ಇಂದು ಚಿತ್ರಕಲಾ ಕಾರ್ಯಾಗಾರ, ಏಕವ್ಯಕ್ತಿ ಕಲಾ ಪ್ರದರ್ಶನ: ದತ್ತಾತ್ರೇಯ ಎನ್‌. ಭಟ್‌

| Published : Jan 20 2025, 01:30 AM IST

ಇಂದು ಚಿತ್ರಕಲಾ ಕಾರ್ಯಾಗಾರ, ಏಕವ್ಯಕ್ತಿ ಕಲಾ ಪ್ರದರ್ಶನ: ದತ್ತಾತ್ರೇಯ ಎನ್‌. ಭಟ್‌
Share this Article
  • FB
  • TW
  • Linkdin
  • Email

ಸಾರಾಂಶ

ವಜ್ರಮಹೋತ್ಸವ ಸಂಭ್ರಮದಲ್ಲಿರುವ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ಜ.20ರಂದು ಮಧ್ಯಾಹ್ನ 12.30 ಗಂಟೆಗೆ ಚಿತ್ರಕಲಾ ಪ್ರದರ್ಶನ- ಕಾರ್ಯಾಗಾರ ಹಾಗೂ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಉಪನ್ಯಾಸಕ ದತ್ತಾತ್ರೇಯ ಎನ್. ಭಟ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ದಾವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರರಿಂದ ಉದ್ಘಾಟನೆ - - - ದಾವಣಗೆರೆ: ವಜ್ರಮಹೋತ್ಸವ ಸಂಭ್ರಮದಲ್ಲಿರುವ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ಜ.20ರಂದು ಮಧ್ಯಾಹ್ನ 12.30 ಗಂಟೆಗೆ ಚಿತ್ರಕಲಾ ಪ್ರದರ್ಶನ- ಕಾರ್ಯಾಗಾರ ಹಾಗೂ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಉಪನ್ಯಾಸಕ ದತ್ತಾತ್ರೇಯ ಎನ್. ಭಟ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.20ರಂದು ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಬಿ.ಡಿ. ಕುಂಬಾರ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಲೇಜು ಅಧ್ಯಾಪಕರ ಒಕ್ಕೂಟದ ಪ್ರೊ. ಸಿ.ಎಚ್. ಮುರುಗೇಂದ್ರಪ್ಪ ಆಗಮಿಸಲಿದ್ದಾರೆ. ಪ್ರಾಚಾರ್ಯ ಡಾ.ಜೈರಾಜ ಎಂ. ಚಿಕ್ಕಪಾಟೀಲ್, ಸಹಾಯಕ ಪ್ರಾಧ್ಯಾಪಕ ಡಾ.ಸತೀಶ್ ಕುಮಾರ್ ಪಿ.ವಲ್ಲೇಪುರೆ ಉಪಸ್ಥಿತರಿರುವರು ಎಂದರು.

ಇದೇ ವೇಳೆ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಗ್ಯಾಲರಿ-1 ರಲ್ಲಿ ಧಾರವಾಡದ ಉಪನ್ಯಾಸಕ ಶಶಿಧರ್ ಎಂ. ಲೋಹಾರ, ಗ್ಯಾಲರಿ-2 ರಲ್ಲಿ ಬೀದರ್‌ನ ಉಪನ್ಯಾಸಕ ಭೀಮರಾವ್ ಕೆ. ಬಡಿಗೇರ, ಗ್ಯಾಲರಿ- 3ರಲ್ಲಿ ಧಾರವಾಡದ ಶಿವಾನಂದ ಕೆ. ಪತ್ತಾರ ಹಾಗೂ ಗ್ಯಾಲರಿ-4ರಲ್ಲಿ ಬೆಂಗಳೂರಿನ ಉಪನ್ಯಾಸಕ ಬಾಬು ಜತ್ತಕರ್ ಅವರ ರಚನೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವಿದೆ. ಜ.20 ರಿಂದ 24ರವರೆಗೆ ಬೆಳಗ್ಗೆ 10.30 ರಿಂದ ಸಂಜೆ 6 ಗಂಟೆಯವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕಲಾ ಪ್ರದರ್ಶನದಂದು ಪ್ರತಿದಿನ ಕಲಾವಿದದರಿಂದ ನಿಸರ್ಗ ಚಿತ್ರ, ಭಾವಚಿತ್ರ ಹಾಗೂ ರೇಖಾಚಿತ್ರ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರ ಇರುತ್ತದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಾಬು ಜತ್ತಕರ್, ಶಶಿಧರ್ ಎಂ. ಲೋಹರ್, ಶಿವಾನಂದ ಕೆ.ಪತ್ತಾರ್, ಇದ್ದರು.

- - - -18ಕೆಡಿವಿಜಿ32.ಜೆಪಿಜಿ:

ಚಿತ್ರಕಲಾ ಪ್ರದರ್ಶನ, ಕಾರ್ಯಾಗಾರ, ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಆಯೋಜನೆ ಕುರಿತು ದತ್ತಾತ್ರೇಯ ಭಟ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.