ಸಾರಾಂಶ
ಗ್ರಾಹಕರು ಕೆನರಾ ಬ್ಯಾಂಕ್ ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಕಾಲದಲ್ಲಿ ಪಡೆದ ಸಾಲ ಮರುಪಾವತಿಗೆ ಮುಂದಾಗಿ ಬ್ಯಾಂಕ್ ಅಭ್ಯುದಯಕ್ಕೆ ಸಹಕರಿಸಬೇಕು ಎಂದು ಮೈಸೂರು ಕೆನರಾ ಬ್ಯಾಂಕ್ ಕ್ಷೇತ್ರಿಯಕಚೇರಿಯ ಎಜಿಎಂ ಟಿ .ಎಸ್. ಉಮೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಗ್ರಾಹಕರು ಕೆನರಾ ಬ್ಯಾಂಕ್ ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಕಾಲದಲ್ಲಿ ಪಡೆದ ಸಾಲಮರುಪಾವತಿಗೆ ಮುಂದಾಗಿ ಬ್ಯಾಂಕ್ ಅಭ್ಯುದಯಕ್ಕೆ ಸಹಕರಿಸಬೇಕು ಎಂದು ಮೈಸೂರು ಕೆನರಾ ಬ್ಯಾಂಕ್ ಕ್ಷೇತ್ರಿಯ
ಕಚೇರಿಯ ಎಜಿಎಂ ಟಿ .ಎಸ್. ಉಮೇಶ್ ಹೇಳಿದರು.ತಾಲೂಕಿನ ಪಾಳ್ಯ ಗ್ರಾಮದಲ್ಲಿದ್ದ ಕೆನರಾ ಬ್ಯಾಂಕ್ ಶಾಖೆಯ ಕಟ್ಟಡವನ್ನು ಸ್ಥಳಾಂತರ ಹಿನ್ನೆಲೆ ನಡೆದ ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿ, ಕಳೆದ ಹಲವಾರು ವರುಷಗಳ ಹಿಂದೆ ಮುಖ್ಯ ರಸ್ತೆಯಲ್ಲೆ ನಮ್ಮ ಬ್ಯಾಂಕ್ ಕಚೇರಿ ಕಾರ್ಯನಿರ್ವಹಿಸುತ್ತಿತ್ತು, ಇಲ್ಲಿ ಗಾಳಿ ಬೆಳಕು ಸೇರಿದಂತೆ ಅನೇಕ ಸೌಲಭ್ಯಗಳಿಲ್ಲದಿದ್ದರೂ ಸಹಾ ಗ್ರಾಹಕರ ಹಿತದೖಷ್ಟಿಯಿಂದ ನಮ್ಮ ಶಾಖೆಯ ಸಿಬ್ಬಂದಿಗಳ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಸೌಲಭ್ಯಗಳುಳ್ಳನೂತನ ಕಟ್ಟಡ ದೊರೆತ ಹಿನ್ನೆಲೆ ಸ್ಥಳಾಂತರಿಸಲಾಗಿದೆ. ಗ್ರಾಹಕರು ಈಗಿದ್ದ ಶಾಖೆಯಿಂದ ನೂರು ಮೀಟರ್ ದೂರದಲ್ಲೆ ಶಾಖಾ ಕಚೇರಿ ಸ್ಛಳಾಂತರ ಹಿನ್ನೆಲೆ ಗೊಂದಲಕ್ಕೊಳಗಾಗದೆ ನೂತನ ಬ್ಯಾಂಕ್ ಕಟ್ಟಡಕ್ಕೆ ಆಗಮಿಸಿ ಬ್ಯಾಂಕ್ ಸೌಲಭ್ಯ ಸದ್ಬಳಕೆಗೆ ಮುಂದಾಗಬೇಕು ಎಂದರು.
ವ್ಯವಸ್ಥಾಪಕರಾದ ರಮಣಿಕ್ ಜೀರೋಟ ಮಾತನಾಡಿ, ನಮ್ಮ ಬ್ಯಾಂಕಿನ ಹಳೆಯ ಕಟ್ಟಡವನ್ನು ಸ್ಥಳಾಂತರಿಸುವ ಹಿನ್ನೆಲೆ ಈಗಿದ್ದ ಕಟ್ಟಡದಿಂದ ನೂರು ಮೀಟರ್ ದೂರಕ್ಕೆ ಆಗಮಿಸುವ ಮೂಲಕ ಸಹಕರಿಸಬೇಕು, ಬ್ಯಾಂಕ್ ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಈವೇಳೆ ಡೆಪ್ಯೂಟಿ ಮ್ಯಾನೇಜರ್ ಉತ್ತಮ್, ಶರಣ ಬಸಪ್ಪ ಮೇತ್ರಿ ಇನ್ನಿತರಿದ್ದರು;Resize=(128,128))
;Resize=(128,128))
;Resize=(128,128))