ಸಾರಾಂಶ
ರಾಮನಗರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಜಿಲ್ಲೆಯಲ್ಲಿ ಲಕ್ಷಾಂತರ ಜನರಿಗೆ ಸೌಲಭ್ಯ ದೊರಕುತ್ತಿದ್ದು, ಇದರ ಒಟ್ಟಾರೆ ಮೊತ್ತ 1,626 ಕೋಟಿ ರುಪಾಯಿಗಳನ್ನು ಭರಿಸಲಾಗಿದೆ.
ಐದು ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ , ಶಕ್ತಿ, ಯುವನಿಧಿ, ಅನ್ನಭಾಗ್ಯ ಹಾಗೂ ಗೃಹಜ್ಯೋತಿ ಯೋಜನೆಗಳು ಯಾವುದೇ ಮಧ್ಯವರ್ತಿ ಇಲ್ಲದೆ, ಯಾರ ಹಸ್ತಕ್ಷೇಪವು ಇಲ್ಲದೆ ಶೇಕಡ 97 ಫಲಾನುಭವಿಗಳಿಗೆ ನೇರವಾಗಿ ತಲುಪಿವೆ.ಮಹಿಳೆಯರ ಆರ್ಥಿಕ ಸಬಲೀಕರಣ :
ಗೃಹ ಲಕ್ಷ್ಮಿ ಯೋಜನೆಯು ಪ್ರಾರಂಭವಾದ 2023ರ ಆಗಸ್ಟ್ ನಿಂದ 2025ರ ಆಗಸ್ಟ್ ತಿಂಗಳವರೆಗೆ ಜಿಲ್ಲೆಯ 2,80,673 ಯಜಮಾನಿಯರಿಗೆ ಗೃಹಲಕ್ಷ್ಮಿ ಮೂಲಕ ಮಾಸಿಕ ಸುಮಾರು 1104 ಕೋಟಿ ರು.ಗಳನ್ನು 21 ಕಂತುಗಳಲ್ಲಿ ನೀಡಲಾಗಿದೆ. ಫಲಾನುಭವಿಗಳ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಹಣ ಜಮೆ ಮಾಡಲಾಗುತ್ತಿದೆ.ಚನ್ನಪಟ್ಟಣ ತಾಲೂಕಿನ 67,495 ಫಲಾನುಭವಿಗಳಿಗೆ 264 ಕೋಟಿ 91 ಲಕ್ಷ ರು., ಕನಕಪುರ ತಾಲೂಕಿನಲ್ಲಿ 92,367 ಫಲಾನುಭವಿಗಳಿಗೆ 366 ಕೋಟಿ 97 ಲಕ್ಷ ರು., ಮಾಗಡಿ ತಾಲೂಕಿನಲ್ಲಿ 53,200 ಫಲಾನುಭವಿಗಳಿಗೆ 210 ಕೋಟಿ 57 ಲಕ್ಷ ಹಾಗೂ ರಾಮನಗರ ತಾಲೂಕಿನಲ್ಲಿ 67,611 ಫಲಾನುಭವಿಗಳಿಗೆ 261 ಕೋಟಿ 77 ಲಕ್ಷ ರುಪಾಯಿಗಳನ್ನು ಸಂದಾಯ ಮಾಡಲಾಗಿದೆ.
ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಸೂಕ್ತ ಸಮಯಕ್ಕೆ ಖಾತೆಗೆ ಹಣ ಜಮೆಯಾಗುತ್ತಿಲ್ಲ ಎಂಬ ಆರೋಪಗಳು ಇದೆ. ಕೆಲವೊಂದು ಸಂದರ್ಭದಲ್ಲಿ ತಡವಾಗಿ ಹಣ ಪಾವತಿ ಮಾಡಲಾಗುತ್ತಿದೆ. ಆದರೆ, ಸೂಕ್ತ ಸಮಯದಲ್ಲಿ ಹಣ ಪಾವತಿ ಮಾಡಲಾಗುತ್ತಿದೆ. ಕೆಲವೊಮ್ಮೆ ತಾಂತ್ರಿಕ ಕಾರಣಕ್ಕಾಗಿ ಸಮಸ್ಯೆ ಆಗಿದೆ ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ವಾದವಾಗಿದೆ.ಶಕ್ತಿ ಯೋಜನೆಗೆ 252ಕೋಟಿ ಪಾವತಿ:
ಶಕ್ತಿ ಯೋಜನೆಯಡಿ 8ಕೋಟಿ 84 ಲಕ್ಷ ಮಹಿಳಾ ಫಲಾನುಭವಿಗಳು ಸಾರಿಗೆ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದು, 26 ತಿಂಗಳಲ್ಲಿ 252 ಕೋಟಿ ರುಪಾಯಿಗಳನ್ನು ರಾಜ್ಯ ಸರ್ಕಾರ ಮಹಿಳೆಯರ ಪ್ರಯಾಣಕ್ಕೆ ಒದಗಿಸಿದೆ. ಕನಕಪುರ ತಾಲೂಕಿನಲ್ಲಿ 2,05,85,111 ಪ್ರಯಾಣಿಕರ ಮೊತ್ತ 63 ಕೋಟಿ 54 ಲಕ್ಷ ರು., ಚನಪಟ್ಟಣ ತಾಲೂಕಿನಲ್ಲಿ 2 ಕೋಟಿ 20 ಲಕ್ಷ ಪ್ರಯಾಣಿಕರಿಗೆ 58 ಕೋಟಿ 25 ಲಕ್ಷ ರು., ಹಾರೋಹಳ್ಳಿ ತಾಲೂಕಿನಲ್ಲಿ 1 ಕೋಟಿ 12 ಲಕ್ಷ ಪ್ರಯಾಣಿಕರಿಗೆ 38 ಕೋಟಿ 34 ಲಕ್ಷ ರು., ರಾಮನಗರ ತಾಲೂಕಿನಲ್ಲಿ 2 ಕೋಟಿ 13 ಲಕ್ಷ ಪ್ರಯಾಣಿಕರಿಗೆ 49 ಕೋಟಿ 60 ಲಕ್ಷ ರು . ಹಾಗೂ ಮಾಗಡಿ ತಾಲೂಕಿನಲ್ಲಿ 1 ಕೋಟಿ 32 ಲಕ್ಷ ಪ್ರಯಾಣಿಕರ 43 ಕೋಟಿ 13 ಲಕ್ಷ ರುಪಾಯಿಗಳನ್ನು ಸರ್ಕಾರ ಭರಿಸಿದೆ.3 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ :
ಯುವನಿಧಿ ಯೋಜನೆ ಅಡಿಯಲ್ಲಿ 2024ರ ಜನವರಿಯಿಂದ 2025ರ ಜುಲೈ ತಿಂಗಳವರೆಗೆ 3109 ಡಿಪ್ಲೋಮಾ ಹಾಗೂ ಪದವೀಧರ ಫಲಾನುಭವಿಗಳಿಗೆ 8 ಕೋಟಿ 27 ಲಕ್ಷ ರುಪಾಯಿ ನೇರ ನಗದು ವರ್ಗಾವಣೆ ಮಾಡಲಾಗಿದೆ. ಈಗ 2025ರ ಸೆ.23ರವರೆಗೆ ಜಿಲ್ಲೆಯಲ್ಲಿ ಒಟ್ಟು 3851 ಜನ ಪದವೀಧರರು ನೋಂದಣಿ ಮಾಡಿಕೊಂಡಿದ್ದಾರೆ.ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಗಳ 1ಕೋಟಿ 50 ಲಕ್ಷ ಫಲಾನುಭವಿಗಳಿಗೆ ಅನುಕೂಲ ಪಡೆದಿದ್ದು, ಇದಕ್ಕಾಗಿ 247 ಕೋಟಿ 46 ಲಕ್ಷ ರುಪಾಯಿ ಪಾವತಿಸಲಾಗಿದೆ. 2025ರ ಜನವರಿ ತಿಂಗಳ ಡಿಬಿಟಿ ಅನುದಾನ ಬಿಡುಗಡೆಯಾಗಿಲ್ಲ. ಸರ್ಕಾರದ ಆದೇಶದಂತೆ ಫೆಬ್ರವರಿ ತಿಂಗಳಿಂದ ನೇರ ನಗದು ವರ್ಗಾವಣೆ ಬದಲಾಗಿ ತಲಾ 5 ಕೇಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯ 3,29,942 ಗ್ರಾಹಕರ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಸಲುವಾಗಿ 14 ಕೋಟಿ ರುಪಾಯಿಗಳನ್ನು ಸರ್ಕಾರ ಬೆಸ್ಕಾಂಗೆ ಸಂದಾಯ ಮಾಡಿದೆ. ಈ ಯೋಜನೆಯಲ್ಲಿ ಅರ್ಹ ಫಲಾನುಭವಿಗಳು 13.57 ಮಿಲಿಯನ್ ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದಾರೆ.ಕೋಟ್ .............
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಶೇಕಡ 97 ರಷ್ಟು ಜನರು ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದು, ಪಕ್ಷಬೇಧ ಹಾಗೂ ಜಾತಿ ಬೇಧವಿಲ್ಲದೆ ಎಲ್ಲ ವರ್ಗದ ಜನರು ಇದರ ಲಾಭ ಪಡೆಯುತ್ತಿದ್ದಾರೆ. ಈ ಯೋಜನೆಯಗಳಿಂದ ಉದ್ಯೋಗ ಸೃಷ್ಟಿಯಾಗುವ ಜೊತೆಗೆ ಆರ್ಥಿಕ ವಹಿವಾಟು ಕೂಡ ಹೆಚ್ಚಾಗಿದೆ.- ಕೆ.ರಾಜು, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ.
ಬಾಕ್ಸ್..............ಯೋಜನೆಗಳುಫಲಾನುಭವಿಗಳ ಸಂಖ್ಯೆಪಾವತಿಯಾದ ಮೊತ್ತ (ರು.ಗಳಲ್ಲಿ)
ಗೃಹಲಕ್ಷ್ಮಿ2,80,6731104,24,16,000ಗೃಹ ಜ್ಯೋತಿ3,29,94214,03,00,000
ಯುವ ನಿಧಿ3,8518,27,16,000ಶಕ್ತಿ ಯೋಜನೆ8,84,84,305252,87,37,730
ಅನ್ನಭಾಗ್ಯ 1,50,00,270247,46,41,000ಒಟ್ಟು 10,40,99,041 1626,88,10,730
25ಕೆಆರ್ ಎಂಎನ್ 5,6.ಜೆಪಿಜಿ5.ಪಂಚ ಗ್ಯಾರಂಟಿ ಲೋಗೋ
6.ಕೆ.ರಾಜು, ಜಿಲ್ಲಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ