ಹಾನಗಲ್ಲ: ತಾಲೂಕಿನ ಮಾಸನಕಟ್ಟಿ ಗ್ರಾಮದ ಬಳಿ ಮಂಗಳವಾರ ಬೆಳಗಿನ ಜಾವ ಜೋಡಿ ಕಾಡು ಕೋಣಗಳು ಕಾಣಿಸಿಕೊಂಡಿದ್ದು, ಊರಿನ ಮನೆಗಳ ಬಳಿ ಹಾಕಿದ ಸಿಸಿ ಕ್ಯಾಮೆರಾದಲ್ಲಿ ಚಿತ್ರ ಸೆರೆ ಸಿಕ್ಕಿದೆ. ರೈತರು ಕೂಡ ಪ್ರತ್ಯಕ್ಷವಾಗಿ ಕಂಡು ಫೋಟೋ ಸೆರೆ ಹಿಡಿದಿದ್ದಾರೆ. ರೈತರ ದೂರಿನ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.ನಸುಕಿನಲ್ಲಿಯೇ ಗ್ರಾಮದ ಬಳಿ ಕಾಣಿಸಿಕೊಂಡ ಭಾರೀ ಗಾತ್ರದ ಕಾಡುಕೋಣಗಳನ್ನು ಶಬ್ದ ಮಾಡಿ ಗ್ರಾಮಸ್ಥರು ಓಡಿಸಿದ್ದಾರೆ. ಎಲ್ಲಿಯೂ ಯಾವುದೇ ರೀತಿಯ ಬೆಳೆ ಅಥವಾ ಜೀವ ಹಾನಿಯಾಗಿಲ್ಲ.ರೈತರು ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ ತಕ್ಷಣ ಸಿಬ್ಬಂದಿ ಆಗಮಿಸಿ ಕಾಡು ಕೋಣ ಓಡಾಡಿದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಚಿತ್ರವನ್ನೂ ಕೂಡ ಅರಣ್ಯ ಸಿಬ್ಬಂದಿ ಪರಿಶೀಲಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಮಾಸನಕಟ್ಟಿಯ ರೈತ ರಾಜು ಹಲಸೂರ, ಕಾಡು ಕೋಣ ನಮ್ಮ ತಾಲೂಕಿನ ಮಾಸನಕಟ್ಟಿ ಭಾಗಕ್ಕೆ ಬಂದಿರುವುದು ಇದೇ ಮೊದಲು. ಆದರೆ ಯಾವುದೇ ಬೆಳೆ ಅಥವಾ ಜೀವ ಹಾನಿ ಆಗಿಲ್ಲ. ಆದಾಗ್ಯೂ ಮುನ್ನೆಚ್ಚರಿಕೆ ಅತ್ಯಗತ್ಯ ಎಂದು ತಿಳಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ಗಣೇಶ ಶೆಟ್ಟರ, ಮುಂಡಗೋಡ ಕಾಡಿನಿಂದ ಕಾತೂರು ಮಾರ್ಗವಾಗಿ ಕಾಡು ಪ್ರಾಣಿಗಳು ಹಾನಗಲ್ಲ ತಾಲೂಕಿಗೆ ಪ್ರವೇಶಿಸುತ್ತಲೇ ಇರುತ್ತವೆ. ಹಾನಗಲ್ಲ ತಾಲೂಕಿನ ಗಡಿಯಲ್ಲಿಯೇ ಓಡಾಡಿ ಮರಳುತ್ತವೆ. ಆದರೆ ಈ ಬಾರಿ ಮಾಸನಕಟ್ಟಿವರೆಗೆ ಕಾಡು ಕೋಣಗಳು ಬಂದಿರುವ ಮಾಹಿತಿ ಸಿಕ್ಕಿದೆ. ನಮ್ಮ ಸಿಬ್ಬಂದಿ ಕಾಡು ಕೋಣದ ಬಗ್ಗೆ ಎಚ್ಚರಿಕೆ ಇಡಲು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಇಲಾಖೆಯ ಸಿಬ್ಬಂದಿ ಕೂಡ ಈ ಬಗ್ಗೆ ನಿಗಾವಹಿಸುತ್ತಿದ್ದಾರೆ ಎಂದರು.
ಮಾಸನಕಟ್ಟಿ ಬಳಿ ಜೋಡಿ ಕಾಡು ಕೋಣಗಳು ಪ್ರತ್ಯಕ್ಷ
ಹಾನಗಲ್ಲ ತಾಲೂಕಿನ ಮಾಸನಕಟ್ಟಿ ಗ್ರಾಮದ ಬಳಿ ಮಂಗಳವಾರ ಬೆಳಗಿನ ಜಾವ ಜೋಡಿ ಕಾಡು ಕೋಣಗಳು ಕಾಣಿಸಿಕೊಂಡಿದ್ದು, ಊರಿನ ಮನೆಗಳ ಬಳಿ ಹಾಕಿದ ಸಿಸಿ ಕ್ಯಾಮೆರಾದಲ್ಲಿ ಚಿತ್ರ ಸೆರೆ ಸಿಕ್ಕಿದೆ. ರೈತರು ಕೂಡ ಪ್ರತ್ಯಕ್ಷವಾಗಿ ಕಂಡು ಫೋಟೋ ಸೆರೆ ಹಿಡಿದಿದ್ದಾರೆ. ರೈತರ ದೂರಿನ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.