ಸಾರಾಂಶ
ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಆಡಳಿತ ಮಂಡಳಿಗೆ ಜರುಗಿದ ಚುನಾವಣೆಯಲ್ಲಿ ಸತತ 7ನೇ ಬಾರಿಗೆ ಸಂಸ್ಥೆಯ ಸಂಸ್ಥಾಪಕ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕಲಗೌಡ ನಿಂಗನೂರಿ ನೇತೃತ್ವದಲ್ಲಿ ಅವಿರೋಧ ಆಯ್ಕೆ ಜರುಗಿದೆ.
ಕನ್ನಡಪ್ರಭ ವಾರ್ತೆ ಸಂಕೇಶ್ವರ
ಸಮೀಪದ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಆಡಳಿತ ಮಂಡಳಿಗೆ ಜರುಗಿದ ಚುನಾವಣೆಯಲ್ಲಿ ಸತತ 7ನೇ ಬಾರಿಗೆ ಸಂಸ್ಥೆಯ ಸಂಸ್ಥಾಪಕ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕಲಗೌಡ ನಿಂಗನೂರಿ ನೇತೃತ್ವದಲ್ಲಿ ಅವಿರೋಧ ಆಯ್ಕೆ ಜರುಗಿದೆ.ಸಂಸ್ಥೆಯ ಪಂಚವಾರ್ಷಿಕ ಚುನಾವಣೆಯಲ್ಲಿ ನಿರ್ದೇಶಕರಾಗಿ ಕಲಗೌಡ ನಿಂಗನೂರಿ, ಮಲಗೌಡ ಪಾಟೀಲ. ಸಾತಪ್ಪ ಕಾರತಗಿ, ಬಸವಣ್ಣೆ ಹೆಗ್ಗಾಯಿ, ಬಾಳಗೌಡ ಪಾಟೀಲ, ಮಲ್ಲಪ್ಪ ಮುತ್ನಾಳಿ, ಶಿವಪ್ಪ ಖೋತ, ಸುಶೀಲಾ ಸೋಲ್ಲಾಪುರೆ, ಲಕ್ಷ್ಮೀ ಬಾಡ, ಮಾರುತಿ ನಂದಿಹಳ್ಳಿ, ಹಸನಸಾಬ ಮಕಾನದಾರ, ಗುಂಡು ಘಟೇಕರಿ ಸೇರಿದಂತೆ 12 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಜಿ.ಎಸ್.ವಾಲಿ ಘೋಷಿಸಿದರು.
ಬಳಿಕ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಲಗೌಡ ನಿಂಗನೂರಿ ಹಾಗೂ ಮಲಗೌಡ ಪಾಟೀಲ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.ಚುನಾವಣಾಧಿಕಾರಿ ಜಿ.ಎಸ್.ವಾಲಿ ಮಾತನಾಡಿ, ಸಹಕಾರ ಸಂಸ್ಥೆಯೂ ಕಳೆದ 33 ವ?ರ್ಗಳಿಂದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗುತ್ತಿರುವುದು ಆಡಳಿತ ಮಂಡಳಿ ಹಾಗೂ ಸಂಸ್ಥಾಪಕ ಕಲಗೌಡ ನಿಂಗನೂರಿ ಪ್ರಾಮಾಣಿಕ ಸೇವೆಗೆ ಸಹಕಾರ ರತ್ನ ಹಾಗೂ ಅಂತರಾಜ್ಯ ಸಾಮಾಜಿಕ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ರಮೇಶ ಹುದ್ದಾರ, ಆನಂದ ಸೊಲ್ಲಾಪುರಿ, ಶಿವಾನಂದ ಜರಳಿ, ಶಿವಾನಂದ ಸೂಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.