ಸುಡಗಾಡ ಸಿದ್ದರ ಕಾಲೋನಿಗೆ ಪಲ್ಲವಿ ಜಿ.ಭೇಟಿ

| Published : Oct 07 2025, 02:00 AM IST

ಸುಡಗಾಡ ಸಿದ್ದರ ಕಾಲೋನಿಗೆ ಪಲ್ಲವಿ ಜಿ.ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಧೋಳ: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರು ತಾಲೂಕಿನ ಲೊಕಾಪೂರ ಗ್ರಾಮದ ಸುಡುಗಾಡು ಸಿದ್ಧರ ಕಾಲೋನಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿಯ ಅಲೆಮಾರಿ ಸುಡುಗಾಡು ಸಿದ್ದ ಸಮುದಾಯದ ಕುಟುಂಬಗಳು ವಾಸಿಸುತ್ತಿರುವ ಸ್ಥಳವನ್ನು ವೀಕ್ಷಣೆ ಮಾಡಿ ಕುಂದು ಕೊರತೆ ಆಲಿಸಿದರು.

ಮುಧೋಳ: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರು ತಾಲೂಕಿನ ಲೊಕಾಪೂರ ಗ್ರಾಮದ ಸುಡುಗಾಡು ಸಿದ್ಧರ ಕಾಲೋನಿಗೆ ಭೇಟಿ ನೀಡಿ ಪರಿಶಿಷ್ಟ ಜಾತಿಯ ಅಲೆಮಾರಿ ಸುಡುಗಾಡು ಸಿದ್ದ ಸಮುದಾಯದ ಕುಟುಂಬಗಳು ವಾಸಿಸುತ್ತಿರುವ ಸ್ಥಳವನ್ನು ವೀಕ್ಷಣೆ ಮಾಡಿ ಕುಂದು ಕೊರತೆ ಆಲಿಸಿದರು. ಕೊರಮ ಸಮಾಜದ ಸಮುದಾಯದ ಭವನಕ್ಕೆ ಭೇಟಿ ನೀಡಿ ಪರಿಶಿಲಿಸಿದರು. ಮುಧೋಳ ತಹಸೀಲ್ದಾರ, ತಾಪಂ ಇಒ, ಪಪಂ ಮುಖ್ಯಾಧಿಕಾರಿ, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.