ಸಾರಾಂಶ
ತ್ರಿಪಿಟಕ ಪಠಣವು 2600 ವರ್ಷಗಳಷ್ಟು ಹಿಂದಿನ ಬುದ್ಧನ ಕಾಲದ ಸಂಪ್ರದಾಯವಾಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಅಂತಾರಾಷ್ಟ್ರೀಯ ಬೌದ್ಧ ತ್ರಿಪಿಟಕ ಪಾಲಿ ಪಠಣ ಕಾರ್ಯಕ್ರಮವನ್ನು ನಗರದ ಮಹಾಬೋಧಿ ಶಾಲೆಯಲ್ಲಿ ಇತ್ತೀಚೆಗೆ ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ 10 ದೇಶಗಳ 120 ಬೌದ್ಧ ಸನ್ಯಾಸಿಗಳು ಬುದ್ಧನ ಪವಿತ್ರ ಬೋಧನೆಗಳಾದ ತ್ರಿಪಿಟಕವನ್ನು ಪಠಿಸಿದರು.
ಮಹಾಬೋಧಿ ಶಾಲೆಯ ಕಾರ್ಯನಿರ್ವಾಹಕ ಅಧಿಕಾರಿ ವಾಂಗ್ಡಸ್ ಜ್ಯೋತಿ ಮಾತನಾಡಿ, ತ್ರಿಪಿಟಕ ಪಠಣವು 2600 ವರ್ಷಗಳಷ್ಟು ಹಿಂದಿನ ಬುದ್ಧನ ಕಾಲದ ಸಂಪ್ರದಾಯವಾಗಿದೆ. ಭಾರತದಲ್ಲಿ ಈ ಪವಿತ್ರ ಆಚರಣೆಯನ್ನು ವೀಕ್ಷಿಸಲು ಮತ್ತು ಮುಂದುವರಿಸಲು ನಾವು ಅದೃಷ್ಟಶಾಲಿಗಳಾಗಿದ್ದೇವೆ ಎಂದು ತಿಳಿಸಿದರು. ಡಿಸೆಂಬರ್ 2 ರಂದು ಬೋಧಗಯಾದಲ್ಲಿ ತ್ರಿಪಿಟಕ ಪಾಲಿ ಪಠಣ ಪ್ರಾರಂಭವಾಯಿತು. ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲಿ ಪಠಣವನ್ನು ಪೂರ್ಣಗೊಳಿಸಿದ ನಂತರ, ಸನ್ಯಾಸಿಗಳು ಮತ್ತು ಭಕ್ತರು ಫೆ.14ರಂದು ಮೈಸೂರಿಗೆ ಆಗಮಿಸಿದರು. ಬೆಂಗಳೂರಿನ ಮಹಾ ಬೋಧಿ ಸೊಸೈಟಿಯ ಸಹಯೋಗದೊಂದಿಗೆ ಮಹಾಬೋಧಿ ಶಾಲೆ ಕಾರ್ಯಕ್ರಮವನ್ನು ಆಯೋಜಿಸಿತ್ತು.