ಎನ್ ಸಿಸಿ ರಾಷ್ಟ್ರೀಯ ವಾಯುಪಡೆ ಶಿಬಿರಕ್ಕೆ ಪಾಲಚಂಡ ತರುಣ್ ತಿಮ್ಮಯ್ಯ

| Published : Jun 11 2024, 01:37 AM IST

ಎನ್ ಸಿಸಿ ರಾಷ್ಟ್ರೀಯ ವಾಯುಪಡೆ ಶಿಬಿರಕ್ಕೆ ಪಾಲಚಂಡ ತರುಣ್ ತಿಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಾಯುಪಡೆಯ ಪೈಲಟ್‌ಗಳಿಗೆ ಅತ್ಯಾಧುನಿಕ ಯುದ್ಧ ವಿಮಾನಗಳ ಮೂರನೇ ಹಂತದ ಚಾಲನಾ ತರಬೇತಿ ನೀಡುವ ಕೇಂದ್ರ ಬೀದರ್‌ನ ವಾಯುಪಡೆ ತರಬೇತಿ ಕೇಂದ್ರದಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಮಡಿಕೇರಿ: ಇತ್ತೀಚೆಗೆ ಬೀದರ್‌ನಲ್ಲಿ ಎನ್.ಸಿ.ಸಿ ಆಯೋಜಿಸಿದ್ದ ರಾಷ್ಟ್ರೀಯ ವಾಯುಪಡೆ ಬೆಸುಗೆ ಶಿಬಿರ (National Airforce Attachment Camp- NAAC)ದಲ್ಲಿ ಎನ್.ಸಿ.ಸಿ ಕೆಡೆಟ್(ಏರ್ ವಿಂಗ್) ಪಾಲಚಂಡ ತರುಣ್ ತಿಮ್ಮಯ್ಯ ಭಾಗವಹಿಸಿ ವಿವಿಧ ತರಬೇತಿ ಪಡೆದಿದ್ದಾರೆ.

ವಾಯುಪಡೆಯ ಪೈಲಟ್‌ಗಳಿಗೆ ಅತ್ಯಾಧುನಿಕ ಯುದ್ಧ ವಿಮಾನಗಳ ಮೂರನೇ ಹಂತದ ಚಾಲನಾ ತರಬೇತಿಯನ್ನು ನೀಡುವ ಕೇಂದ್ರವಾದ ಬೀದರ್‌ನ ವಾಯುಪಡೆಯ ತರಬೇತಿ ಕೇಂದ್ರದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನ ಬಯೊಟೆಕ್ ಎರಡನೇ ವರ್ಷದ ವಿದ್ಯಾರ್ಥಿಯಾಗಿರುವ ತರುಣ್ ತಿಮ್ಮಯ್ಯ ಸೇರಿದಂತೆ ಕರ್ನಾಟಕ ಹಾಗು ಗೋವ ವಿಭಾಗದ 14 ಕೆಡೆಟ್‌ಗಳು ಈ ಶಿಬಿರದಲ್ಲಿ ಪಾಲ್ಗೊಂಡು ವಾಯುಪಡೆಯ ವಿವಿಧ ತರಬೇತಿಗಳನ್ನು ಪಡೆದುಕೊಂಡಿದ್ದಾರೆ.

ಶಿಬಿರದಲ್ಲಿ ಸೇನೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಾದ Air Force Common Admission test (AFCAT), Combined Difference Service (CDS), National Difference Academy (NDA), ಮತ್ತು Services Selection Board (SSB) ಮುಂತಾದ ಪರೀಕ್ಷೆಗೆ ಬೇಕಾದ ಮಾಹಿತಿ ಹಾಗು ತರಬೇತಿ ಕಾರ್ಯಾಗಾರ ಹಮ್ಮಿಕೊಂಡು ಕೆಡೆಟ್‌ಗಳಿಗೆ ತರಬೇತಿ ನೀಡಲಾಯಿತು. ವಾಯುಸೇನೆಯ ನುರಿತ ಅಧಿಕಾರಿಗಳು, ಕೆಡೆಟ್‌ಗಳಿಗೆ ಭಾರತೀಯ ವಾಯುಪಡೆ ಹಾಗು ಯುದ್ಧವಿಮಾನ ಪೈಲೆಟ್ ಆಗಲು ಬೇಕಾದ ಮಾಹಿತಿ ನೀಡಿ ಉತ್ತೇಜಿಸಲಾಯಿತು.

ತರುಣ್ ತಿಮ್ಮಯ್ಯ ಮೂಲತಃ ಪಾಲಂಗಾಲ ನಿವಾಸಿಯಾಗಿ ಗೋಣಿಕೊಪ್ಪದಲ್ಲಿ ನೆಲೆಸಿರುವ ಪಾಲಚಂಡ ಜೀವಿತ್ ಮಂದಣ್ಣ ಹಾಗು ಪುಷ್ಪ ದಂಪತಿಗಳ ಪುತ್ರರಾಗಿದ್ದಾರೆ.