ಮಾನಸಿಕ ನೆಮ್ಮದಿಗೆ ಚಿತ್ರಕಲೆ ದಿವ್ಯೌಷಧ. ಕಾರಣ ಪ್ರತಿಯೊಬ್ಬ ವಿದ್ಯಾರ್ಥಿ ಮಾನಸಿಕ ಒತ್ತಡ ಇದ್ದಾಗ ಯಾವುದಾದರು ಚಿತ್ರ ಬಿಡಿಸಿದರೆ ಮನಸ್ಸು ತಂತಾನೆ ಶಾಂತವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಚಿತ್ರಕಲೆ ಕಲಿಯಬೇಕು ಎಂದು ರಾಷ್ಪ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಹಾದೇವ ಕಂಬಾಗಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಇಳಕಲ್ಲ
ಮಾನಸಿಕ ನೆಮ್ಮದಿಗೆ ಚಿತ್ರಕಲೆ ದಿವ್ಯೌಔಷಧ. ಕಾರಣ ಪ್ರತಿಯೊಬ್ಬ ವಿದ್ಯಾರ್ಥಿ ಮಾನಸಿಕ ಒತ್ತಡ ಇದ್ದಾಗ ಯಾವುದಾದರು ಚಿತ್ರ ಬಿಡಿಸಿದರೆ ಮನಸ್ಸು ತಂತಾನೆ ಶಾಂತವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಚಿತ್ರಕಲೆ ಕಲಿಯಬೇಕು ಎಂದು ರಾಷ್ಪ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಹಾದೇವ ಕಂಬಾಗಿ ತಿಳಿಸಿದರು.ನಗರದ ಎಸಿಒ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಅರಣ್ಯ ಇಲಾಖೆ ಆಶ್ರಯ, ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಎಷಿಯಾ ನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ದಿನಪತ್ರಿಕೆ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಸ್ನೇಹಾ ಬಸವರಾಜ ಮಠದ ಕೊಡಮಾಡಿದ ನಗದು ಬಹುಮಾನ ವಿತರಣೆ ಮಾಡಿ ಮಾತನಾಡಿದರು.ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳು ಮುಂದೆ ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಗೆಲುವು ಸಾಧಿಸಲಿ ಎಂದು ಶುಭ ಹಾರೈಸಿದರು.ಚಿತ್ರ ಕಲಾವಿದ ರಮೇಶ ಚಿತ್ರಗಾರ ಮಾತನಾಡಿ, ಚಿತ್ರಕಲೆ ಅಪರೂಪದ ಕಲೆ. ಇದು ಎಲ್ಲರಿಗೂ ಬರುವುದಿಲ್ಲ, ಬಂದವರು ಪುಣ್ಯವಂತರು ಎಂದರು.
ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರು:೮ನೇ ತರಗತಿ: ಸುಹಾನ. ಕೆ. ಬಂಡಿ (ಐಡಿಯಲ್ ಶಾಲೆ) ಪ್ರಥಮ, ವಿನಾಯಕ ದೋತರಗಾವ (ಸಜ್ಜನ ಶಾಲೆ) ದ್ವಿತೀಯ, ರಸೀದ್ ಸಿ. ಟಕ್ಕೇದ (ಎಸ್.ವಿ.ಎಂ ಶಾಲೆ) ತೃತೀಯ ಸ್ಥಾನ ಪಡೆದರು. ೯ನೇ ತರಗತಿ: ಸಮರ್ಥ ದೋತ್ರೆ ( ಸಿದ್ದಾರ್ಥ ಶಾಲೆ) ಪ್ರಥಮ, ನಿಶಾ ಸಾಕಾ (ಎಸಿಒ ಶಾಲೆ) ದ್ವಿತೀಯ, ಬಸವರಾಜ ಪಲ್ಲೇದ (ಸಜ್ಜನ ಶಾಲೆ) ಹಾಗೂ ಅಷತಾ ಹಿಟ್ನಾಳ ತೃತೀಯ ಸ್ಥಾನ ಪಡೆದರು.
೧೦ನೇ ತರಗತಿ: ಮಹೇಶ ತಳವಾರ (ಎ.ಸಿ.ಒ ಶಾಲೆ) ಪ್ರಥಮ, ವಚನಶ್ರೀ ಜೀರಾಳ (ಎಸ್.ವಿ.ಎಮ್ ಶಾಳೆ) ದ್ವಿತೀಯ, ಭಾಗ್ಯ ಸಪ್ಪಂಡಿ (ಜೇಸಿ ಶಾಲೆ) ಹಾಗೂ ಶ್ರೀದೇವಿ ಸಾಕಾ (ಏಸ್.ಆರ್.ಕಂಠಿ ಶಾಲೆ) ತೃತೀಯ ಸ್ಥಾನ ಪಡೆದರು. ಸಮಾರಂಭದಲ್ಲಿ ಇಳಕಲ್ಲ ತಾಲೂಕು ವರದಿಗಾರ ಬಸವರಾಜ ಮಠದ, ಮುಖ್ಯ ಶಿಕ್ಷಕರಾದ ಬಸವರಾಜ ಕವಡಿಮಟ್ಟಿ, ವಿ.ಎಸ್. ಗೂಡುರ, ಎಂ.ಕೆ. ಬಗಾಡೆ, ಕಾರ್ತಿಕ ಕೊಪ್ಪರದ, ಎಂ.ವಿ. ಪಾಟೀಲ, ವೇಣುಗೋಪಾಲ ಕುಂಟೋಜಿ, ಕೃಷ್ಣಪ್ಪಾ ಜುಮಲಾಪುರ, ಮಹಾಂತೇಶ ಹವಾಲ್ದಾರ ಇತರರು ಉಪಸ್ಥಿತರಿದ್ದರು.