ಪಾಕಿಸ್ತಾನದ ವರ್ತನೆ ಸಹಿಸಲಾಗದು

| Published : May 18 2025, 11:59 PM IST

ಸಾರಾಂಶ

ನಾವೆಲ್ಲರೂ ಭಾರತಾಂಬೆಯ ಮಕ್ಕಳು, ಇತ್ತೀಚಿನ ಘಟನೆಗಳು ನಮ್ಮ ಹೃದಯವನ್ನು ಹೊಕ್ಕಿದೆ ಎಂದು ಶಾಸಕ ಸಿ.ಎನ್ ಬಾಲಕೃಷ್ಣ ಹೇಳಿದ್ದಾರೆ. ದೇಶದ ಭದ್ರತಾ ಪಡೆ, ಆಯಾ ಕಾಲಘಟ್ಟದಲ್ಲಿ ತನ್ನ ಶಕ್ತಿ, ಸಾಮರ್ಥ್ಯವನ್ನ ಪ್ರದರ್ಶನ ಮಾಡಿದೆ. ಮೇ ೨೪ರಂದು ಬೃಹತ್ ತಿರಂಗ ಯಾತ್ರೆ ಬೆಳಗ್ಗೆ ೯ ಗಂಟೆಗೆ ೪೦ ಅಡಿ ಆಂಜನೇಯ ದೇವಾಲಯದ ಆವರಣದಿಂದ ಮೆರವಣಿಗೆ ಆರಂಭವಾಗಲಿದೆ, ೫೦೦ ಮೀಟರ್ ಉದ್ದದ ರಾ?ಧ್ವಜದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ನಾವೆಲ್ಲರೂ ಭಾರತಾಂಬೆಯ ಮಕ್ಕಳು, ಇತ್ತೀಚಿನ ಘಟನೆಗಳು ನಮ್ಮ ಹೃದಯವನ್ನು ಹೊಕ್ಕಿದೆ ಎಂದು ಶಾಸಕ ಸಿ.ಎನ್ ಬಾಲಕೃಷ್ಣ ಹೇಳಿದ್ದಾರೆ.

ಅವರು ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಹಿಂದೂ ಹಿತ ರಕ್ಷಣಾ ವೇದಿಕೆಯಿಂದ, ತಿರಂಗ ಯಾತ್ರೆ ಕಾರ್ಯಕ್ರಮ ಆಯೋಜನೆ ಮಾಡಲು ನಡೆದ ಸರ್ವ ಪಕ್ಷಗಳ, ಸರ್ವ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ರಾಷ್ಟ್ರಧ್ವಜಕ್ಕೆ ವಂದಿಸಿ ಮಾತನಾಡಿ, ಹಿಂಸೆಯನ್ನು ಸಹಿಸಲಾಗದು. ಅಹಿಂಸಾವಾದಿಗಳು, ಅಂಬೇಡ್ಕರ್ ಸಂವಿಧಾನವನ್ನು ನೀಡಿದ್ದಾರೆ. ವಿಶ್ವದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು, ತಿರಂಗ ಯಾತ್ರೆ, ದೇಶದ ಸೈನಿಕರಿಗೆ ನೀಡುತ್ತಿರುವ ಗೌರವವಾಗಿದೆ. ಭಾರತ ದೇಶ ಎರಡು ಯುದ್ಧಗಳಲ್ಲೂ ಜಯಗಳಿಸಿ ತನ್ನ ಶಕ್ತಿ ಸಾಮರ್ಥ್ಯವನ್ನ ವಿಶ್ವಕ್ಕೆ ತೋರ್ಪಡಿಸಿದೆ, ಪಾಕ್ ಆಕ್ರಮಿತ ಕಾಶ್ಮೀರ ಎಂದೆಂದಿಗೂ ನಮ್ಮದೇ, ಕಿಡಿಗೇಡಿಗಳ ಕಾರ್ಯವನ್ನ ದೇಶ ಒಪ್ಪುವುದಿಲ್ಲ, ನಮ್ಮ ದೇಶದ ಭೂ ಸೇನೆ, ವಾಯುಪಡೆ, ನೌಕಾಪಡೆಗೆ ನಾವು ಗೌರವ ಸಲ್ಲಿಸಬೇಕು, ಯೋಧರಿಗೆ ಧೈರ್ಯ ತುಂಬಬೇಕು, ಧನ್ಯವಾದ ಹೇಳಬೇಕು. ದೇಶದ ಭದ್ರತಾ ಪಡೆ, ಆಯಾ ಕಾಲಘಟ್ಟದಲ್ಲಿ ತನ್ನ ಶಕ್ತಿ, ಸಾಮರ್ಥ್ಯವನ್ನ ಪ್ರದರ್ಶನ ಮಾಡಿದೆ. ಮೇ ೨೪ರಂದು ಬೃಹತ್ ತಿರಂಗ ಯಾತ್ರೆ ಬೆಳಗ್ಗೆ ೯ ಗಂಟೆಗೆ ೪೦ ಅಡಿ ಆಂಜನೇಯ ದೇವಾಲಯದ ಆವರಣದಿಂದ ಮೆರವಣಿಗೆ ಆರಂಭವಾಗಲಿದೆ, ೫೦೦ ಮೀಟರ್ ಉದ್ದದ ರಾ?ಧ್ವಜದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದರು. ಬಿಜೆಪಿ ಮುಖಂಡ ಆಣತಿ ಆನಂದ್ ಮಾತನಾಡಿ, ದೇಶ ಭಯೋತ್ಪಾದನೆಯನ್ನು ಎಂದು ಸಹಿಸದು, ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನಮ್ಮ ದೇಶ ನೀಡಿದೆ ತಿರಂಗ ಯಾತ್ರೆ ದೇಶಕ್ಕೆ ಸೈನ್ಯಕ್ಕೆ ಶಕ್ತಿ ತುಂಬುವುದಾಗಿದೆ ಎಂದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರೀಶ್‌ ನಿಂಬೇಹಳ್ಳಿ, ರೈತ ಮುಖಂಡರಾದ ಮೀಸೆ ಮಂಜಣ್ಣ, ಅರಳಾಪುರ ಮಂಜೇಗೌಡ, ಹಿಂದೂ ಸಂಘಟನೆಯ ಮುಖಂಡರಾದ ಶಂಕರಣ್ಣ, ಮನೋಹರ್‌ಗಜಾನನ, ಪರಿಸರ ಪ್ರೇಮಿ ಸಿ.ಎನ್. ಆಶೋಕ್, ವೆಂಕಟರಮಣ, ಬಿಜೆಪಿ ಕುಮಾರ್, ಮುಂತಾದವರು ಮಾತನಾಡಿ, ಬೃಹತ್ ತಿರಂಗ ಯಾತ್ರೆ ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯ. ದೇಶದ ಸೈನಿಕರ ಅವರ ಹೋರಾಟದ ಘೋಷಣೆಗಳನ್ನು, ದೇಶಭಕ್ತಿಯನ್ನು ಹೆಚ್ಚಿಸುವ ಘೋಷಣೆಗಳನ್ನು ಕೂಗುವುದು ರಾಷ್ಟ್ರಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗುವುದು, ದೇಶಕ್ಕೆ ಹೆಮ್ಮೆ ತರುವಂತೆ ನಡೆದುಕೊಳ್ಳುವುದು ಆಗಬೇಕೆಂಬ ಸಲಹೆಗಳು ಬಂತು. ಘೋಷವಾಕ್ಯ ಕರಪತ್ರ ಹಂಚಿಕೆ ಯಾಗಲಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ, ನಂತರ ಆಂಜನೇಯ ದೇವಾಲಯದ ಆವರಣದಲ್ಲಿ ಬೌದ್ಧಿಕ ಸಭೆ ನಡೆಸಲಾಗುವುದೆಂದು ಮನೋಹರ್ ತಿಳಿಸಿದ್ದಾರೆ.

ಮಾಜಿ ಸೈನಿಕ ಕ್ಯಾಪ್ಟನ್ ವೆಂಕಟೇಶ್ ನೇತೃತ್ವದಲ್ಲಿ ಕಳೆದ ನಾಲ್ಕು ವರ್ಷಗಳಿಂದ, ಸೈನ್ಯಕ್ಕೆ ಸೇರ ಬಯಸುವ ಯುವಕರಿಗೆ ತರಬೇತಿಯನ್ನು ತಾಲೂಕಿನಲ್ಲಿ ನೀಡಲಾಗುತ್ತಿದೆ. ತರಬೇತಿಯ ಸಂದರ್ಭದಲ್ಲಿ ಗಣಪತಿ ಪೆಂಡಾಲ್ ಸೇವಾ ಸಮಿತಿ ಹಾಗೂ ವಿವಿಧ ಸಂಘಟನೆಗಳು ಸಹಕಾರ ನೀಡುತ್ತಿರುವುದನ್ನು ಸ್ಮರಿಸಲಾಯಿತು. ಪಟ್ಟಣದ ಪುರಾತನವಾದ ಅಮಾನಿಕೆರೆಯನ್ನು ಸ್ವಚ್ಛಗೊಳಿಸುವ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿತು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮುಖ್ಯಸ್ಥರು ಹಲವು ಸಲಹೆಗಳನ್ನು ನೀಡಿದರು. ಸಭೆಯ ಆರಂಭ ಹಾಗೂ ಅಂತ್ಯದಲ್ಲಿ, ದೇಶದ ಸೈನಿಕರಿಗೆ ದೇಶಕ್ಕೆ ರಾಷ್ಟ್ರಧ್ವಜಕ್ಕೆ, ವಂದನೆ ಸಲ್ಲಿಸಿ ರಾಷ್ಟ್ರಗೀತೆ ಹಾಡಿ ಜೈಕಾರ ಕೂಗಿದರು.

==

ಫೋಟೋ ಶೀರ್ಷಿಕೆಚನ್ನರಾಯಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ನಡೆದ ತಿರಂಗ ಯಾತ್ರೆ ಕಾರ್ಯಕ್ರಮ ಆಯೋಜನೆ ಮಾಡಲು ನಡೆದ ಸರ್ವ ಪಕ್ಷಗಳ, ಸರ್ವ ಸಂಘಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಶಾಸಕ ಬಾಲಕೃಷ್ಣ ಮಾತನಾಡಿದರು.