ಸಾರಾಂಶ
ಚಿತ್ರಕಲೆಯಲ್ಲಿ ಭಾರತದ ಎಂ.ಎಫ್. ಹುಸೇನ್ ಅವರು ರಚಿಸಿರುವ ಮೋನಾಲಿಸಾ ಚಿತ್ರಕಲೆ ವಿಶ್ವಮಟ್ಟದಲ್ಲಿ ದಾಖಲೆಯಾಗಿದೆ. ತಾಲೂಕಿನಲ್ಲೂ ಹಲವು ಮಂದಿ ಚಿತ್ರಕಲಾವಿದರು ರಾಷ್ಟ್ರ ಮತ್ತು ಅಂತಾರಾಷ್ಟ್ರಮಟ್ಟದಲ್ಲಿ ಛಾಪನ್ನು ಮೆರೆದಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ರಮೇಶ್ ಶೆಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಚಿತ್ರಕಲೆಯಲ್ಲಿ ಭಾರತದ ಎಂ.ಎಫ್. ಹುಸೇನ್ ಅವರು ರಚಿಸಿರುವ ಮೋನಾಲಿಸಾ ಚಿತ್ರಕಲೆ ವಿಶ್ವಮಟ್ಟದಲ್ಲಿ ದಾಖಲೆಯಾಗಿದೆ. ತಾಲೂಕಿನಲ್ಲೂ ಹಲವು ಮಂದಿ ಚಿತ್ರಕಲಾವಿದರು ರಾಷ್ಟ್ರ ಮತ್ತು ಅಂತಾರಾಷ್ಟ್ರಮಟ್ಟದಲ್ಲಿ ಛಾಪನ್ನು ಮೆರೆದಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ರಮೇಶ್ ಶೆಟ್ಟಿ ಹೇಳಿದರು.ತೀರ್ಥಹಳ್ಳಿ ಪಟ್ಟಣದ ಕುಶಾವತಿ ನೆಹರೂ ಪಾರ್ಕಿನಲ್ಲಿ ಕನ್ನಡಪ್ರಭ ಪತ್ರಿಕೆ ವತಿಯಿಂದ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಮತ್ತು ಲಯನ್ಸ್ ಕ್ಲಬ್‍ನ ಸಹಕಾರದೊಂದಿಗೆ ಆಯೋಜಿಸಿರುವ ತೀರ್ಥಹಳ್ಳಿ ತಾಲೂಕು ಮಟ್ಟದ ಅರ್ಹತಾ ಸುತ್ತಿನ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಕನ್ನಡಪ್ರಭ ಪತ್ರಿಕೆಯು ಆಯೋಜಿಸಿರುವ ಈ ಸ್ಪರ್ಧೆಯು ಎಳೆಯ ಪ್ರತಿಭೆಗಳಿಗೆ ಉತ್ತೇಜನ ನೀಡುವಲ್ಲಿ ಸಹಕಾರಿಯಾಗಿದೆ ಎಂದು ಪ್ರಶಂಸಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಭಟ್ ಮಾತನಾಡಿ, ಮಕ್ಕಳು ಶಿಕ್ಷಣ ಎಂದರೆ ಕೇವಲ ಅಕ್ಷರ ಜ್ಞಾನ ಮಾತ್ರವಲ್ಲ. ಚಿತ್ರಕಲೆ, ಸಂಗೀತ, ನೃತ್ಯ ಮುಂತಾದ ಪಠ್ಯೇತರ ಚಟುವಟಕೆಗೂ ಅಧ್ಯತೆ ನೀಡಬೇಕು. ಚಿತ್ರಕಲೆ ದಾಖಲೆ ಜೊತೆಗೆ ಪ್ರಭಾವಿ ಮಾಧ್ಯಮವಾಗಿದ್ದು, ಈ ಹಿನ್ನೆಲೆ ಕನ್ನಡಪ್ರಭ ಪತ್ರಿಕೆಯು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಹೇಳಿದರು.ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯ ಮೂಲಕ ಪರಿಸರ ಕಾಳಜಿ ಮೂಡಿಸುವ ಸಲುವಾಗಿ ಪ್ರಥಮ ಬಾರಿಗೆ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಾಜ್ಯದಾದ್ಯಂತ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದೆ.
ಈ ಸ್ಪರ್ಧೆಗೆ ಪೂರಕವಾಗಿ ತೀರ್ಥಹಳ್ಳಿ ತಾಲೂಕು ಮಟ್ಟದ ಅರ್ಹತಾ ಸುತ್ತಿನ ಸ್ಪರ್ಧೆ ಶನಿವಾರ ಬೆಳಗ್ಗೆ ಪಟ್ಟಣದ ಕುಶಾವತಿ ನೆಹರೂ ಪಾರ್ಕಿನಲ್ಲಿ ನಡೆಯಿತು. ಈ ಸ್ಪರ್ಧೆಯ ವಿಷಯ “ಕರ್ನಾಟಕ ಅರಣ್ಯ ಮತ್ತು ಕರ್ನಾಟಕ ವನ್ಯಜೀವಿ” ಆಗಿರುತ್ತದೆ. ತಾಲೂಕು ಮಟ್ಟದ ಈ ಸ್ಪರ್ಧೆಯಲ್ಲಿ ಗೆಲ್ಲುವ ಪ್ರಥಮ ಮೂವರಿಗೆ ನಗದು ಬಹುಮಾನದೊಂದಿಗೆ ಭಾಗವಹಿಸಿದ ಎಲ್ಲ ವಿಧ್ಯಾರ್ಥಿಗಳಿಗೆ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ರಾಜ್ಯ ಚಿತ್ರಕಲಾ ಪರಿಷತ್ ಅಧ್ಯಕ್ಷರ ಸಹಿ ಇರುವ ಪ್ರಮಾಣ ಪತ್ರವನ್ನೂ ನೀಡಲಾಗುವುದು.ವಿಜೇತ ವಿದ್ಯಾರ್ಥಿಗಳು
ತೀರ್ಥಹಳ್ಳಿ ಪಟ್ಟಣದಲ್ಲಿ ಶನಿವಾರ ಕನ್ನಡಪ್ರಭ ಪತ್ರಿಕೆ ವತಿಯಿಂದ ತೀರ್ಥಹಳ್ಳಿ ತಾಲೂಕು ಮಟ್ಟದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಕಮ್ಮರಡಿ ವಿಶ್ವತೀರ್ಥ ಆಂಗ್ಲಪ್ರೌಢಶಾಲೆಯ ವಿದ್ಯಾರ್ಥಿ ಕೆ.ಆರ್.ಗೌತಮ್ ಪ್ರಥಮ ಸ್ಥಾನ, ಗುಡ್ಡೇಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಶ್ಮಿ ದ್ವಿತೀಯ ಸ್ಥಾನ, ಕಟ್ಟೆಹಕ್ಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಕಾರ್ತಿಕ್ ತೃತೀಯ ಸ್ಥಾನ ಹಾಗೂ ವಿ.ಎಸ್.ಜೀವನ್, ಮಧುರ ಅವರು ಸಮಾಧಾನಕರ ಬಹುಮಾನ ಗಳಿಸುವ ಮೂಲಕ ಶಿವಮೊಗ್ಗದಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))