ಸಾರಾಂಶ
ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರೈತ ಸಂಘ ನಡೆಸುತ್ತಿರುವ ಕರಪತ್ರ ಚಳವಳಿ ಸಂಬಂಧ ಬಿಜೆಪಿ ಕಾರ್ಯಕರ್ತರು ಹಾಗೂ ರೈತ ಸಂಘದ ಕಾರ್ಯಕರ್ತರ ನಡುವೆ ಬುಧವಾರ ಚಾಮರಾಜನಗರದಲ್ಲಿ ಜಟಾಪಟಿ ನಡೆಯಿತು.
ಚಾಮರಾಜನಗರ: ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರೈತ ಸಂಘ ನಡೆಸುತ್ತಿರುವ ಕರಪತ್ರ ಚಳವಳಿ ಸಂಬಂಧ ಬಿಜೆಪಿ ಕಾರ್ಯಕರ್ತರು ಹಾಗೂ ರೈತ ಸಂಘದ ಕಾರ್ಯಕರ್ತರ ನಡುವೆ ಬುಧವಾರ ಚಾಮರಾಜನಗರದಲ್ಲಿ ಜಟಾಪಟಿ ನಡೆಯಿತು.
ಚಾಮರಾಜನಗರದ ಮಾರಿಗುಡಿ ಸುತ್ತಮುತ್ತ ರೈತಸಂಘದ ಮೋದಿಗೆ ಮತ ಹಾಕಬೇಡಿ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮತ್ತು ಉಪಾಧ್ಯಕ್ಷ ಎ.ಎಂ. ಮಹೇಶ್ ಪ್ರಭು ನೇತೃತ್ವದಲ್ಲಿ ಕರಪತ್ರ ಹಂಚುತ್ತಿದ್ದರು. ವಿಚಾರ ತಿಳಿದ , ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿ ಅಭಿಮಾನಿಗಳು ರೈತ ಸಂಘದ ಕಚೇರಿಯತ್ತ ತೆರಳಿ ಆಕ್ರೋಶ ಹೊರಹಾಕಿದರು.ಈ ವೇಳೆ ರೈತ ಸಂಘ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ಮಟ್ಟಕ್ಕೆ ಮುಟ್ಟಿತ್ತು. ಕೂಡಲೇ, ಚುನಾವಣಾ ಸಿಬ್ಬಂದಿ ಮತ್ತು ಪೊಲೀಸರು ಮಧ್ಯ ಪ್ರವೇಶಿಸಿ ಬಿಜೆಪಿ ಕಾರ್ಯಕರ್ತರನ್ನು ಶಾಂತಗೊಳಿಸಿ ವಾಪಾಸ್ ಕಳುಹಿಸಿದರು.
ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರೈತ ಸಂಘ ನಡೆಸುತ್ತಿರುವ ಕರಪತ್ರ ಚಳವಳಿಗೆ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ತಡೆವೊಡ್ಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ. ಇದರ ವಿರುದ್ಧ ರೈತ ಸಂಘದ ವತಿಯಿಂದ ಸಭೆ ನಡೆಸಿ ಹೋರಾಟ ರೂಪಿಸಲಾಗುವುದು ಮತ್ತು ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಾಗುವುದು.ಎ.ಎಂ. ಮಹೇಶ್ ಪ್ರಭು, ರಾಜ್ಯ ಉಪಾಧ್ಯಕ್ಷ, ರೈತ ಸಂಘ ಚಾಮರಾಜನಗರ
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))