ಗಳು ರಾರಾಜಿಸಿದವು. ಅಲ್ಲಲ್ಲಿ ಶ್ರೀರಾಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ದೃಶ್ಯ ಕಂಡುಬಂತು.ಪಟ್ಟಣದ ಎಲ್ಲ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಹಾಗೂ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಮನಿಗೆ ಭಕ್ತಿ ನಮನ ಸಲ್ಲಿಸಿದರು.
ವಿನಾಯಕ ನಗರದ ವೀರಾಂಜನೇಯ ದೇವಸ್ಥಾನದಲ್ಲಿ ಹೋಮ ಹವನ, ನವಗ್ರಹ ಪೂಜೆ ಹಾಗೂ ದೇವಸ್ಥಾನದ ಸಮಿತಿ ಹಮ್ಮಿಕೊಂಡ ಲಕ್ಷ ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಬೆಳಗ್ಗೆ ಹನುಮಂತನಿಗೆ ವಿಶೇಷ ಪೂಜೆ ನಂತರ ಹೋಮ ಹವನಗಳ ನಂತರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಭಾವಚಿತ್ರ ಮೆರವಣಿಗೆ ಸಕಲ ವಾದ್ಯಮೇಳ ಸುಂಗಲೆಯರ ಕುಂಭಮೇಳ ನಡೆಯಿತು. ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ದೇವಸ್ಥಾನ ಸಮಿತಿ ಅನ್ನಸಂತರ್ಪನೆ ಹಮ್ಮಿಕೊಂಡಿತ್ತು.ಲಕ್ಷದೀಪೋತ್ಸವಕ್ಕೆ ಅದ್ಧೂರಿ ಚಾಲನೆ; ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು, ಹಿರೇಮಠದ ಶಂಕ್ರಯ್ಯ ಶ್ರೀಗಳು ಹಾಗೂ ಗಣ್ಯರು ದೀಪ ಬೆಳಗಿಸಿ ಚಾಲನೆ ನೀಡಿದರು. ಹಲವಾರು ಗಣ್ಯರು ಇದ್ದರು. ಚಾಲನೆ ನಂತರ ಮಹಿಳೆಯರು, ಮಕ್ಕಳು ದೀಪ ಹಚ್ಚಿ ಪೂಜೆ ಸಲ್ಲಿಸಿದರು. ಕೆಲವರು ಮಕ್ಕಳ ಹೆಸರಲ್ಲಿ ದೀಪ ಹಚ್ಚಿ ಹರಕೆ ಸಲ್ಲಿಸಿದರು.
ರುದ್ರೇಶ್ವರ ಮಠದಲ್ಲಿ: ರುದ್ರೇಶ್ವರ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ಶ್ರೀರಾಮ ಭಾವಚಿತ್ರಕ್ಕೆ ರುದ್ರಮುನಿ ಶ್ರೀಗಳು ಪೂಜೆ ಸಲ್ಲಿಸಿದರು ಹಲವಾರು ಗಣ್ಯರು ಇದ್ದರು.ಬನಶಂಕರಿ ದೇವಸ್ಥಾನದಲ್ಲಿ:
ಇಲ್ಲಿಯ ಬನಶಂಕರಿ ದೇವಸ್ಥಾನದಲ್ಲಿ ರಾಮೋತ್ಸವ ನಿಮಿತ್ತ ಗಣ್ಯರು ಶ್ರೀರಾಮ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದಲ್ಲಿ ಅನ್ನಸಂತರ್ಪನೆ ಕಾರ್ಯಕ್ರಮ ನಡೆಯಿತು.